ಕಾಂಗ್ರೆಸ್ ಜೆಡಿಎಸ್ ಮೈತ್ರಿಯ ಅಸಲೀ ಕತೆಯಿದು !! ಜೈಲಿಗೆ ಹೋಗೋದನ್ನು ತಪ್ಪಿಸಲು ನಡೆದ ಮೈತ್ರಿಯಿದು ಅಂದ್ರು ಜೆಡಿಎಸ್ ಮಾಜಿ ಶಾಸಕ !!

ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದ್ದೇವೆ ಎಂದು ಹೇಳಿಕೊಳ್ಳುತ್ತಿದ್ದ ಕಾಂಗ್ರೆಸ್ ನ ಅಸಲೀ ಕತೆ ಬಹಿರಂಗವಾಗಿದೆ. ಕಾಂಗ್ರೆಸ್ ನಾಯಕರು ಜೈಲಿಗೆ ಹೋಗುವುದನ್ನು ತಪ್ಪಿಸಲು ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ ಎಂದು ಜೆಡಿಎಸ್ ಮಾಜಿ ಶಾಸಕ ಮಂಜುನಾಥ ಗೌಡ ಗಂಭೀರ ಆರೋಪ ಮಾಡಿದ್ದಾರೆ.

ad

ಕಾಂಗ್ರೆಸ್​​ ಜೊತೆ ಮೈತ್ರಿ ಮಾಡಿಕೊಂಡಿದ್ದು ಜೆಡಿಎಸ್​ ಕುಟುಂಬಕ್ಕೆ ಶಾಪವಾಗಿದೆ ಎಂದಿರುವ ಮಂಜುನಾಥ ಗೌಡಾ, ಹಲವಾರು ಅಕ್ರಮಗಳಲ್ಲಿ ಭಾಗಿಯಾಗಿರುವ ಕಾಂಗ್ರೆಸ್​ ನಾಯಕರು ತಾವು ಜೈಲಿಗೆ ಹೋಗುವುದನ್ನು ತಪ್ಪಿಸಿಕೊಳ್ಳುವುದಕ್ಕೆ ಜೆಡಿಎಸ್​​ ಜೊತೆ ಕೈ ಜೋಡಿಸಿದ್ದಾರೆ ಎಂದು ಹಲವು ಅಕ್ರಮಗಳ ಬಗ್ಗೆ ಉಲ್ಲೇಖಿಸದೇ ಕಾಂಗ್ರೆಸ್​ ನಾಯಕರಿಗೆ ಟಾಂಗ್ ನೀಡಿದ್ದಾರೆ.

ಜೆಡಿಎಸ್​ ಪಕ್ಷ ಇಲ್ಲ ಅಂದ್ರೆ ಕಾಂಗ್ರೆಸ್​ನವರು ಜೈಲಿಗೆ ಹೋಗಬೇಕಾಗಿತ್ತು. ನಾವು 38 ಸ್ಥಾನ ಗೆದ್ದಿದ್ದಕ್ಕೆ ಕಾಂಗ್ರೆಸ್​ನವರು ಜೈಲಿಗೆ ಹೋಗದೇ ಉಳಿದಿದ್ದಾರೆ. ಕಾಂಗ್ರೆಸ್​ನವರು ಜೈಲಿಗೆ ಹೋಗುವುದನ್ನು ತಪ್ಪಿಸಿಕೊಳ್ಳಲು ನಮ್ಮೊಂದಿಗೆ ಮೈತ್ರಿ ಮಾಡಿಕೊಂಡು ಕುಮಾರಸ್ವಾಮಿಯವರನ್ನು ಸಿಎಂ ಮಾಡಿದ್ದಾರೆ ಎಂದು ಮಂಜುನಾಥ ಹೇಳಿದ್ದಾರೆ.

ಕೋಲಾರ ಹಾಲುಒಕ್ಕೂಟದ ಚುನಾವಣೆಗೆ ಆಗಮಿಸಿದ ವೇಳೆ ಬಿಟಿವಿ ಜೊತೆ ಮಾತನಾಡಿದ ಮಾಜಿ ಶಾಸಕ ಮಂಜುನಾಥ ಗೌಡ, ಇವತ್ತು ಕಾಂಗ್ರೆಸ್ ಶಾಸಕರು ಇಲ್ಲಸಲ್ಲದ ಹೇಳಿಕೆಗಳನ್ನು ನೀಡುತ್ತಿದ್ದಾರೆ, ಕಾಂಗ್ರೆಸ್​ ಶಾಸಕರು ಸಿಎಂಗೆ ನಿಯತ್ತಾಗಿ ಇರಬೇಕಾಗಿತ್ತು. ಆದರೆ ಕಾಂಗ್ರೆಸ್​ ನಾಯಕರು ಜೆಡಿಎಸ್​ ಪಕ್ಷವನ್ನು ನಿರ್ನಾಮ ಮಾಡಲು ಹೊರಟಿದ್ದಾರೆ. ಮಂಡ್ಯ, ತುಮಕೂರಿನಲ್ಲಿ ಕಾಂಗ್ರೆಸ್​​ನವರು ಜೆಡಿಎಸ್​​ಗೆ ಮತ ಹಾಕದ ವಿರುದ್ಧವಾಗಿ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದರು.

ಒಟ್ಟಿನಲ್ಲಿ ರಾಜ್ಯದಲ್ಲಿ ದೋಸ್ತಿ ನಡುವೆ ಆರಂಭವಾಗಿರುವ ಅಸಮಾಧಾನ ಹಾಗೂ ಪರಸ್ಪರ ಆರೋಪ , ಪ್ರತ್ಯಾರೋಪ ನಿಧಾನಕ್ಕೆ ಎಲ್ಲೆಡೆ ವ್ಯಾಪಿಸತೊಡಗಿದ್ದು, ಹಾಲಿ ಹಾಗೂ ಮಾಜಿ ನಾಯಕರು ದೋಸ್ತಿ ಜಗಳಕ್ಕೆ ಮತ್ತಷ್ಟು ತುಪ್ಪ ಸುರಿಯುವ ಕೆಲಸ ಆರಂಭಿಸಿದ್ದಾರೆ. ಇದರ ಮಧ್ಯೆ ಮೈತ್ರಿಯ ಅಸಲೀ ಕತೆಯನ್ನು ಜೆಡಿಎಸ್ ಮಾಜಿ ಶಾಸಕ ಮಂಜುನಾಥ ಗೌಡರು ಬಿಚ್ಚಿಟ್ಟಿದ್ದು, ಕೈ ನಾಯಕರು ಸ್ಪಷ್ಟೀಕರಣ ನೀಡಬೇಕಿದೆ.