ರಾಜ್ಯದಲ್ಲಿ ಗೌಡ್ರಿಗಿಲ್ಲ ಉಳಿಗಾಲ- ಸಿಎಂ ಕೆಂಪಯ್ಯರಿಗೆ ಒಕ್ಕಲಿಗ ಅಧಿಕಾರಿಗಳೇ ಟಾರ್ಗೆಟ್​​ !

ರಾಜ್ಯದಲ್ಲಿ ಅಧಿಕಾರದಲ್ಲಿರುವ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಒಕ್ಕಲಿಗ ಅಧಿಕಾರಿಗಳನ್ನು ಟಾರ್ಗೆಟ್​ ಮಾಡ್ತಿದ್ಯಾ? ಇಂತಹದೊಂದು ಆರೋಪ ಬಲವಾಗಿ ಕೇಳಿಬಂದಿದ್ದು, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಈ ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವರ ಸಲಹೆಗಾರ ಕೆಂಪಯ್ಯನವರಿಗೆ ಒಕ್ಕಲಿಗ ಅಧಿಕಾರಿಗಳೇ ಟಾರ್ಗೆಟ್​.

ಲೋಕಾಯುಕ್ತ ಪ್ರಕರಣದಲ್ಲಿ ವಿಧಾನಸೌಧ ಭದ್ರತಾ ಡಿಸಿಪಿ ಯೊಗೇಶ್​ ಸಸ್ಪೆಂಡ್​ ಮಾಡಿರೋದೇ ಇದಕ್ಕೆ ಸಾಕ್ಷಿ ಎಂದು ಗುಡುಗಿದ್ದಾರೆ.
ರಾಜ್ಯದಲ್ಲಿ ಸಿಎಂಗೆ ಹಾಗೂ ಕೆಂಪಯ್ಯನವರಿಗೆ ಒಕ್ಕಲಿಗ ಅಧಿಕಾರಿಗಳೇ ಟಾರ್ಗೆಟ್​ ಆಗಿದ್ದು, ವಿನಾಕಾರಣ ಅವರಿಗೆ ಕಿರುಕುಳ ನೀಡಲಾಗ್ತಿದೆ. ಲೋಕಾಯುಕ್ತ ಘಟನೆ ಬಳಿಕ ಇದು ಸಾಬೀತಾಗಿದೆ. ಯಾಕಂದ್ರೆ ಲೋಕಾಯುಕ್ತ ಭದ್ರತೆ ಹೊಣೆ ಅಡಿಷನಲ್​ ಕಮಿಷನರೇಟ್ ವ್ಯಾಪ್ತಿಗೆ ಬರುತ್ತದೆ. ಹೀಗಿದ್ದರೂ ವಿಧಾನಸೌಧ ಡಿಸಿಪಿ ಯೊಗೇಶ್ ಅವರನ್ನು ಅಮಾನತ್ತುಗೊಳಿಸಲಾಗಿದೆ. ಒಕ್ಕಲಿಗರ ಮೇಲಿನ ದ್ವೇಷದಿಂದಲೇ ಕೆಂಪಯ್ಯ ಸೂಚನೆ ಮೇರೆಗೆ ಸಿಎಂ ಈ ನಿರ್ಧಾರ ಮಾಡಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ. ಲೋಕಾಯುಕ್ತ ಕೇಸ್​​ಗಿಂತ ಮೊದಲು ಇದೇ ರೀತಿ ಮೈಸೂರಿನ ಚುನಾವಣೆ ವೇಳೆ ನಜರಾಬಾದ್​​ ಠಾಣೆಯ ಇನ್ಸಪೆಕ್ಟರ್​ ಮೋಹನ್ ಗೌಡ್​ನನ್ನು ಕೂಡ ಒಕ್ಕಲಿಗ ಎಂಬ ಕಾರಣಕ್ಕೆ ಸಿಎಂ ವಿನಾಕಾರಣ ಸಸ್ಪೆಂಡ್​ ಮಾಡಿಸಿದ್ದಾರೆ.

ಲೋಕಾಯುಕ್ತ ಕೇಸ್​ನಲ್ಲಿ ಗೃಹ ಇಲಾಖೆಯ ವೈಫಲ್ಯವಿದ್ದು ಅದಕ್ಕಾಗಿ ಕೆಂಪಯ್ಯ ತಲೆದಂಡವಾಗಬೇಕಿತ್ತು. ಆದರೇ ಕೆಂಪಯ್ಯ , ಸಿಎಂ ಸೇರಿಕೊಂಡು ಮೇಲಾಧಿಕಾರಿಗಳನ್ನು ರಕ್ಷಿಸಲು ಯೋಗೇಶ್​ ತಲೆದಂಡ ಮಾಡಿದ್ದಾರೆ. ಇದು ಸಿಎಂ ದ್ವೇಷ ರಾಜಕಾರಣವನ್ನು ತೋರಿಸುತ್ತೆ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಕೂಡಾ ಸಿಎಂ ಸಿದ್ಧರಾಮಯ್ಯ ಮೇಲೆ ಈ ಆರೋಪ ಕೇಳಿಬಂದಿದ್ದು, ಸಿಎಂ ಅಧಿಕಾರಾವಧಿಯಲ್ಲಿ ರಾಜ್ಯದಲ್ಲಿ ಒಕ್ಕಲಿಗ ಅಧಿಕಾರಿಗಳಿಗೆ ನೆಲೆ ಇಲ್ಲದಂತಾಗಿದೆ. ಈ ಹಿಂದೆ ಡಿಜಿ ನೇಮಕದ ವೇಳೆಯೂ ಸಿಎಂ ಸಿದ್ಧರಾಮಯ್ಯ ಕನ್ನಡಿಗರೂ ಹಾಗೂ ಯೋಗ್ಯರೂ ಆಗಿದ್ದ ಕಿಶೋರ್​ಚಂದ್ರ ನೇಮಕ ಮಾಡುವುದನ್ನು ಬಿಟ್ಟು ಪರರಾಜ್ಯದವರಿಗೆ ಆದ್ಯತೆ ನೀಡಿದ್ದರು. ಅಲ್ಲದೇ ಸಿಎಂ ಹಾಗೂ ಕೆಂಪಯ್ಯ ಕರಾಮತ್ತಿನಿಂದ ರಾಜ್ಯದಲ್ಲಿ ಒಕ್ಕಲಿಗ ಐಪಿಎಸ್​ ಅಧಿಕಾರಿಗಳಿಗೆ ಸೂಕ್ತ ಸ್ಥಾನಮಾನವೇ ಸಿಗದಂತಾಗಿದ್ದು, ಕೆಂಪಯ್ಯ ಒಕ್ಕಲಿಗ ಪೊಲೀಸ್ ಅಧಿಕಾರಿಗಳಿಗೆ ಇನ್ನಿಲ್ಲದ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪ ತುಂಬ ಬಲವಾಗಿ ಕೇಳಿಬಂದಿದೆ. ಅಲ್ಲದೇ ಅಧಿಕಾರಿಗಳು ಕೂಡ ಕೆಂಪಯ್ಯ ಹಾಗೂ ಸಿಎಂ ವಿರುದ್ಧ ಬಲವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.