ವರ್ಷಗಳ ನಂತರ ಸ್ಯಾಂಡಲ್​ವುಡ್​ಗೆ ಮರಳಿದ ನಟಿ! ಡಾಕ್ಟರ್​ ಪಾತ್ರದಲ್ಲಿ ಅನುಪ್ರಭಾಕರ್​ ಕಮ್​ಬ್ಯಾಕ್​!!​

ಸ್ಯಾಂಡಲ್ ವುಡ್ ನ ಪ್ರತಿಭಾನ್ವಿತ ನಟಿ ಅನು ಪ್ರಭಾಕರ್ ಸಿನಿಮಾದಿಂದ ವಿರಾಮ ಪಡೆದಿದ್ದಾರೆ ಅಂತ ಅಭಿಮಾನಿಗಳು ನೊಂದುಕೊಳ್ಳುವ ಹೊತ್ತಿಗೆ ನಟಿ ಹಾಗೂ ಮುದ್ದಾದ ಮಗುವಿನ ತಾಯಿ ಅನುಪ್ರಭಾಕರ್ ಆಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.

ad

ಹೌದು ಸಧ್ಯ ಮುದ್ದು ಮಗಳ ಲಾಲನೆ ಪಾಲನೆಯಲ್ಲಿ ಬ್ಯುಸಿಯಾಗಿರುವ ಅನು ಈಗ ‘ಪ್ರೇಮಂ ಪೂಜ್ಯಂ’ ಚಿತ್ರದ ಮೂಲಕ ಕಮ್​ ಬ್ಯಾಕ್​ ಮಾಡಲು ಸಿದ್ಧವಾಗಿದ್ದಾರೆ. ಅಷ್ಟೇ ಅಲ್ಲ  ಅನುಪ್ರಭಾಕರ್ ಈ ಚಿತ್ರದಲ್ಲಿ ವೈದ್ಯೆ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

 

ಹೌದು ಮಗುವಿಗೆ ಜನ್ಮ ನೀಡಿದ ಬಳಿಕ ಅನು ಪ್ರಭಾಕರ್ ಒಪ್ಪಿಕೊಳ್ಳುತ್ತಿರುವ ಮೊದಲ ಸಿನಿಮಾ ಇದಾಗಿದ್ದು. ‘ಪ್ರೇಮಂ ಪೂಜ್ಯಂ’ ಮೂಲಕ  ಮತ್ತೊಮ್ಮೆ ಅನುಪ್ರಭಾಕರ್ ಸಿನಿ ಕೆರಿಯರ್ ಆರಂಭಿಸುತ್ತಿದ್ದಾರೆ.

‘ಪ್ರೇಮಂ ಪೂಜ್ಯಂ’ ಚಿತ್ರದಲ್ಲಿ ನೆನಪಿರಲಿ ಪ್ರೇಮ್ ಇರುವುದು ವಿಶೇಷ. ಅನು ಪ್ರಭಾಕರ್ ಚಿತ್ರದ ಕೊನೆಯಲ್ಲಿ ಎಂಟ್ರಿಕೊಡಲಿದ್ದಾರಂತೆ. ಕೆಲವೆ ನಿಮಿಷದ ಪಾತ್ರವಾದ್ರು ತುಂಬಾ ಪ್ರಮುಖ್ಯತೆ ಇದೆಯಂತೆ. ಈ ಪಾತ್ರದಿಂದ ಚಿತ್ರಕ್ಕೆ ಮಹತ್ವದ ತಿರುವು ಸಿಗಲಿದೆಯಂತೆ. ಹಾಗಾಗಿ ಚಿಕ್ಕಪಾತ್ರವಾದ್ರು ಒಳ್ಳೆಯ ಪಾತ್ರ ಮಾಡಿದ ಖುಷಿ ಅವರಿಗೆ ಸಿಗಲಿದೆಯಂತೆ.ಇನ್ನು ಚಿತ್ರಕ್ಕೆ ಡಾ.ರಾಘವೇಂದ್ರ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಪ್ರೇಮ್ ಗೆ ನಾಯಕಿಯಾಗಿ ಐಂದ್ರಿತಾ ರೇ ಮತ್ತು ಯುವ ಪ್ರತಿಭೆ ಬೃಂದಾ ಕಾಣಿಸಿಕೊಂಡಿದ್ದಾರೆ.