ತಮಿಳುನಾಡಿಗೆ ನೀರು ಹರಿಸಿ ಎಂದ ಸುಪ್ರೀಂ ಕೋರ್ಟ್​- ಸಂಕಷ್ಟದಲ್ಲಿ ರಾಜ್ಯ ಸರ್ಕಾರ!

 

ad

ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ ದಿನಗಣನೆ ನಡೆದಿದೆ. ಹೀಗಿರುವಾಗಲೇ ರಾಜ್ಯಕ್ಕೆ ಸುಪ್ರೀಂಕೋರ್ಟ್​ ಸಖತ್ ಶಾಕ್ ನೀಡಿದೆ. ಹೌದು ತಮಿಳುನಾಡಿಗೆ 4 ಟಿಎಂಸಿ ನೀರು ಬಿಡುವಂತೆ ಸುಪ್ರೀಂ ಕೋರ್ಟ್​ ಸೂಚನೆ ನೀಡಿದ್ದು, ರಾಜ್ಯ ಸರ್ಕಾರ ಮತ್ತೆ ಸಂಕಷ್ಟಕ್ಕೆ ಸಿಲುಕಿದೆ. ಸುಪ್ರೀಂಕೋರ್ಟ್​ ಸರ್ಕಾರದ ವಿರುದ್ಧ ಗರಂ ಆಗಿದ್ದು, ಎಪ್ರಿಲ್​ ತಿಂಗಳಿನ ಬಾಕಿ 4 ಟಿಎಂಸಿ ನೀರು ಬಿಡಿ ಅಥವಾ ಮುಂದಿನ ಪರಿಣಾಮ ಸಿದ್ಧರಾಗಿರಿ ಎಂಬರ್ಥದಲ್ಲಿ ಆದೇಶ ನೀಡಿದೆ. ಇನ್ನು ಕರ್ನಾಟಕದ ಪರ ವಾದ ಮಂಡಿಸಿದ ಎಡ್ವಕೇಟ್​​ ಜನರಲ್, ಕರ್ನಾಟಕದಲ್ಲಿ ಚುನಾವಣೆ ಇದೆ. ಕರಡು ತಯಾರಿಕೆಗೆ ಕಾಲಾವಕಾಶ ಬೇಕು. ಪ್ರಧಾನಿ ಹಾಗೂ ಸಚಿವರು ಪ್ರಚಾರದಲ್ಲಿದ್ದಾರೆ ಎಂಬ ವಾದ ಮಂಡಿಸಿದೆ.

ಇದರಿಂದ ಸುಪ್ರೀಂ ಕೋರ್ಟ್​ ಅಸಮಧಾನಗೊಂಡಿದ್ದು, ಎಪ್ರಿಲ್​ ತಿಂಗಳ ಬಾಕಿಯಾಗಿ 4 ಟಿಎಂಸಿ ನೀರು ಹರಿಸಲು ಆದೇಶ ನೀಡಿದೆ. ಇದು  ಕರ್ನಾಟಕದ ಪಾಲಿಗೆ ಬಿಸಿತುಪ್ಪವಾಗುವ ಸಾಧ್ಯತೆ ಇದೆ. ಹೌದು ಕರ್ನಾಟಕದಲ್ಲಿ ಈಗಾಗಲೇ ನೀರಿನ ಕೊರತೆ ಇದ್ದು, ಚುನಾವಣೆ ವೇಳೆಯಲ್ಲಿ ತಮಿಳುನಾಡಿಗೆ ನೀರೋ ಬಿಡೋದರಿಂದ ಸರ್ಕಾರದ ವಿರುದ್ಧ ರೈತರು ಆಕ್ರೋಶಗೊಳ್ಳುವ ಸಾಧ್ಯತೆ ಇದೆ. ಒಟ್ಟಿನಲ್ಲಿ ಮತ್ತೆ ರಾಜ್ಯ ಸರ್ಕಾರ ಸಂಕಷ್ಟಕ್ಕೆ ಸಿಲುಕಿದೆ.