ಮೊದಲ ಭಾಷಣದಲ್ಲೇ ಕೈ ಟಾರ್ಗೆಟ್​​! ಮೋದಿ ಹೊಗಳಿ ಗಮನಸೆಳೆದ ಸಂಸದ ತೇಜಸ್ವಿ ಸೂರ್ಯ!!

ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಚೊಚ್ಚಲ ಭಾಷಣದಲ್ಲೇ ಲೋಕಸಭೆ ಗಮನ ಸೆಳೆದಿದ್ದಾರೆ. ಮೊದಲ ಭಾಷಣದಲ್ಲೇ ಕಾಂಗ್ರೆಸ್​ ವಿರುದ್ಧ ಹರಿಹಾಯ್ದ ತೇಜಸ್ವಿ ಸೂರ್ಯ ಕಾಂಗ್ರೆಸ್ ಆಡಳಿತ ವೈಖರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ad


UPA ಅವಧಿಯಲ್ಲಿ ಯುವಕರಿಗೆ ಅವಕಾಶವೇ ಇರಲಿಲ್ಲ. ಮೋದಿ ನೇತೃತ್ವದಲ್ಲಿ ಯಂಗ್​ ಇಂಡಿಯಾಕ್ಕೆ ಅವಕಾಶಗಳು ದೊರಕಿವೆ. ಮೋದಿಯಿಂದಾಗಿ ಹಿಂದುತ್ವದ ಪರಿಭಾಷೆಯೇ ಬದಲಾಗಿದೆ. ಭಾರತೀಯರು ಹಿಂದೂ ಎಂದು ಹೇಳಿಕೊಳ್ಳಲು ಹೆಮ್ಮೆಪಡ್ತಿದ್ದಾರೆ ಎಂದರು.


ಮುಂದಿನ 5 ವರ್ಷದಲ್ಲಿ ಹೊಸ ಭಾರತ ಉದಯವಾಗಲಿದೆ ಎಂದ ತೇಜಸ್ವಿ ಸೂರ್ಯ, ಸಂಸತ್​ನಲ್ಲಿ ಕನ್ನಡ ಕಹಳೆ ಕೂಡಾ ಮೊಳಗಿಸಿದ್ರು. ಕರ್ನಾಟಕದಲ್ಲಿ ಇಷ್ಟರಲ್ಲಿ ಹೊಸ ಬದಲಾವಣೆ ಶುರುವಾಗಲಿದೆ ಎಂದು ತೇಜಸ್ವಿ ಸೂರ್ಯ ಮಾತು ಮುಗಿಸಿದ್ರು.


ಮೊದಲ ಪ್ರಯತ್ನದಲ್ಲೇ ತೇಜಸ್ವಿ ಸೂರ್ಯ ಅತ್ಯಂತ ಪ್ರಖರ ಭಾಷಣದ ಮೂಲಕ ಸಂಸತ್​ನ ಗಮನ ಸೆಳೆದಿದ್ದು, ಬೆಂಗಳೂರು ದಕ್ಷಿಣ ಭಾಗದ ಬಿಜೆಪಿ ಕಾರ್ಯಕರ್ತರಲ್ಲಿ ಸಂಭ್ರಮ ಮನೆಮಾಡಿದೆ.