ನಾಗದೇವನಿಗೆ ಬೇಕಂತೆ ಎರಡಂತಸ್ತಿನ ಮನೆ !! ಗೃಹ ಪ್ರವೇಶವಾಗದ ಐಶಾರಾಮಿ ಮನೆಯಲ್ಲಿ ಹುತ್ತ ಕಟ್ಟಿಕೊಂಡ ನಾಗರಾಜ !! ಮಂಡ್ಯದಲ್ಲೊಂದು ವಿಚಿತ್ರ ಪ್ರಕರಣ !!

Termitarium growing from 3 years to two-storey mansion.

ಇನ್ನೂ ಗೃಹಪ್ರವೇಶವಾಗದ ಮನೆಯಲ್ಲಿ ಪದೇ ಪದೇ ಹುತ್ತ ಕಟ್ಟುತ್ತಿರುವ ಘಟನೆ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಬಿದರ ಹೊಸಳ್ಳಿ ಗ್ರಾಮದಲ್ಲಿ ನಡೆದಿದೆ.

 

ಗ್ರಾಮದ ಮಹೇಶ್ ಎಂಬುವರ ತಮ್ಮ ಜಮೀನಿನಲ್ಲಿ ಸುಮಾರು 70 ಲಕ್ಷ ರೂ ವೆಚ್ಚ ಮಾಡಿ ಎರಡಂತಸ್ಥಿನ ಮನೆ ನಿರ್ಮಾಣ ಮಾಡಿದ್ದು ಈ ಮನೆಯಲ್ಲಿ ಮನೆ ಆರಂಭಿಸಿದಾಗಿನಿಂದಲೂ ಮನೆಯಲ್ಲಿ ಪದೇ ಪದೇ ಹುತ್ತ ಕಟ್ಟಿ ಮನೆಯ ಮಾಲೀಕರನ್ನು ಹೈರಾಣಾಗಿಸಿದೆ. ಪ್ರತಿ ಬಾರಿ ಮನೆಯಲ್ಲಿ ಹುತ್ತ ಕಟ್ಟಿದಾಗ ಹುತ್ತ ಅಗೆದು ತೆಗೆದರೂ ಮತ್ತೆ ಈ ಹುತ್ತ ಬೆಳೆಯುತ್ತಲೇ ಇರೋದು ಮನೆಯ ಮಾಲೀಕರಲ್ಲಿ ಆತಂಕ ಮೂಡಿಸಿದೆ. ಅಲ್ಲದೆ ಪ್ರತಿಬಾರಿ ಹುತ್ತ ತೆರವುಗೊಳಿಸಿದಾಗಲೂ ಮನೆಯ ಮಾಲೀಕರಿಗೆ ಒಂದಲ್ಲ ಒಂದು ಸಮಸ್ಯೆ ಎದುರಾಗಿ ಈ ಕುಟಂಬ ಸಾಕಷ್ಟು ಸಂಕಷ್ಟಕ್ಕೆ ಸಿಲುಕಿದೆ

ಇದ್ರಿಂದಾಗಿ ಈ ಕುಟುಂಬ ಈಗ ಮಾನಸಿಕ ತೊಳಲಾಟಕ್ಕೆ ಸಿಲುಕಿದೆ. ಆದರೆ ಗ್ರಾಮಸ್ಥರು ಮಾತ್ರ ಇದು ದೈವ ಲೀಲೆ ಎಂದು ಪರಿಭಾವಿಸಿದ್ದು ಮನೆಯೊಳಗಿನ ಹುತ್ತಕ್ಕೆ ಪೂಜೆ ಪುನಸ್ಕಾರ ಮಾಡಲು ಮುಂದಾಗಿದ್ದಾರೆ. ಈ ಹುತ್ತ ನೋಡಲು ತಂಡೋಪತಂಡವಾಗಿ ಬರಲು ಆರಂಭಿಸಿದ್ದಾರೆ. ಹಲವಾರು ಮಂದಿಯ ಅನಿಸಿಕೆಯಂತೆ ಎಷ್ಟೇ ಹಗೆದು ಹಾಕಿದರು ನೀರು ಬಿಟ್ಟರು, ಆಸಿಡ್ ಹಾಕಿದರು ಕಡಿಮೆಯಾಗದೇ ಮತ್ತೇ- ಮತ್ತೇ ಮತ್ತಷ್ಟು ಹುತ್ತದ ಬೆಳವಣಿಗೆ ಜಾಸ್ತಿಯಾಗುತ್ತಿದೆಯಂತೆ.

 

 

ದೇವರನ್ನು ನಂಬದೇ ಹುತ್ತ ಕಿತ್ತ ಹತ್ತಾರು ಮಂದಿಗೆ ಅಗೋಚರ ರೀತಿಯಲ್ಲಿ ಸಂಕಷ್ಟ ಎದುರಾಗಿದ್ದರ ಪರಿಣಾಮವಾಗಿ ಇಂದು ಹತ್ತಿರ ಹೋಗಲು ಭಯಬೀಳುತ್ತಿದ್ದಾರೆ. ಹುತ್ತ ತೆಗೆದಾಗಲೆಲ್ಲಾ ಮೊದಲು 2 ಎಕರೆ ಕಬ್ಬು ಬೆಂಕಿಗಾಹುತಿ, ನಂತರ ಬೆಂಕಿಗೆ 30-40 ತೆಂಗಿನ ಮರಗಳು ಆಹುತಿ, ನಂತರ ಅನಾರೋಗ್ಯಕ್ಕೀಡಾದ ಕುಟುಂಬಸ್ಥರು.

 

. ಹೀಗೆ ಸಾಲು ಸಾಲು ಅವಘಡಗಳು ಸಂಭವಿಸಿರೋದು ಜನ ಹುತ್ತಕ್ಕೆ ಕೈ ಹಾಕದಂತೆ ಮಾಡಿದೆ. ನಿಶ್ಶಬ್ಧದ ಸಂದರ್ಭದಲ್ಲಿ ವೀಡಿಯೋ ಚಿತ್ರಿಕರಣ ಮಾಡಿ ನಂತರ ವೀಡಿಯೋ ವೀಕ್ಷಣೆ ಮಾಡಿದರೆ ಹುತ್ತದಿಂದ ಗೆಜ್ಜೆ ಸದ್ದು ಕೇಳುತ್ತಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

ಪ್ರತ್ಯುತ್ತರ ನೀಡಿ

Please enter your comment!
Please enter your name here