ಕಂಠಪೂರ್ತಿ ಕುಡಿದು ಪೊಲೀಸರ ಕೈಗೆ ತಗ್ಲಾಕ್ಕೊಂಡ ನಟಿ! ಬಳಿಕ ಅಲ್ಲಿ ನಡೆದಿದ್ದೇನು ಗೊತ್ತಾ?!

ಈಕೆ ಕರಾವಳಿ ಸುಂದರಿ. ಕಡಲತಡಿಯಿಂದ ಡೈರೆಕ್ಟರ್ ಗಾಂಧಿನಗರಕ್ಕೂ ಎಂಟ್ರಿ ಕೊಡದೇ ಟಾಲಿವುಡ್​ ನಲ್ಲಿ  ಕಮಾಲ್ ಮಾಡ್ತೀರೋ ಚೆಂದುಳ್ಳಿ ಚೆಲುವೆ. ಆದ್ರೆ ಈ ನಟಿ ಅದ್ಯಾಕೋ ಪದೇ ಪದೆ ಒಂದಲ್ಲ ಒಂದು ಸುದ್ದಿಯಿಂದ ಸೌಂಡ್ ಮಾಡ್ತೇನೆ ಇರ್ತಾರೆ. ಈಗ ಮುತ್ತಿನಗರಿಯಲ್ಲಿ ಮದ್ಯದ ಮತ್ತೇರಿಸಿಕೊಂಡು ಪೊಲೀಸಪ್ಪನ ಕೈಗೆ ರೆಡ್​ ಹ್ಯಾಂಡಾಗಿ ತಗ್ಲಾಕೊಂಡಿದ್ದಾರಂತೆ. ಯಾರು ಆ ಸ್ಟಾರ್ ನಟಿ..? ಹೀಗ್ಯಾಕೆ ಮಾಡಿದ್ರು..? ನೀವೆ ನೋಡಿ

ad

ಕನ್ನಡದವರೇ ಆದ ಪೂಜಾ ಹೆಗ್ಡೆ ಬಣ್ಣದ ಜಗ್ಗತ್ತಿಗೆ ಪ್ರವೇಶಿಸಿದ್ದು ಮಾತ್ರ ಕಾಲಿವುಡ್ ಅಂಗಳದಿಂದ. ಮುಗಮೋದಿ ಅನ್ನೋ ತಮಿಳು ಸಿನಿಮಾದ ಮೂಲಕ ಇಂಟ್ರೋಡ್ಯೂಸ್ ಆದ ಪೂಜಾ ಈಗ ಕಮಾಲ್ ಮಾಡ್ತಿರೋದು ಮಾತ್ರ ಟಾಲಿವುಡ್​ನಲ್ಲಿ. ಸದ್ಯ ಟಾಲಿವುಡ್​ನಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಈ ನಟಿ ಬ್ಯೂಸಿಯಾಗಿದ್ದಾರೆ.

ಸೂಪರ್ ಸ್ಟಾರ್ ಮಹೇಶ್ ಬಾಬು, ಸ್ಟೈಲೀಶ್ ಸ್ಟಾರ್ ಅಲ್ಲು ಅರ್ಜುನ್​, ಬಿಟೌನ್ ಹ್ಯಾಡ್ಸಮ್ ಹಂಕ್​ ಹೃತಿಕ್ ರೋಷನ್​ನಂತಹ ಸ್ಟಾರ್ ಹಿರೋಗಳ ಜೊತೆ ಈ ಬಳುಕುವ ಬಳ್ಳಿ ಸ್ಕ್ರೀನ್ ಶೇರ್ ಮಾಡ್ಕೊಂಡಿದ್ದಾರೆ. ಟಾಲಿವುಡ್ ಮಾತ್ರವಲ್ಲದೇ ಬಾಲಿವುಡ್​ನಲ್ಲೊಂದು ಸಿನಿಮಾ ಮಾಡಿರೋ ಪೂಜಾ ಮತ್ತೊಂದು ಸಿನಿಮಾದ ರಿಲೀಸ್ ನಿರೀಕ್ಷೆಯಲ್ಲಿದ್ದಾರೆ.

ಹೀಗೆ ಸಕ್ಸಸ್ ಕಾಣ್ತಿರೋ ಈ ಬೆಡಗಿ ಅದ್ಯಾಕೋ ಸದಾ ಒಂದಲ್ಲ ಒಂದು ಸುದ್ದಿಯಿಂದ ಟಿಟೌನ್​ನಲ್ಲಿ ಸದ್ದು ಮಾಡ್ತಾನೆ ಇರ್ತಾರೆ. ಇತ್ತೀಚೆಗೆ ಬಿಕಿನಿ ತೊಟ್ಟು ಹಾಟ್ ಫೋಸ್ ಕೊಟ್ಟಿದ್ದ ಪೂಜಾ ಈಗ ಹೈದ್ರಾಬಾದ್​ನಲ್ಲಿ ಕಂಠ ಪೂರ್ತಿ ಕುಡಿದು ಕಾರ್ ಡ್ರೈವ್ ಮಾಡಿ ಪೊಲೀಸಪ್ಪನಿಗೆ ರೆಡ್​ ಹ್ಯಾಂಡ್​ ಆಗಿ ತಗ್ಲಾಕೊಂಡಿದ್ದಾರೆ.

ಅಂದಹಾಗೇ ಪೂಜಾ ಹೀಗೆ ಕಂಠಪೂರ್ತಿ ಕುಡಿದಿದ್ದು ಮಹರ್ಷಿ ಸಿನಿಮಾ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ. ಮಹೇಶ್ ಬಾಬು ಮತ್ತು ಪೂಜಾ ಹೆಗ್ಡೆ ಅಭಿನಯದ ಈ ಚಿತ್ರದ ಫ್ರೀ ರಿಲೀಸ್ ಕಾರ್ಯಕ್ರಮವನ್ನ ಹೈದ್ರಾಬಾದ್​ನಲ್ಲಿ ಹಮ್ಮಿಕೊಳ್ಳಾಗಿತ್ತು. ಈ ವೇಳೆ ಕಾರ್ಯಕ್ರಮ ಮುಗಿಸಿ ರಿರ್ಟನ್ ಆಗುವಾಗ ಡ್ರಿಕ್ಸ್ ಮಾಡಿ ಕಾರು ಚಲಾಯಿಸಿದ್ದಾರಂತೆ.


ಪೂಜಾ ಪೊಲೀಸರಿಗೆ ಸಿಕ್ಕಿಬೀಳ್ತಿದ್ದಂತೆ ಅವರ ಮ್ಯಾನೇಜರ್ ಹಾಗೂ ಕಾರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರಂತೆ. ತಕ್ಷಣ ಮ್ಯಾನೇಜರ್ ಪೂಜಾ ಹೆಗ್ಡೆಯನ್ನ ಬೇರೆ ಕಾರಿನಲ್ಲಿ ಕಳುಹಿಸಿಕೊಟ್ಟಿದ್ದಾರೆ ಎನ್ನಲಾಗ್ತಿದೆ. ಆದ್ರೆ ಈ ಇದೆಲ್ಲಾ ನಾನ್​ಸೆನ್ಸ್ ಸುಳ್ಳು ಅಂತಾ ಪೂಜಾ ಮ್ಯಾನೇಜರ್ ಕಡ್ಡಿ ಮುರಿದಂಗೆ ಹೇಳ್ತಿದ್ದಾರೆ. ಆದ್ರೆ ಈ ಬಗ್ಗೆ ಪೂಜಾ ಮಾತ್ರ ಮೌನ ಮುರಿದಿಲ್ಲ.