ಪೊಲೀಸ್ ಅರ್ಹತಾ ಪರೀಕ್ಷೆ ಬರೆಯದೇ ವಿದ್ಯಾರ್ಥಿಗಳ ಪರದಾಟ. ಮುಂದೆ ಏನಾಯಿತು ಅಂತೀರಾ ಹಾಗಾದ್ರೆ ಈ ಸುದ್ದಿ ಓದಿ…

ವಿದ್ಯಾರ್ಥಿಗಳ ಜೀವನದೊಂದಿಗೆ ಆಟವಾಡಿದ ರೈಲ್ವೆ ಇಲಾಖೆ.. ರೈಲ್ವೆ ಇಲಾಖೆ ಧೋರಣೆ ಖಂಡಿಸಿ ಪ್ರತಿಭಟನೆ ಮಾಡ್ತಾ ಇರೋ ವಿದ್ಯಾರ್ಥಿಗಳು.. ಎಷ್ಟೇ ಸಮಾಧಾನ ಮಾಡಿದ್ರು ರೊಚ್ಚಿಗೆದ್ದಿರುವ ಪರೀಕ್ಷಾರ್ಥಿಗಳು. ವಾಣಿಜ್ಯ ನಗರಿ ಹುಬ್ಬಳ್ಳಿಯ ರೈಲ್ವೆ ನಿಲ್ದಾಣದಲ್ಲಿ.

 


ಸೊಲ್ಲಾಪುರ ಟು ಬೆಂಗಳೂರಿಗೆ ಹೋಗುವ ರಾಣಿ ಚೆನ್ನಮ್ಮ ಷಾಹು ಮಹಾರಾಜ ಎಕ್ಸ್‌ಪ್ರೆಸ್‌ ರೈಲು ಈ ಭಾಗದ ಜನರಲ್ಲಿ ಇಂದು ಬಾರಿ ಚೆಲ್ಲಾಟವಾಡಿದೆ. ಪ್ರತಿನಿತ್ಯ ಧಾರವಾಡ ಹುಬ್ಬಳ್ಳಿ ಮಾರ್ಗವಾಗಿ ರಾಜಧಾನಿ ಬೆಂಗಳೂರು ತಲುಪುವ ಈ ರೈಲು ನಿತ್ಯ ರಾತ್ರಿ ಧಾರವಾಡ ನಿಲ್ದಾಣಕ್ಕೆ 9:30 ಕ್ಕೆ ಬರುತ್ತದೆ. ಬಳಿಕ 10:30 ಕ್ಕೆ ಹುಬ್ಬಳ್ಳಿ ನಿಲ್ದಾಣಕ್ಕೆ ಬರುತ್ತದೆ. ಆದ್ರೆ, ತಡರಾತ್ರಿಯಾದ್ರು ಬರದ ರೈಲು ಇಂದು ಬೆಳಿಗ್ಗೆ 4 ಗಂಟೆಗೆ ಹುಬ್ಬಳ್ಳಿ ನಿಲ್ದಾಣಕ್ಕೆ ಬಂದಿದೆ. ಹೀಗಾಗಿ ಪ್ರಯಾಣಿಕರು ಮತ್ತು ಇಂದು ಬೆಂಗಳೂರಿನಲ್ಲಿ ಪೊಲೀಸ್ ಕಾನ್ ಸ್ಟೇಬಲ್ ಪರೀಕ್ಷೆ ಬರೆಯಲು ತೆರಳುತ್ತಿದ್ದ ಮೂರು ಸಾವಿರಕ್ಕೂ ತಮ್ಮ ಪರೀಕ್ಷೆ ತಪ್ಪಿಸಿಕೊಂಡಿದ್ದರಿಂದ ಅಭ್ಯರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು. ಧಾರವಾಡ ಜಿಲ್ಲೆಯ ಕಂಬಾರಗಣಿ ಗ್ರಾಮದ ನಡುವೆ ಮಾರ್ಗ ಮಧ್ಯೆ ಕೆಟ್ಟು ನಿಂತಹ ಹಿನ್ನೆಲೆಯಲ್ಲಿ ಪ್ರಯಾಣಿಕರು ಪರದಾಡಿದರೆ ಇನ್ನೊಂದು ಕಡೆ ಇಂದು ಬೆಂಗಳೂರಿನಲ್ಲಿ ಡಿ.ಆರ್ ಪರೀಕ್ಷೆಗೆ ಹಾಜರಾಗಬೇಕಿದ್ದ ಅಭ್ಯರ್ಥಿಗಳು ಬೆಂಗಳೂರು ತಲುಪಲಾಗದೇ ಕಂಗಾಲಾಗಿ ಹುಬ್ಬಳ್ಳಿಯ ರೇಲ್ವೆ ನಿಲ್ದಾಣದ ಎದುರುಗಡೆ ಪ್ರತಿಭಟನೆ ನಡೆಸಿದರು…

