ರಾಹುಲ್ ಗಾಂಧಿ ಬೆವರಿಳಿಸಿದ ಮೈಸೂರು ವಿದ್ಯಾರ್ಥಿನಿ !! ರಕ್ಷಣೆಗೆ ಧಾವಿಸಿದ ಸಿದ್ದರಾಮಯ್ಯ !!

ಕರ್ನಾಟಕ ಪ್ರವಾಸದಲ್ಲಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ಮೈಸೂರಿನ ವಿದ್ಯಾರ್ಥಿನಿಯೊಬ್ಬಳು ಪ್ರಶ್ನೆ ಕೇಳಿ ಬೆವರಿಳಿಸಿದ್ದಾಳೆ.  

ಮೈಸೂರಿನ ಮಹಾರಾಣಿ ಕಾಲೇಜಿಗೆ ಆಗಮಿಸಿದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧೀ, ಕಲಾ ಮತ್ತು ವಾಣಿಜ್ಯ ಮಹಿಳಾ ಪದವಿ ಕಾಲೇಜಿನ ಆವರಣದಲ್ಲಿ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಸಂಧರ್ಭದಲ್ಲಿ ರಾಹುಲ್ ಗೆ ಕನ್ನಡದಲ್ಲಿ ಪ್ರಶ್ನೆ ಕೇಳಿದ ವಿದ್ಯಾರ್ಥಿನಿ, ರಾಹುಲ್ ಮತ್ತು ಕರ್ನಾಟಕ ಸರಕಾರ ಬೆಚ್ಚಿ ಬೀಳುವಂತೆ ಮಾಡಿದಳು. ಕರ್ನಾಟಕ ಸರ್ಕಾರ ಉತ್ತಮ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಆದರೆ ಅದನ್ನು ಕೆಲವು ಸಮುದಾಯಗಳು ಜಾತಿಗಳಿಗೆ ಮಾತ್ರ ಸೀಮಿತ ಮಾಡುತ್ತಿದೆ. ಇಷ್ಟಕ್ಕೂ ಜಾತಿ ಆಧಾರದಲ್ಲಿ ಯೋಜನೆಗಳನ್ನು ತರುವುದು ಎಷ್ಟರ ಮಟ್ಟಿಗೆ ಸರಿ ? ಎಂದು ಪ್ರಶ್ನಿಸಿದಳು.

ನಾವೆಲ್ಲರೂ ಒಂದೇ ಎಂದು ಹೇಳುವ ನೀವು ಜಾತಿ ಆಧಾರದಲ್ಲಿ ಯೋಜನೆಗಳನ್ನು ಜಾರಿಗೊಳಿಸೋದು ಎಷ್ಟು ಸರಿ ಎಂದು ಪ್ರಶ್ನಿಸಿದಳು ವಿದ್ಯಾರ್ಥಿನಿಯ ಜಾತಿ ಪ್ರಶ್ನೆಯಿಂದ ಅವಕ್ಕಾದ ರಾಹುಲ್ ಗಾಂಧಿ ಉತ್ತರಕ್ಕಾಗಿ ತಡಕಾಡಿದರು. ಅಷ್ಟರಲ್ಲಿ ಮಧ್ಯ ಪ್ರವೇಶಿಸಿದ ಸಿಎಂ ಸಿದ್ದರಾಮಯ್ಯ, ಕೆಲವು ಜಾತಿ, ಸಮುದಾಯಗಳು ಶತಮಾನಗಳಿಂದ ತುಳಿತಕ್ಕೊಳಪಟ್ಟಿವೆ. ಅವುಗಳನ್ನು ಮೇಲೆತ್ತುವುದು ಸರಕಾರವೊಂದರ ಜವಾಬ್ದಾರಿ. ಅದಕ್ಕಾಗಿ ಕೆಲ ಜಾತಿಗಳಿಗೆ ವಿಶೇಷ ಯೋಜನೆ ಜಾರಿ ಮಾಡಬೇಕಾಗುತ್ತದೆ. ಅವರೂ ನಮ್ಮ ಸರಿ ಸಮಾನರು ಆಗಬೇಕು ಅಂದ್ರೆ ಅದನ್ನು ಮಾಡಲೇ ಬೇಕು ಎಂದರು.