ವಿದ್ಯಾರ್ಥಿ ಕಣ್ಣು ಹೋಗಲು ಕಾರಣವಾದ್ರಾ ಶಾಲಾ ಮುಖ್ಯಗುರು..!!! ಈ ಸುದ್ದಿ ಕೇಳಿದ್ರೆ ನಿಮ್ಮ ಕರುಳು ಕಿತ್ತು ಬರದೆ ಇರದು!!!

ಸರ್ಕಾರಿ ಶಾಲೆ ಅಂದ್ರೆ ಸಾಕು ಅದು ಬಡವರ ಪಾಲಿಗೆ ವಿದ್ಯಾ ದೇಗುಲ ಅನ್ನೋ ಮಾತಿದೆ.ಬಡ ಮಕ್ಕಳಿಗೆ ಪಾಠ ಮಾಡಬೇಕಾದ ಸರ್ಕಾರಿ ಶಾಲಾ ಮುಖ್ಯಗುರುವೇ ವಿದ್ಯಾರ್ಥಿ ಪಾಲಿಗೆ ವಿಲನ್ ಆದ ಬಗ್ಗೆ ಕೇಳಿದ್ದಾರಾ..??? ಆತನೆ ಶಾಲೆಯಲ್ಲಿ ಕಲಿಯುವ ವಿದ್ಯಾರ್ಥಿಯ ಕಣ್ಣು  ಹೋಗಲು ಇವರೇ ಕಾರಣವಾದ್ರಾ..?ಅರೇ ಇದೇನಿದು ಮುಖ್ಯಗುರು ಹೀಗೆಲ್ಲ ಮಾಡ್ತಾರಾ ಅಂತಾ ನೀವು ತೆಲೆಕೆಡಿಸಿಕೊಳ್ಳುತ್ತಿರಬಹುದು. ಆದ್ರೆ ನಾವು ಹೇಳ ಹೊರಟಿರುವ ಈ ಸ್ಟೋರಿ ನೋಡಿದ್ದರೆ ಇಡೀ ರಾಜ್ಯದಲ್ಲಿ ಎಲ್ಲೂ ಕೇಳದ ಎಲ್ಲೂ ನಡೆಯದ ಘಟನೆ ಗಡಿ ಜಿಲ್ಲೆ ಬೀದರ್ ನಲ್ಲಿ ನಡೆದಿದೆ.ತಾಲೂಕಿನ ಚಿಮ್ಮಕೋಡ್ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏಳನೇ ತರಗತಿ ಓದುತ್ತಿರುವ ಯಾದು ಕಾಂಭ್ಳೆ(13)ಕಣ್ಣು ಕಳೆದುಕೊಂಡ ವಿದ್ಯಾರ್ಥಿ.ಈ ಶಾಲೆ ಮುಖ್ಯಗುರು ಮಡಿವಾಳಪ್ಪಾ ವಿದ್ಯಾರ್ಥಿ ಕಣ್ಣು ಕಳೆದುಕೊಳ್ಳುವಂತೆ ಮಾಡಿದ್ರು  ಆತನ ಕಣ್ಣಿನ ಚಿಕಿತ್ಸೆಗಾಗಿ ಈ ಶಿಕ್ಷಕ ನಯಾ ಪೈಸೆನು ಕೊಟ್ಟಿಲ್ಲ.ಇದರಿಂದಾಗಿ ಕಂಗಾಲಾದ ಕುಟಂಬ ಮಗನ ಕಣ್ಣಿನ ಚಿಕಿತ್ಸೆಗಾಗಿ ಬೀದಿಗೆ ಬಿದ್ದಿದೆ.ಈ ಕುರಿತ ವಿಶೇಷ ವರದಿ.

