ಸಿಸಿಬಿ ಪೊಲೀಸರು ಬೆಳಗೆರೆ ಪ್ರಭಾವಕ್ಕೆ ಒಳಗಾಗಿದ್ದಾರೆ- ಸುನೀಲ್ ಹೆಗ್ಗರವಳ್ಳಿ ಆರೋಪ

ಸಹೋದ್ಯೋಗಿಗೆ ಸುಫಾರಿ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ಪತ್ರಕರ್ತ ರವಿ ಬೆಳಗೆರೆಗೆ ನ್ಯಾಯಾಲಯ ಮಧ್ಯಂತರ ಜಾಮೀನು ನೀಡಿದೆ.

ad


ರವಿ ಬೆಳಗೆರೆಗೆ ನ್ಯಾಯಾಲಯ ಜಾಮೀನು ನೀಡಿದ ಬೆನ್ನಲ್ಲೇ ಪತ್ರಕರ್ತ ಸುನಿಲ್ ಹೆಗ್ಗರವಳ್ಳಿ ಸಿಸಿಬಿ ಪೊಲೀಸರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.  ರವಿ ಬೆಳಗೆರೆ ಮನೆಯಲ್ಲಿ ಜಿಂಕೆ ಚರ್ಮ, ಆಮೆ ಚಿಪ್ಪು ಸಿಕ್ಕಿದ್ದವು. ಆದರೇ ಸಿಸಿಬಿಯವರು ರವಿ ಬೆಳಗೆರೆ ವಿರುದ್ಧ ಯಾವುದೇ ಪ್ರಕರಣ ದಾಖಲಿಸಿಲ್ಲ. ಎಫ್​ಆಯ್​​ಆರ್​ ದಾಖಲಿಸದೇ ಅರಣ್ಯ ಇಲಾಖೆಗೆ ವರ್ಗಾಯಿಸಿದ್ದಾರೆ. ಸಿಸಿಬಿ ಪೊಲೀಸರು ರವಿ ಬೆಳಗೆರೆ ಪ್ರಭಾವಕ್ಕೆ ಒಳಗಾಗಿದ್ದಾರೆ. ಸಿಐಡಿಯಲ್ಲಿ ಅರಣ್ಯ ಘಟಕವಿದ್ದರೂ ಪ್ರಕರಣವನ್ನು ಅರಣ್ಯ ಇಲಾಖೆಗೆ ವಹಿಸಲಾಗಿದೆ ಎಂದು ಸುನೀಲ್ ಹೆಗ್ಗರವಳ್ಳಿ ಆರೋಪಿಸಿದ್ದಾರೆ.

ಈ ಎಲ್ಲ ವಿಚಾರದಲ್ಲಿ ಪೊಲೀಸರು ಸೂಕ್ತ ಕ್ರಮಕೈಗೊಂಡಿಲ್ಲ. ಹೀಗಾಗಿ ರವಿ ಬೆಳಗೆರೆಗೆ ಜಾಮೀನು ಸಿಕ್ಕಿದೆ. ಬಿಡುಗಡೆಯ ನಂತರ ರವಿ ಬೆಳಗೆರೆ ನನಗೆ ತೊಂದರೆ ಕೊಡುವ ಸಾಧ್ಯತೆ ಇದೆ. ಹೀಗಾಗಿ ನ್ಯಾಯಾಲಯದ ಮೊರೆ ಹೋಗುತ್ತೇನೆ. ಪಬ್ಲಿಕ್​ ಪ್ರಾಸಿಕ್ಯೂಟರ್​​​ ಮೂಲಕ ಜಾಮೀನು ನೀಡದಂತೆ ಕೋರ್ಟ್​​​ಗೆ ಮನವಿ ಮಾಡುತ್ತೇನೆ ಎಂದರು. ಒಟ್ಟಿನಲ್ಲಿ ರವಿ ಬೆಳಗೆರೆ ಸುಫಾರಿ ನೀಡಿದ ಪ್ರಕರಣ ಪ್ರತಿನಿತ್ಯ ಒಂದೊಂದು ತಿರುವು ಪಡೆದುಕೊಳ್ಳುತ್ತಿರೋದಂತು ಸತ್ಯ.