ಮಹಿಷಾಸುರ ಮರ್ದಿನಿ ಕಲಾಪ್ರದರ್ಶನದ ವೇಳೆ ನಡೆದಿದ್ದೇನು?

ದೇವರ ದರ್ಶನ ಹಾಗೂ ಪೂಜೆ ವೇಳೆ ಭಕ್ತರು ಭಾವಾವೇಷಕ್ಕೆ ಒಳಗಾಗೋದನ್ನು ನೋಡಿರ್ತಿರಾ. ಆದರೇ ಇಲ್ಲಿ ಮಹಿಷಾಸುರ ಕಲಾಪ್ರದರ್ಶನದ ವೇಳೆ ಯುವತಿಯರು ಭಕ್ತಿ ಪರಾಕಾಷ್ಠೆಗೆ ಒಳಗಾಗಿ ಕುಸಿದು ಬಿದ್ದ ಘಟನೆ ಉಡುಪಿಯಲ್ಲಿ ನಡೆದಿದೆ.

ad


ಉಡುಪಿಯ ಮಲ್ಪೆ ಪಡುಕೆರೆಯಲ್ಲಿ ಭಜನಾ ಮಂದಿರದ 25 ನೇ ವಾರ್ಷಿಕೋತ್ಸವ ಸಮಾರಂಭ ಆಯೋಜಿಸಲಾಗಿತ್ತು. ಈ ಪ್ರದರ್ಶನದ ವೇಳೆ ಸ್ಥಳೀಯ ಯುವತಿಯರು ಮಹಿಷಾಸುರ ಮರ್ದಿನಿ ಕಲಾಪ್ರದರ್ಶನ ನೀಡುತ್ತಿದ್ದರು. ಈ ವೇಳೆ ಅಸುರರನ್ನು ದೇವಿ ಸಂಹರಿಸುವ ಸನ್ನಿವೇಶ ನಡೆಯುತ್ತಿದ್ದ ವೇಳೆ ಸಹ ನೃತ್ಯಗಾತಿಯೊಬ್ಬಳು ಭಾವಾವೇಷಕ್ಕೆ ಒಳಗಾಗಿದ್ದು, ಅಲ್ಲಿಯೇ ಕುಸಿದು ಬಿದ್ದಿದ್ದಾಳೆ.

ನೃತ್ಯಗಾತಿ ಕುಸಿದು ಬೀಳುತ್ತಿದ್ದ ದೇವಿಪಾತ್ರಧಾರಿ ಹಾಗೂ ಮಹಿಷಾಸುರ ಪಾತ್ರಧಾರಿ ಆತಂಕಕ್ಕೆ ಒಳಗಾಗಿ ನೃತ್ಯ ನಿಲ್ಲಿಸಿದ್ದಾರೆ. ತಕ್ಷಣವೇ ಪ್ರೇಕ್ಷಕರು ವೇದಿಕೆ ಬಂದು ಕುಸಿದು ಬಿದ್ದ ಸಹನೃತ್ಯ ಕಲಾವಿದೆಯನ್ನು ಎತ್ತಿಕೊಂಡು ಹೋಗಿ ಚಿಕಿತ್ಸೆ ನೀಡಿದ್ದಾರೆ. ಒಂದೆಡೆ ಸುಸ್ತು ಹಾಗೂ ಅನಾರೋಗ್ಯದಿಂದ ಕುಸಿದು ಬಿದ್ದಿದ್ದಾರೆ ಎಂದು ಶಂಕಿಸಲಾಗಿದ್ದು, ಭಕ್ತರು ದೇವರ ಆವಾಹನೆಯಿಂದ ಬಿದ್ದಿದ್ದಾರೆ ಎಂದು ನಂಬುತ್ತಿದ್ದಾರೆ. ಇದೀಗ ವಿಡಿಯೋ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.