ಬೆಳಗಾವಿ, ಗೋಕಾಕ, ಚಿಕ್ಕೋಡಿ, ಕಾರವಾರ, ವಿಜಯಪುರ, ಬಾಗಲಕೋಟೆ ಸೇರಿದಂತೆ ಬೇರೆ ಬೇರೆ ಕಡೆಗಳಿಂದ ಅಭ್ಯರ್ಥಿಗಳು ಆಗಮಿಸಿದ್ದರು. ರೇಲ್ವೆ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದ ಅಭ್ಯರ್ಥಿಗಳು ಕೂಡಲೇ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಸಹ ಜರುಗಿಸಬೇಕು, ನಮಗೆ ಇನ್ನೊಂದು ಸಲ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿ ಕೊಡಬೇಕು ಅಂತಾ ಪಟ್ಟು ಹಿಡಿದ್ರು. ಡಿಸಿಪಿ ರೇಣುಕಾ ಸುಕುಮಾರ, ಶಾಸಕ ಪ್ರಸಾದ್ ಅಬ್ಬಯ್ಯ ಎಷ್ಟೇ ಮನವಲಿಸಿದ್ರು ಸಹ ಪರೀಕ್ಷಾರ್ಥಿಗಳು ಮಾತ್ರ ಪ್ರತಿಭಟನೆ ಮುಂದುವರೆಸಿದ್ರು. ನಂತ್ರ ಸಿಎಂ ಕುಮಾರಸ್ವಾಮಿ ಅವರು ಮತ್ತೊಮ್ಮೆ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಂಡುವದಾಗಿ ಭರವಸೆ ನೀಡಿದ ಬಳಿಕ ಹೋರಾಟವನ್ನು ಕೈಬಿಟ್ಟರು.

ರೈಲ್ವೇ ವಿಭಾಗೀಯ ವ್ಯವಸ್ಥಾಪಕ ರಾಜೇಶ ಮೋಹನ್ ತನಿಖೆ ಆದೇಶ ಮಾಡಿದ್ದಾರೆ. ಆದ್ರೆ, ಪೊಲೀಸ ಕೆಲಸಕ್ಕೆ ಸೇರಬೇಕೆಂದು ನೂರಾರು ಕನಸುಗಳನ್ನು ಕಟ್ಟಿಕೊಂಡು ಹಲವು ದಿನಗಳು‌ ಕಷ್ಟಪಟ್ಟು ಓದಿದ್ದ, ವಿದ್ಯಾರ್ಥಿಗಳಿಗೆ ನಿರಾಸೆಯಾಗಿದೆ. ರೈಲು ಅಧಿಕಾರಿಗಳು ಮಾಡಿದ್ದ ಎಡವಟ್ಟಿನಿಂದ ವಿದ್ಯಾರ್ಥಿಗಳು ಪರದಾಡಿದ್ದಾರೆ. ಮಾತುಕೊಟ್ಟಂತೆ ನಾಡಿನ ದೊರೆ ಸಿಎಂ ಕುಮಾರಸ್ವಾಮಿ ಪರೀಕ್ಷೆ ವಂಚಿತ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ಅವಕಾಶ ನೀಡಬೇಕಾಗಿದೆ..