ನೀವು ನೋಡುತ್ತಿರುವ ಈ ಬಡ ಸರ್ಕಾರಿ ಶಾಲಾ ವಿದ್ಯಾರ್ಥಿ ಹೆಸರು ಯಾದು ಕಾಂಬ್ಳೆ.ಕಳೆದ ತಿಂಗಳು ಎಲ್ಲರಂತಿದ್ದ ಈ ವಿದ್ಯಾರ್ಥಿ  ಈಗ ಕಣ್ಣು ಕಳೆದುಕೊಂಡು ಚಿಕಿತ್ಸೆಗಾಗಿ ಗೋಗರೆಯುತ್ತಿದ್ದಾನೆ. ಮಾರ್ಚ್ ಒಂದರಂದು ಎಲ್ಲರಂತೆ ಶಾಲೆಗೆ ಹೋಗಿದ್ದ ಈ ಯಾದುಗೆ ಆ ಶಾಲೆಯ ಮುಖ್ಯಗುರುವೇ ವಿಲನ್ ಆಗುತ್ತಾರೆ ಅಂತಾ ಆತ ಕನಸು ಮನಸ್ಸಲ್ಲು ಅಂದುಕೊಂಡಿಲ್ಲ.ಶಾಲಾ ಮುಖ್ಯಗುರುಗಳ ಆದೇಶದಂತೆ ಶಾಲೆಯ ಕೋಣೆಯನ್ನ ಪೊರಕೆಯಿಂದ ಸ್ವಚ್ಚ ಮಾಡಲು ಮೂಂದಾದ ಯಾದು ಪೋರಕೆ ಕಡ್ಡಿ ಕಣ್ಣಿಗೆ ಚುಚ್ಚಿ ಕಣ್ಣೇ  ಕಳೆದುಕೊಳ್ಳುತ್ತಾನೆ. ಕ್ಷಣಾರ್ಧದಲ್ಲಿ ನಡೆದು ಹೋದ ಈ ಘಟನೆಯಿಂದ ಈಗ ಆತನ ಬಾಳಿನಲ್ಲಿ ಅಂಧಕಾರ ಕವಿದಿದೆ.ಸಧ್ಯಕ್ಕೆ ಆತನ ಕಣ್ಣಿನ ಚಿಕಿತ್ಸೆ ಹೈದ್ರಾಬಾದ್ ಖಾಸಗಿ ಆಸ್ಪತ್ರೆಯಲ್ಲಿ ನಡೆಯುತ್ತಿದ್ದು ಮೂರು ತಿಂಗಳುಗಳ ಕಾಲ ಎನು ಹೇಳಲಿಕ್ಕೆ ಆಗುವುದಿಲ್ಲ ಅಂತಾ ವೈದ್ಯರು ಹೇಳಿದ್ದಾರೆ.ಶಾಲಾ ಮುಖ್ಯಗುರುವೇ ಶಾಲಾ ವಿದ್ಯಾರ್ಥಿಗಳಿಂದ ಕೋಣೆ ಸ್ವಚ್ಚ ಮಾಡಿಸಿದ್ದು ಎಷ್ಟರ ಮಟ್ಟಿಗೆ ಸರಿ ಅನ್ನೋ ಪ್ರಶ್ನೆ ಇಗ ಕಾಡಲಾರಂಭಿಸಿದೆ.ಇಷ್ಟಾದ್ರು ಶಾಲಾ ಮುಖ್ಯಗುರು ಮಡಿವಾಳ ಮೇಲೆ ಯಾವುದೆ ಕ್ರಮಕ್ಕೆ ಶಿಕ್ಷಣ ಇಲಾಖೆ ಮುಂದಾಗಿಲ್ಲ.!!ಇದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಗ್ರಾಮದಲ್ಲಿ ಕೂಲಿ ಮಾಡಿ ಬದುವಕುವ ಯಾದುವಿನ ಬಡ ಕುಟುಂಬ  ಈಗ ಮಗನ ಚಿಕಿತ್ಸೆಗಾಗಿ ಪರದಾಡುತ್ತಿದೆ.ಸರ್ಕಾರಿ ಶಾಲೆಗೆ ಮಗನಿಗೆ ಓದಲು ಕಳುಹಿಸಿದ್ದೆ ತಪ್ಪಾ ಅಂತಾ ಅವ್ರು ಕೇಳುತ್ತಿದ್ದಾರೆ.ಮಕ್ಕಳು ಇರಲಿ ಬಿಡಲಿ ನಡು ಮಧ್ಯಾನ್ಹ ಶಾಲೆ ಬಂದ್ ಮಾಡಿಕೊಂಡು ಓಡಿ ಹೋಗೋ ಮುಖ್ಯ ಗುರು ಮಡಿವಾಳ ಮಾತ್ರ ಈಗ ಎನೂ ಆಗೇ ಇಲ್ಲಾ ಅಂತಾ ಆತನ ಚಿಕಿತ್ಸೆಗಾಗಿ ಹಣ ನೀಡದೆ ಓಡಾಡುತ್ತಿದ್ದಾನೆ.ಇದ್ದ ಅಲ್ಪಸ್ವಲ್ಪ ಬಂಗಾರ ಮಾರಾಟ ಮಾಡಿ ಮಗ ಯಾದುವಿಗೆ ಚಿಕಿತ್ಸೆ ಕೊಡಿಸುತ್ತಿದ್ದಾಳೆ ತಾಯಿ ಕವಿತಮ್ಮಾ.ಆದ್ರೆ ಮಗನ ದೃಷ್ಟಿ ಸರಿಯಾಗುವ  ಲಕ್ಷಣ ಮಾತ್ರ ಕಾಣುತ್ತಿಲ್ಲ.ವಿದ್ಯಾರ್ಥಿ ಕಣ್ಣು ಹೋಗಲು ಕಾರಣವಾದ ಮುಖ್ಯಗುರು ಮಡಿವಾಳಪ್ಪನ್ನ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ಮುಂದಾಗದೆ ಇರೋದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

