ಶ್ರೀಲಂಕಾ ಬಾಂಬ್​ ಸ್ಪೋಟದಲ್ಲಿ ಮೈಸೂರಿಗರು ಪಾರು! ಸಾವಿನ ದವಡೆಯಿಂದ ಸೇಫಾಗಿ ಬಂದ ಪ್ರವಾಸಿಗರು!!

ಮೂರು ದಿನಗಳ ಹಿಂದೆ ಈಸ್ಟರ್​ ಭಾನುವಾರದಂದು ಶ್ರೀಲಂಕಾದಲ್ಲಿ ನಡೆದ ಸರಣಿ ಬಾಂಬ್​ ಸ್ಫೋಟ  ದಿನಕ್ಕೊಂದು ತಿರುವು ಪಡೆಯುತ್ತಿದೆ. ಇಂದು ಮತ್ತೆ ದ್ವೀಪರಾಷ್ಟ್ರದಲ್ಲಿ ಮತ್ತೊಂದು ಬಾಂಬ್​ ಸ್ಪೋಟ ಸಂಭವಿಸಿದೆ ಎಂಬುವ ಮಾಹಿತಿ ಹೊರಬಿದ್ದಿದೆ. ಈ ಮಧ್ಯೆ ಬಾಂಬ್​ ಸ್ಪೋಟದಲ್ಲಿ ಹಲವು ಕನ್ನಡಿಗರು ಸಾವನ್ನಪ್ಪಿದ ಬೆನ್ನಲ್ಲೇ, ಮೈಸೂರಿನ ಒಂದಿಷ್ಟು ಪ್ರವಾಸಿಗರು  ಹುಶಾರಾಗಿ ನಗರಕ್ಕೆ ವಾಪಸ್ಸಾಗಿದ್ದು, ಕುಟುಂಬಸ್ಥರು  ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ad

 

ಶ್ರೀಲಂಕಾದಲ್ಲಿ  ನಡೆದ ಭೀಕರ ಬಾಂಬ್ ಸ್ಪೋಟದಿಂದ ತಪ್ಪಿಸಿಕೊಂಡು ಮೈಸೂರಿನ 5ಕುಟುಂಬದ 14ಮಂದಿ ಕೊನೆಗೂ ತಾಯ್ನಾಡಿಗೆ ವಾಪಸ್ಸಾಗಿದ್ದಾರೆ. ಬಾಂಬ್​ ಸ್ಪೋಟದ  3 ದಿನಗಳ ಬಳಿಕ ಬಿಜೆಪಿ ಮುಖಂಡ ಮೈ.ವಿ.ರವಿಶಂಕರ್ ಸೇರಿ 14 ಮಂದಿ ತಡರಾತ್ರಿ ಸುರಕ್ಷಿತವಾಗಿ ಮೈಸೂರಿಗೆ ಬಂದಿಳಿದಿದ್ದಾರೆ. ಸದ್ಯ ಸಾವಿನ ದವಡೆಯಿಂದ ಮೈಸೂರಿನ 14ಮಂದಿ ಸೇಫ್​ ಆಗಿದ್ದು, ನಿಟ್ಟುಸಿರು ಬಿಟ್ಟಿದ್ದಾರೆ.

ಇನ್ನು, ಬಾಂಬ್ ಬ್ಲಾಸ್ಟ್ ಆದ ಶಾಂಗ್ರಿಲಾ ಹೋಟೆಲ್​​ನ ಸ್ವಲ್ಪ ದೂರದಲ್ಲಿದ್ದ ಬರ್ಜಾಯಾ ರಾಯಲ್ ಮೌಂಟ್ ಹೋಟೆಲ್​​ನಲ್ಲಿ ಈ ಕುಟುಂಬ ಉಳಿದುಕೊಂಡಿತ್ತು. ಸದ್ಯ ಕೂದಲೆಳೆಯಲ್ಲಿ ಪಾರಾಗಿರೋದಾಗಿದ್ದು, ಸೇಫ್ ಆಗಿ ಭಾರತಕ್ಕೆ ವಾಪಸ್ಸಾಗಿದ್ದಾರೆ.

ಈ ನಡುವೆಯೇ ಮತ್ತೊಂದು ಬಾಂಬ್​ ಸ್ಪೋಟಿಸಿದ್ದು, ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಕೊಲೊಂಬೋದಿಂದ 40 ಕಿ.ಮೀ ದೂರವಿರುವ ಪುಗೊಡಾ ನಗರದ ಮ್ಯಾಜಿಸ್ಟ್ರೇಟ್​ ನ್ಯಾಯಾಲಯದ ಹಿಂದೆ ಇರುವ ಬಯಲು ಪ್ರದೇಶದಲ್ಲಿ ಬಾಂಬ್​ ಸ್ಫೋಟಗೊಂಡಿದೆ ಎಂದು ಪೊಲೀಸರು  ತಿಳಿಸಿದ್ದು  ಸ್ಥಳದಲ್ಲಿ ಯಾವುದೇ  ಪ್ರಾಣ ಹಾನಿಯಾಗದಿರುವುದು ಸಂತೋಷದ ಸಂಗತಿಯಾಗಿದೆ.