ಎಂ.ಬಿ.ಪಾಟೀಲ್​ ವಿರುದ್ಧ ಹೇಳಿಕೆ ಆರೋಪ! ಬಿಜೆಪಿ ಯುವಮುಖಂಡನ ಪತ್ನಿ ಅರೆಸ್ಟ್​! ಶೃತಿ ಬೆಳ್ಳಕ್ಕಿ ಬಂಧನಕ್ಕೆ ಬಿಜೆಪಿ ಖಂಡನೆ!!

2018 ವಿಧಾನಸಭಾ ಚುನಾವಣೆ ವೇಳೆ ತೀವ್ರಗೊಂಡಿದ್ದ ವೀರಶೈವ-ಲಿಂಗಾಯತ್ ಪ್ರತ್ಯೇಕ ಧರ್ಮ ಹೋರಾಟದ ಬೆಂಕಿ ಆರಿದರೂ ಇನ್ನು ಅದರ ಕಿಡಿಗಳು ತಣ್ಣಗಾದಂತಿಲ್ಲ. ಮತ್ತೊಮ್ಮೆ ಲೋಕಸಭೆ ಚುನಾವಣೆಯಲ್ಲಿ ಈ ವಿಚಾರ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಚುನಾವಣೆ ವೇಳೆ ಗೃಹ ಸಚಿವ ಎಂಬಿ. ಪಾಟೀಲ್​ ಹಾಗೂ ಮಾಜಿ ಸಚಿವ ವಿನಯ್​ ಕುಲಕರ್ಣಿ ವಿರುದ್ಧ ಸೋಷಿಯಲ್​ ಮೀಡಿಯಾದಲ್ಲಿ ಅವಹೇಳನಕಾರಿ ಪೋಸ್ಟ್​ ಮಾಡಿದ ಆರೋಪದಲ್ಲಿ ಬಿಜೆಪಿ ಯುವಮೋರ್ಚ ಮುಖಂಡನ ಪತ್ನಿಯನ್ನು ಪೊಲೀಸರು ಬಂಧಿಸಿದ್ದಾರೆ.

ad

ಧಾರವಾಡದ ಗರಗ ಹೋಬಳಿಯ ಬಿಜೆಪಿ ಯುವಮೋರ್ಚಾ ಮುಖಂಡ ಪರಮೇಶ ಉಳವಣ್ಣನವರ ಪತ್ನಿ ಶೃತಿ ಬೆಳ್ಳಕ್ಕಿಯಲ್ಲಿ ಅರೆಸ್ಟ್ ಮಾಡಲಾಗಿದೆ. ಶೃತಿ ಕೆಲ ದಿನಗಳ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ಲಿಂಗಾಯತ್-ವೀರಶೈವ ಹೋರಾಟ ಹಾಗೂ ಅದರ ಸಾಧಕ-ಬಾಧಕ, ಹಾಲಿ ಸಚಿವ ಎಂ.ಬಿ.ಪಾಟೀಲ್ ಮತ್ತು ಮಾಜಿ ಸಚಿವ ವಿನಯ್ ಕುಲಕರ್ಣಿ ವಿರುದ್ಧ ಹೇಳಿಕೆ ನೀಡಿದ್ದರು ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಚುನಾವಣೆ ವೇಳೆಯಲ್ಲಿ ಕೋಮು ಸಾಮರಸ್ಯ ಕದಡುತ್ತಿರುವ ಪ್ರಕರಣ ದಾಖಲಿಸಿಕೊಂಡಿರುವ ಧಾರವಾಡ ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಯುವಮೋರ್ಚಾ ಮುಖಂಡನ ಪತ್ನಿ ಶೃತಿಯನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನು ಬಂಧನಕ್ಕೊಳಗಾಗಿರುವ ಶೃತಿಗೆ ಧಾರವಾಡದ 1 ನೇ ಹೆಚ್ಚುವರಿ ಸಿವಿಲ್​ ಮತ್ತು ಜೆಎಂಎಫ್​ಸಿ ನ್ಯಾಯಲಯ ಮಧ್ಯಂತರ ಜಾಮೀನು ಅರ್ಜಿ ನಿರಾಕರಿಸಿದೆ.


ಪತ್ನಿ ಬಂಧನದ ಬಗ್ಗೆ ಮಾಹಿತಿ ನೀಡಿರುವ ಶೃತಿ ಬೆಳ್ಳಕ್ಕಿ ಪತಿ ಹಾಗೂ ಬಿಜೆಪಿ ಮುಖಂಡ ಪರಮೇಶ್​ ಉಳಣ್ಣನವರ್, ಯಾವುದೇ ಮಾಹಿತಿ ನೀಡದೆ ಎಂ.ಬಿ.ಪಾಟೀಲ್ ತನ್ನ ಅಧಿಕಾರ ದುರ್ಬಳಕೆ ಮಾಡಿಕೊಂಡು ನನ್ನ ಪತ್ನಿಯನ್ನು ಬಂಧಿಸಿದ್ದಾರೆ. ನನ್ನ ಪತ್ನಿಯದ್ದೇನು ತಪ್ಪಿಲ್ಲ. ಪಂಚಮ ಸಾಲಿ ಸಮಾಜದ ನಮ್ಮ ಏಳಿಗೆ ಸಹಿಸದೇ ಈ ರೀತಿ ಮಾಡಲಾಗಿದೆ ಎಂದು ಪರಮೇಶ್ ಆರೋಪಿಸಿದ್ದಾರೆ.