ನಟಿ ಶ್ರೀದೇವಿ ಸಾವಿನ ಬಗ್ಗೆ ಬೇರೆಯದನ್ನೇ ಹೇಳುತ್ತಿದ್ದಾರೆ ಸುಬ್ರಹ್ಮಣ್ಯಸ್ವಾಮಿ!! ಏನದು?

ಬಹುಭಾಷಾ ನಟಿ ಶ್ರೀದೇವಿ ಸಾವಿನ ಹಿಂದೆ ಹಲವಾರು ಪ್ರಶ್ನೆಗಳು ಹುಟ್ಟುತ್ತಿವೆ. ಇಂದು ರಾಜ್ಯ ಸಭೆ ಸದಸ್ಯ ಸುಬ್ಯಹ್ಮಣಿಸ್ವಾಮಿ ನನಗೆ ಶ್ರೀ ದೇವಿ ಸಾವಿನ ಬಗ್ಗೆ ದೊಡ್ಡ ಅನುಮಾನ ಇದ್ದು, ಈ ಪ್ರಕರಣ ಬಗ್ಗೆ ದುಬೈ ಪೊಲೀಸರು ಸಂಕ್ಷಿಪ್ತ ತನಿಖೆ ಮಾಡಬೇಕು ಎಂದು ಹೇಳಿದ್ದಾರೆ. ಇನ್ನೊಂದೆಡೆ ಈವರೆಗೂ ಹೋಟೆಲ್​​ನ ಸಿಸಿಟಿವಿ ದೃಶ್ಯ ಏಕೆ ರಿಲೀಸ್ ಮಾಡಿಲ್ಲ ಅಂತ ಅನುಮಾನ ವ್ಯಕ್ತಪಡಿಸಿದ್ದಾರೆ. ಶ್ರೀದೇವಿ ಕೋಣೆಗೆ ಯಾರು ಮೊದಲು ಹೋಗಿದ್ದರು. ಅದನ್ನು ತನಿಖೆ ಮಾಡಬೇಕು. ಇನ್ನು ಶ್ರೀದೇವಿ ಯಾವತ್ತೂ ಮದ್ಯಪಾನ ಮಾಡಿರಲಿಲ್ಲ. ಆದರೆ ಆಗಾಗ ಬಿಯರ್​​​ ಕುಡಿಯುತ್ತಿದ್ದರು ಅಷ್ಟೇ ಎಂದು ಸುಬ್ರಮಣಿಸ್ವಾಮಿ ಹೇಳಿದ್ದಾರೆ.

ad


 

ಇನ್ನು ಶ್ರೀದೇವಿ ಸಾವಿನ ಸುತ್ತ ಅನುಮಾನಗಳು ಕೊಡಿದ್ದು, ನಟಿ ಸಾವಿಗೂ ದಾವೂದ್​ ಇಬ್ರಾಹಿಂಗೂ ನಂಟಿದೆಯಾ ಎಂಬ ಪ್ರಶ್ನೆಗಳು ನನ್ನನ್ನು ಕಾಡುತ್ತಿದೆ ಅಂತ ಸುಬ್ಯಮಣಿಸ್ವಾಮಿ ತೀವ್ರ ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆಯೂ ನನಗೆ ಸಾಕಷ್ಟು ಅನುಮಾನಗಳು ಕಾಡುತ್ತಿವೆ ಕಾಡುತ್ತಿದೆ ಅಂತ ಹೇಳಿದ್ರು.