ವಿಷ್ಣುಸಮಾಧಿ ಸ್ಥಳಾಂತರ ಬೇಡ ಸಿಎಂಗೆ ಸುದೀಪ್ ಮನವಿ-ಭಾರತಿ ವಿಷ್ಣುವರ್ಧನ ಅಸಮಧಾನ

ಮಹತ್ವದ ಬೆಳವಣಿಗೆಯೊಂದರಲ್ಲಿ ಸ್ಯಾಂಡಲವುಡ್​​ ನಟ ಸುದೀಪ್ ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿದ್ದು, ಈ ಭೇಟಿ ಸಾಕಷ್ಟು ಕುತೂಹಲ ಮೂಡಿಸಿದೆ. ಮಧ್ಯಾಹ್ನ ಸಿಎಂ ನಿವಾಸ ಕಾವೇರಿಗೆ ಆಗಮಿಸಿದ ಸುದೀಪ್ ಸಿಎಂ ಜೊತೆ ಅರ್ಧಗಂಟೆಗೂ ಅಧಿಕ ಕಾಲ ಮಾತುಕತೆ ನಡೆಸಿದರು. ಚುನಾವಣೆ ಎದುರಿನಲ್ಲಿ ಸಿಎಂ ಸಿದ್ದರಾಮಯ್ಯರನ್ನು ಸುದೀಪ್  ಭೇಟಿ ಮಾಡಿದ್ದು ಹಲವು ಚರ್ಚೆಗಳಿಗೂ ಕಾರಣವಾಯಿತು.

ad 
ಸಿಎಂ ಭೇಟಿ ಬಳಿಕ ಮಾತನಾಡಿದ ನಟ ಸುದೀಪ್ ವಿಷ್ಣು ಸ್ಮಾರಕದ ಕುರಿತು ಚರ್ಚೆ ಸಿಎಂ ಜೊತೆ ಚರ್ಚೆ ನಡೆಸಿದ್ದೇನೆ. ವಿಷ್ಣು ಸಮಾಧಿಯನ್ನು ಸ್ಥಳಾಂತರಿಸೋದು ಬೇಡ ಎಂದು ಮನವಿ ಮಾಡಿದ್ದೇನೆ. ವಿಷ್ಣು ಸ್ಮಾರಕ ಎಲ್ಲಾದರೂ ನಿರ್ಮಿಸಲಿ. ಆದರೇ ಸಮಾಧಿ ಸ್ಥಳಾಂತರ ಬೇಡ ಎಂದು ಮನವಿ ಮಾಡಿದ್ದೇನೆ. ಎಂದರು.


ಇನ್ನು ನಟ ಸುದೀಪ್ ಸಿಎಂರನ್ನು ಭೇಟಿಯಾಗಿರುವ ವಿಚಾರ ತಿಳಿದು ಸಿಡಿಮಿಡಿಗೊಂಡಿರುವ ನಟಿ ಭಾರತಿ ಅಸಮಧಾನ ವ್ಯಕ್ತಪಡಿಸಿದ್ದಾರೆ. ಸುದೀಪ್ ಸಿಎಂ ಭೇಟಿ ಮಾಡಿರುವ ವಿಚಾರ ನನಗೆ ಗೊತ್ತಿಲ್ಲ . ನನ್ನ ಜೊತೆ ಯಾವ ವಿಷಯವನ್ನೂ ಚರ್ಚಿಸಿಲ್ಲ .ಬೆಂಗಳೂರಿನಲ್ಲಿ ಸ್ಮಾರಕ ಬೇಡ ಎಂದು ನಿರ್ಧರಿಸಲಾಗಿದೆ .ಮೈಸೂರಿನಲ್ಲಿ ಸ್ಮಾರಕಕ್ಕಾಗಿ ಸರ್ಕಾರ ಎಲ್ಲ ಭರವಸೆ ನೀಡಿದೆ.ಸಿಎಂ ಸಿದ್ದರಾಮಯ್ಯ ಹೆಚ್ಚು ಆಸಕ್ತಿ ವಹಿಸಿದ್ದಾರೆ. 2 ಕೋಟಿ ಹಣವನ್ನೂ ಸರ್ಕಾರ ನೀಡಿದೆ. ಇಲ್ಲಿ ಹಣದ ಸಮಸ್ಯೆ ಇಲ್ಲ, ವಾಸ್ತವ ಅರಿತುಕೊಳ್ಳಬೇಕು. ಹಣದ ಕೊರತೆ ಇದ್ದರೆ ನಮ್ಮ ಕುಟುಂಬವೇ ಭರಿಸುತ್ತಿತ್ತು ಎಂದಿದ್ದಾರೆ.