ಬಡ್ತಿ ಮೀಸಲು ಜಾರಿಗೊಳಿಸಿದ ರಾಜ್ಯ ಸರಕಾರ !! ಲಕ್ಷಾಂತರ ಸರಕಾರಿ ನೌಕರರ ದ್ವನಿಯಾಗಿದ್ದ Btv !! ಸರಕಾರಿ ಕಚೇರಿಗಳಲ್ಲಿ ಮನೆ ಮಾಡಿದ ಸಂಭ್ರಮ !!

ಹಲವಾರು ದಿನಗಳ ಬೇಡಿಕೆಯಾಗಿದ್ದ ಬಡ್ತಿ ಮೀಸಲಾತಿ ಆಧಾರದ ಮೇಲೆ ಬಡ್ತಿ ನೀಡುವ ಕಾಯಿದೆ ಜಾರಿಗೆ ಇಂದು ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಕಾಯ್ದೆಗೆ ಸುಪ್ರೀಂ ಕೋರ್ಟ್‌ ಹಸಿರು ನಿಶಾನೆ ತೋರಿದ ಬಳಿಕ ಇಂದು ಆದೇಶ ಜಾರಿಯಾಗಿದ್ದು, ಲಕ್ಷಾಂತರ ಸರಕಾರಿ ನೌಕರರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ad


ಕಳೆದ ಸರಕಾರದಲ್ಲಿ ವಿಧಾನಮಂಡಲದಲ್ಲಿ ಅಂಗೀಕೃತವಾಗಿದ್ದ ಬಡ್ತಿ ಮೀಸಲಾತಿ ಜಾರಿಯಾಗದೇ ಹಾಗೇ ಉಳಿದುಕೊಂಡಿತ್ತು. ಬಡ್ತಿ ಮೀಸಲಾತಿ ಜಾರಿಗೊಳಿಸುವಂತೆ ಬಿಟಿವಿಯು ಲಕ್ಷಾಂತರ ನೌಕರರ ದ್ವನಿಯಾಗಿ ಅಭಿಯಾನ ನಡೆಸಿತ್ತು. ಅಂತಿಮವಾಗಿ ಸುಪ್ರಿಂ ಕೋರ್ಟ್ ಕೂಡಾ ಕಾಯ್ದೆಗೆ ಅಸ್ತು ಎಂದಿದ್ದು ಇಂದು ಸರಕಾರದಿಂದ ಅಧಿಕೃತವಾಗಿ ಆದೇಶವಾಗಿದೆ. ಮೀಸಲಾತಿಗಾಗಿ ಕಾಯುತ್ತಿರುವ ಸಾವಿರಾರು ಎಸ್‌ಸಿ ಎಸ್‌ಟಿ ನೌಕರರಿಗೆ ರಾಜ್ಯ ಸರಕಾರದ ಈ ಆದೇಶ ನೆರವಾಗಲಿದೆ.

ಎಸ್‌ಸಿ ಎಸ್‌ಟಿ ಬಸ್ತಿ ಮೀಸಲಾತಿಗೆ ರಾಜ್ಯ ಸಚಿವ ಸಂಪುಟ ಕಳೆದ ಫೆಬ್ರವರಿಯಲ್ಲಿ ಅನುಮೋದನೆ ನೀಡಿತ್ತು. ಈ ಕಾಯಿದೆಗೆ ರಾಷ್ಟ್ರಪತಿಗಳ ಅನುಮೋದನೆ ಕೂಡ ಸಿಕ್ಕಿತ್ತು. ಆದರೆ ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗಿತ್ತು. ಸರ್ಕಾರಿ ನೌಕರಿಗಳ ಬಡ್ತಿಯಲ್ಲಿ ಪರಿಶಿಷ್ಠ ಜಾತಿ ಮತ್ತು ಪಂಗಡಗಳ ನೌಕರರಿಗೆ ರೂಪಿಸಿದ್ದ ಮೀಸಲಾತಿ ಕಾಯ್ದೆಯನ್ನು ಸರ್ವೋಚ್ಛ ನ್ಯಾಯಾಲಯ ಕೂಡಾ ಎತ್ತಿಹಿಡಿದಿತ್ತು. ಇದೀಗ ರಾಜ್ಯ ಸರಕಾರ ಅಧಿಕೃತ ಆದೇಶ ಜಾರಿಗೊಳಿಸಿದೆ.