ರಾತ್ರಿ ಆಯ್ತು ಅಂದ್ರೆ‌ ಹಾಸ್ಟೆಲ್ ನಲ್ಲಿ ಇರೋಕೆ‌ ಭಯಬೀಳ್ತಾರೆ ವಿದ್ಯಾರ್ಥಿನಿಯರು!

Man Entered in Ladies Hostel at Hassan.
Man Entered in Ladies Hostel at Hassan.

ಹಾಸನದ ಪ್ರತಿಷ್ಠಿತ ಪಶುವೈದ್ಯಕೀಯ ಮಹಾವಿದ್ಯಾಲಯದ ವಿದ್ಯಾರ್ಥಿನಿಯರು ರಾತ್ರಿ ಆಗುತ್ತಿದ್ದಂತೆ ಬೆಚ್ಚಿ ಬೀಳುತ್ತಿದ್ದಾರೆ. ಹೌದು ರಾತ್ರಿಯಾಗುತ್ತಿದ್ದಂತೆ ಹಾಸ್ಟೆಲ್​ಗೆ ಅನಾಮಿಕನ ಎಂಟ್ರಿಯಾಗುತ್ತಿದ್ದು, ಈತನನ್ನು ಕಂಡು ವಿದ್ಯಾರ್ಥಿನಿಯರು ಕಂಗಾಲಾಗಿದ್ದು, ಹಾಸ್ಟೆಲ್​ ಮೆಟ್ಟಿಲೇರಲೂ ಹೆದರುತ್ತಿದ್ದಾರೆ.


ಡಿಸೆಂಬರ್​ 2 ರಂದು ಅಪರಿಚಿತ ಯುವಕನೊಬ್ಬ ಹಾಸ್ಟೆಲ್​ ಒಳಕ್ಕೆ ನುಗ್ಗಿದ್ದು, ಆತ ಕಳ್ಳನೋ,ಕಾಮುಕನೋ ಗೊತ್ತಾಗಿಲ್ಲ. ಹಾಸ್ಟೆಲ್​ ಹೊರಗಿನ ಸಣ್ಣ ಪೈಪ್​ ಸಹಾಯದಿಂದ ಆತ ಹಾಸ್ಟೆಲ್​ ಒಳಕ್ಕೆ ಬಂದಿದ್ದಾನೆ. ಆತನ ಪಾದದ ಗುರುತು ಇದಕ್ಕೆ ಸಾಕ್ಷಿ ಒದಗಿಸಿದೆ. ಅಲ್ಲದೇ ಹಾಸ್ಟೆಲ್​ಗೆ ಅಳವಡಿಸಲಾದ ಸಿಸಿಟಿವಿಯಲ್ಲಿ ಮುಖಕ್ಕೆ ಬಟ್ಟೆ ಕಟ್ಟಿಕೊಂಡ ಅಪರಿಚಿತ ವ್ಯಕ್ತಿ ಓಡಾಡಿರುವ ದೃಶ್ಯ ದಾಖಲಾಗಿದೆ. ಆದರೇ ಆತ ಯಾರು, ಯಾಕಾಗಿ ಬಂದಿದ್ದ ಎಂಬುದು ಪತ್ತೆಯಾಗಿಲ್ಲ.

ಕಳೆದ ಮಾರ್ಚ್​​ನಲ್ಲಿ ಇದೇ ರೀತಿ ಅನಾಮಿಕ ವ್ಯಕ್ತಿಯೊಬ್ಬ ಇದೇ ಹಾಸ್ಟೇಲ್​​​ಗೆ ಎಂಟ್ರಿಕೊಟ್ಟು ವಿದ್ಯಾರ್ಥಿನಿಯರ ಎದೆಯಲ್ಲಿ ನಡುಕ ಮೂಡಿಸಿದ್ದ. ಈ ವೇಳೆ ವಿದ್ಯಾರ್ಥಿನಿಯರು ದೂರು ನೀಡಿದ್ದರಿಂದ ಹಾಸ್ಟೇಲ್​ ಭದ್ರತೆಯನ್ನು ಹೆಚ್ಚಿಸಲಾಗಿತ್ತು. ಆದರೇ ಇದೀಗ ಮತ್ತೆ ಇದೇ ಘಟನೆ ಮರುಕಳಿಸಿದ್ದು, ವಿದ್ಯಾರ್ಥಿನಿಯರು ಹಾಸ್ಟೇಲ್​​ನಲ್ಲಿ ವಾಸಿಸುವುದಕ್ಕೆ ಹೆದರುವಂತಾಗಿದೆ. ಬಡಾವಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರತ್ಯುತ್ತರ ನೀಡಿ

Please enter your comment!
Please enter your name here