‘ಸುಮಲತಾ ಗೆಲ್ತಾರೋ ಅಥವಾ ನಿಖಿಲ್ ಗೆಲ್ತಾರೋ’ ಎಂದು ಮಂಡ್ಯದಲ್ಲಿ ಶುರುವಾಗಿದೆ ಬೆಟ್ಟಿಂಗ್ ಭರಾಟೆ

ಲೋಕಸಭೆ ಚುನಾವಣೆ ಕಾವು ಹೆಚ್ಚಾಗ್ತಿದ್ದಂತೆ ಮಂಡ್ಯದಲ್ಲಿ ಬೆಟ್ಟಿಂಗ್​ ಭರಾಟೆ ಜೋರಾಗಿದೆ. ಈ ಬಾರಿ ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ನಿಖಿಲ್ ಗೆಲ್ತಾರೋ ಅಥವಾ ಸುಮಲತಾ ಗೆಲ್ತಾರೋ ಅನ್ನೋ ಬಗ್ಗೆ ಬೆಟ್ಟಿಂಗ್ ನಡೆಯುತ್ತಿದೆ. ಸುಮಲತಾ ಪರ ಅಭಿಮಾನಿಯೊಬ್ಬ ಐದು ಎಕರೆ ಭೂಮಿಯನ್ನ ಬೆಟ್ಟಿಂಗ್​​​​ ಆಫರ್​ ಕೊಟ್ಟಿದ್ದಾನೆ.

ಇನ್ನೊಂದೆಡೆ ನಿಖಿಲ್ ಕುಮಾರಸ್ವಾಮಿ ಪರವಾಗಿ ನಿಖಿಲ್ ಅಭಿಮಾನಿಯೊಬ್ಬ 5 ಲಕ್ಷ ಬೆಟ್ಟಿಂಗ್ ಕಟ್ಟಿದ್ದಾನೆ. ನಿಖಿಲ್ ಸೋಲ್ತಾರೆ ಅಂತ ಸುಪ್ರೀತ್​ ಅನ್ನೋರು 5 ಲಕ್ಷ ಆಫರ್ ಕೊಟ್ರೆ ನಿಖಿಲ್ ಗೆಲ್ತಾರೆ, ಧಮ್​ ಇದ್ರೆ ಕಳಿಸು ಎಂದು ನಟೇಶ್ ಗೌಡ ಎಂಬುವವರು ಸವಾಲು ಹಾಕಿದ್ದಾರೆ. ಒಟ್ನಲ್ಲಿ ಚುನಾವಣೆ ಸಮೀಪಿಸುತ್ತಿದ್ದಂತೆ ಮಂಡ್ಯ ಬೆಟ್ಟಿಂಗ್ ಭರಾಟೆ ಜೋರಾಗಿದ್ದು, ಸಾಮಾಜಿಕ ಜಾಲತಾಣದಲ್ಲೂ ಬೆಟ್ಟಿಂಗ್ ಸೌಂಡ್ ಮಾಡ್ತಿದೆ.