ಟ್ರೆಕ್ಕಿಂಗ್​ ಹೋಗಿ ಕಾಡ್ಗಿಚ್ಚಿಗೆ ಬಲಿಯಾದ ವಿದ್ಯಾರ್ಥಿಗಳು- ಐವರ ಸಾವು- ಹಲವರು ಅಸ್ವಸ್ಥ!!

ಕಾಡಿನಲ್ಲಿ ಟ್ರಕ್ಕಿಂಗ್​ ತೆರಳಿದ ವಿದ್ಯಾರ್ಥಿಗಳು ಕಾಳ್ಗಿಚ್ಚಿನ ರುದ್ರನರ್ತನಕ್ಕೆ ಬಲಿಯಾದ ಹೃದಯ ವಿದ್ರಾವಕ ಘಟನೆ ತಮಿಳುನಾಡಿನ ಥೇಣಿ ಅರಣ್ಯ ಪ್ರದೇಶದಲ್ಲಿ ನಡೆದಿದೆ. ತಮಿಳುನಾಡಿನ ಕುರಾಂಗಣಿ ಸಮೀಪದ ಕೊಲಕ್ಕುಮಲೈ ಅರಣ್ಯದಲ್ಲಿ ಅಗ್ನಿ ಅವಘಡ ನಡೆದಿದ್ದು, ಟ್ರೆಕ್ಕಿಂಗ್​​ ತೆರಳಿದ 37 ವಿದ್ಯಾರ್ಥಿಗಳ ಪೈಕಿ 5 ಸಾವನ್ನಪ್ಪಿದ್ದು, ಹಲವರನ್ನು ರಕ್ಷಿಸಲಾಗಿದೆ.

ಚೆನ್ನೈ, ತಿರುಪುರ, ಈರೋಡ್​ನಿಂದ ಒಟ್ಟು 37 ವಿದ್ಯಾರ್ಥಿಗಳು ಟ್ರೆಕ್ಕಿಂಗ್​ ಬಂದಿದ್ದರು. ಶನಿವಾರ ಟ್ರೆಕ್ಕಿಂಗ್​ ತೆರಳಿದ್ದ ಪ್ರವಾಸಿಗರು ನಿನ್ನೆ ಮಧ್ಯಾಹ್ನ ಬೆಟ್ಟದಿಂದ ಇಳಿಯುತ್ತಿದ್ದರು. ಈ ವೇಳೆ ಬೋಡಿ ಮತ್ತು ಥೇಣಿ ಅರಣ್ಯದಲ್ಲಿ ವಾರದ ಹಿಂದೆ ಕಾಣಿಸಿಕೊಂಡಿದ್ದ ಬೆಂಕಿ ಮತ್ತೆ ಉಲ್ಬಣಿಸಿದೆ. ಸುತ್ತಲೂ ಬೆಂಕಿ ಆವರಿಸಿದ್ದರಿಂದ ಉಸಿರುಗಟ್ಟಿ ಐವರ ಸಾವನ್ನಪ್ಪಿದ್ದಾರೆ. ಸೇನೆಯ ಸಹಾಯದಿಂದ 20ಕ್ಕೂ ಹೆಚ್ಚು ಮಂದಿಯ ರಕ್ಷಿಸಲಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಟ್ರೆಕ್ಕಿಂಗ್ ಗೆ ಒಟ್ಟು ಎರಡು ತಂಡಗಳು ತೆರಳಿದ್ದರು. ಒಂದು ಗುಂಪಿನಲ್ಲಿ ೧೩ ಮಂದಿ ಮತ್ತೊಂದು ಗುಂಪಿನಲ್ಲಿ೨೪ ಮಂದಿ ಕೊಲ್ಲುಕುಮಲೈಗೆ ಟ್ರಾಕಿಂಗ್ ಹೋಗಿದ್ದರು. ೮ ಜನ ಯುವಕರು, ೨೬ ಜನ ಮಹಿಳೆಯರು, ೩ ಮಕ್ಕಳು ಸೇರಿ ಒಟ್ಟು ೩೬ ಮಂದಿ ಚೆನ್ನೈ ನ ಟ್ರಾಕಿಂಗ್ ಕ್ಲಬ್ ಆಯೋಜನೆ ಮಾಡಿದ್ದ ಈ ಟ್ರೆಕ್ಕಿಂಗ್ ಗೆ ಭಾಗವಹಿಸಿದ್ದರು.ಇವರೆಲ್ಲರು ಚೆನ್ನೈ, ಈರೊಡ್, ಹಾಗು ತಿರುಪುರ್ ನಿಂದ ಬಂದಿರು ಪ್ರವಾಸಿಗರಾಗಿದ್ದಾರೆ.

ಶನಿವಾರ ಬೆಳಗ್ಗೆ ಈ ಕೊಲ್ಲುಕುಮಲೈಗೆ ಹೋಗಿದ್ದು ಇಂದು ವಾಪಸು ಬರವ ವೇಳೆ ಈ ದುರ್ಘಟನೆ ನಡೆದಿರ ಬಹುದೆಂದು ಅರಣ್ಯ ಇಲಾಖೆಯ ಸಿಬ್ಬಂದಿ ಜಿಲ್ಲಾಧಿಕಾರಿ ಗೆ ಮಾಹಿತಿಯನ್ನು ನೀಡಿದ್ದಾರೆ. ಈ ಆಗ್ನಿ ಅನಾಹುತ ದಲ್ಲಿ ಒಟ್ಟು ೧೫ ಜನ ಗಾಯಗೊಂಡಿದ್ದು, ಥೆನಿ ಜಿಲ್ಲಾಧಿಕಾರಿ ಪಲ್ಲವಿ ಬಲ್ದೇವ್ ಮಾಧ್ಯಮಗಳಿಗೆ ಮಾಹಿತಿಯನ್ನು ನೀಡಿದ್ದಾರೆ. ತಮಿಳುನಾಡಿನ ಥೆನಿ ಜಿಲ್ಲೆಯಲ್ಲಿ ಟ್ರೆಕ್ಕಿಂಗ್ ಹೋದ ವಿದ್ಯಾರ್ಥಿಗಳನ್ನು ಸ್ಥಳೀಯರು ರಕ್ಷಣೆ ಮಾಡುತ್ತಿದ್ದು, ರಕ್ಷಿಸುವ ವೇಳೆ ಹಲವರು ಗಾಯಗೊಂಡಿದ್ದಾರೆ. ಈದುರ್ಘಟನೆ ತಮಿಳುನಾಡಿನ ಉಪಮುಖ್ಯಮಂತ್ರಿ ಪನೀರ್ ಸೆಲ್ವಂ ವ್ಯಾಪ್ತಿಗೆ ಒಳಪಡುತ್ತದೆ. ಈ ವಿದ್ಯಾರ್ಥಿಗಳಾಗಲಿ ಅಥವಾ ಯಾವುದೇ ಕ್ಲಬ್​ ಆಗಲಿ ಟ್ರೆಕ್ಕಿಂಗ್​ ತೆರಳಲು ಅರಣ್ಯ ಇಲಾಖೆಯಿಂದ ಯಾವುದೇ ಅನುಮತಿ ಪಡೆದಿರಲಿಲ್ಲ ಎನ್ನಲಾಗಿದೆ. ಇನ್ನು ಎನ್​.ಡಿ.ಆರ್​.ಎಫ್​ ತಂಡ ರಕ್ಷಣಾ ಕಾರ್ಯದಲ್ಲಿ ನಿರತವಾಗಿದೆ.