ಚುನಾವಣೆ ವೇಳೆ ರಿಲೀಸ್ ಆಗುತ್ತಾ ಬಿಎಸ್​ವೈ ಸ್ಪೋಟಕ ಸಿಡಿ?! ವಿನಯ್​ ಪೊಲೀಸರಿಗೆ ನೀಡ್ತಿರೋ ಸಿಡಿಯಲ್ಲೇನಿದೆ ಗೊತ್ತಾ?!

ರಾಜ್ಯದಲ್ಲಿ ಲೋಕಸಭೆ ಚುನಾವಣೆ ರಂಗೇರುತ್ತಿರುವ ಬೆನ್ನಲ್ಲೇ ಮಾಜಿ ಸಿಎಂ ಸಿಡಿ ಬಾಂಬ್ ಅಸ್ತ್ರ ಪ್ರಯೋಗಕ್ಕೆ ಸಿದ್ದತೆ ನಡೆಯುತ್ತಿದ್ದೆ. ಒಂದು ಕಾಲದಲ್ಲಿ ಈಶ್ವರಪ್ಪ ಪಿಎ ಆಗಿದ್ದ ವಿನಯ್​​ ಈ ಸಿಡಿ ಬಾಂಬ್​ ಸಿಡಿಸಿದ್ದು, ಸೂಕ್ತ ಭದ್ರತೆ ನೀಡಿದರೆ ಸಿಡಿ ಹಾಗೂ ಪೆನ್​ಡ್ರೈವ್​​ನ್ನು ತನಿಖಾಧಿಕಾರಿಗೆ ನೀಡಲು ಸಿದ್ಧವಿದ್ದೇನೆ ಎಂದಿದ್ದಾರೆ.


ಕಳೆದ ವರ್ಷ ಯಡಿಯೂರಪ್ಪ ಪಿಎ ಸಂತೋಷ್​ ಈಶ್ವರಪ್ಪ ಪಿಎ ವಿನಯ್​​ ರನ್ನು ಕಿಡ್ನಾಪ್​ ಮಾಡಿಸಲು ಯತ್ನಿಸಿದ ಪ್ರಕರಣ ವರದಿಯಾಗಿತ್ತು. ಈ ವೇಳೆ ವಿನಯ್ ಯಡಿಯೂರಪ್ಪ ಪಿಎ ಸಂತೋಷ್​ ವಿರುದ್ಧ ವಿನಯ್ ಪೊಲೀಸರಿಗೆ ದೂರು ನೀಡಿದ್ದರು. ಸಂತೋಷ್​ನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದ್ದರು.


ಈ ವಿಚಾರಣೆ ವೇಳೆ ಸಂತೋಷ್, ವಿನಯ್ ಬಳಿ ಯಡಿಯೂರಪ್ಪನವರಿಗೆ ಸಂಬಂಧಿಸಿದ ವಿಡಿಯೋ ಹಾಗೂ ಹಲವು ದಾಖಲೆಗಳ ಸಿಡಿ ಹಾಗೂ ಪೆನ್​ ಡ್ರೈವ್​ ಇದೆ. ಅದನ್ನು ವಶಪಡಿಸಿಕೊಳ್ಳುವುದಕ್ಕಾಗಿ ಕಿಡ್ನಾಪ್ ಯತ್ನ ನಡೆಸಿದ್ದಾಗಿ ಹೇಳಿಕೆ ನೀಡಿದ್ದ. ಈ ಹೇಳಿಕೆ ಆಧರಿಸಿ ಕ್ರಮಕೈಗೊಂಡ ಪೊಲೀಸರು ವಿನಯ್​​ಗೆ ಸಿಡಿ ಹಾಗೂ ಪೆನ್​ಡ್ರೈವ್​ಗಳನ್ನು ತನಿಖಾಧಿಕಾರಿಗೆ ಒದಗಿಸುವಂತೆ ಸೂಚಿಸಿದ್ದರು.


ಪೊಲೀಸ್ ನೊಟೀಸ್ ಕುರಿತು ಪ್ರತಿಕ್ರಿಯೆ ನೀಡಿರುವ ವಿನಯ್, ನನಗೆ ಮಹಾಲಕ್ಷ್ಮೀ ಲೇಔಟ್​​ ಪೊಲೀಸರು ದಾಖಲೆಗಳನ್ನು ಒದಗಿಸುವಂತೆ ಸೂಚನೆ ನೀಡಿದ್ದಾರೆ. ಆದರೆ ನನಗೆ ಜೀವಭಯವಿದೆ. ಹೀಗಾಗಿ ಸೂಕ್ತ ಭದ್ರತೆ ಒದಗಿಸಿದರೇ ಪೆನ್​ ಡ್ರೈವ್​ ಹಾಗೂ ದಾಖಲೆಗಳನ್ನು ಪೊಲೀಸರಿಗೆ ಒದಗಿಸಲು ನಾನು ಸಿದ್ಧನಿದ್ಧೆನೆ ಎಂದಿದ್ದಾನೆ. ಅಲ್ಲದೆ ದಾಖಲೆಗಳನ್ನು ಒದಗಿಸಿದ ಬಳಿಕವೂ ನನಗೆ ಸೂಕ್ತ ಭದ್ರತೆ ಒದಗಿಸಬೇಕೆಂದು ಅಮೃತಹಳ್ಳಿ ಪೊಲೀಸರ ಬಳಿ ಮನವಿ ಮಾಡಿದ್ದಾರೆ.