 

ಒಟ್ಟಾರೆ ಸರ್ಕಾರಿ ಶಾಲೆಗೆ ಮಕ್ಕಳು ಬರದೆ ಇರುವ ಸಂದರ್ಭದಲ್ಲಿ ಸರ್ಕಾರಿ ಶಾಲೆಗೆ ಬರೋ ಮಕ್ಕಳ ಪಾಲಿಗೆ ಆ ಶಾಲೆಯ ಮುಖ್ಯ ಗುರುವೇ ವಿಲನ್ ತರ ಆಗಿದ್ದು ಮಾತ್ರ ವಿಪರ್ಯಾಸ.ವಿದ್ಯಾರ್ಥಿ ಯಾದುವಿನ ಕಣ್ಣು ಕಳೆದುಕೊಳ್ಳಲು ಕಾರಣವಾದ ಮುಖ್ಯಗುರು ಮಡಿವಾಳಪ್ಪಾ ವಿರುದ್ದ ತಿಂಗಳಾಗುತ್ತಾ ಬಂದ್ರೂ ಇಲಾಖೆಯ ಮೇಲಾಧಿಕಾರಿಗಳ ಕ್ರಮಕ್ಕೆ ಮುಂದಾಗಿಲ್ಲ.ಜೊತೆಗೆ ಆ ವಿದ್ಯಾರ್ಥಿ ಮನೆಗೆ ಭೇಟಿ ನೀಡಿ ಆತನ ಚಿಕಿತ್ಸೆ ಗೆ ಸಹಾಯ ಮಾಡಲು ಯಾವೊಬ್ಬ ಅಧಿಕಾರಿ ಮನಸ್ಸು ಮಾಡದೆ ಇರೋದು ಮಾತ್ರ ನಿಜಕ್ಕೂ ಬೇಸರದ ವಿಷಯ. ಸರ್ಕಾರಿ ಶಾಲಾ ಮಕ್ಕಳು ಜೀವಕ್ಕೆ ಬೆಲೆ ನೇ ಇಲ್ವಾ .??

ವರದಿ: ಬೀದರ್ ದಿಂದ ಓಂಕಾರ ಮಠಪತಿ ಬಿಟಿವಿ.

ಪ್ರತ್ಯುತ್ತರ ನೀಡಿ

Please enter your comment!
Please enter your name here