ಕಪಿಲ್ ಸಿಬಲ್ ಬಗ್ಗೆ ಸುನ್ನಿ ವಕ್ಫ್ ಬೋರ್ಡ್ ಅಸಮಾಧಾನ

ಬಾಬ್ರೀ ಮಸೀದಿ ವಿವಾದ ಸುಪ್ರೀ ಕೋರ್ಟ್ ಅಂಗಳದಲ್ಲಿದೆ. ನಿನ್ನೆ 2019ರ ಎಲೆಕ್ಷನ್​ ವರೆಗೆ ಪ್ರಕರಣದ ವಿಚಾರಣೆ ಬೇಡ ಎಂದು ಕಪಿಲ್​ ಸಿಬಲ್  ವಾದ ಮಂಡಿಸಿದ್ದರು.

 

ಈಗ ಈ ಪ್ರಕರಣಕ್ಕೆ ಮೇಜರ್​ ಟ್ವಿಸ್ಟ್​ ಆಗಿದೆ. ತಮ್ಮದೇ ವಕೀಲರ ವಾದಕ್ಕೆ ಸುನ್ನಿ ವಕ್ಫ್​ ಬೋರ್ಡ್​ ಆಕ್ಷೇಪ ವ್ಯಕ್ತಪಡಿಸಿದೆ.
ಸುಪ್ರೀಂ ಕೋರ್ಟ್​ನಲ್ಲಿ ಸಿಬಲ್​ ನೀಡಿರುವ ಹೇಳಿಕೆ ಸರಿಯಲ್ಲ. ಮೊದಲು ಪ್ರಕರಣ ಇತ್ಯ್ರ್ಥವಾಗಬೇಕು. ಕಾಲ ಮುಂದೂಡುವುದು ಸರಿಯಲ್ಲ ಅಂತ ತಮ್ಮ ಆಕ್ಷೇಪ ವ್ಯಕ್ತಪಡಿಸಿದ್ದಾರೆ.