ಮಳೆಗೆ ಮಸಣವಾಯ್ತು ಮನೆ! ತಡರಾತ್ರಿ ಕುಸಿದ ಮೇಲ್ಛಾವಣಿಗೆ ಒಂದೇ ಕುಟುಂಬದ 6 ಜನರ ಸಾವು!!

ಬೀದರ್ ಜಿಲ್ಲಾ ಬಸವಕಲ್ಯಾಣ ನಗರದ ಚಿಲ್ಲಾ ಬಡವಾವಣೆಯಲ್ಲಿ ಮನೆಯ ಮಾಳಿಗೆ ಕುಸಿದು ತಂದೆ ತಾಯಿ ಸೇರಿದಂತೆ ಒಂದೇ ಕುಟುಂಬದ 6 ಜನ ಮೃತಪಟ್ಟಿದ್ದಾರೆ .ನಸುಕಿನ ಜಾವ ಏಕಾಏಕಿ ಮನೆಯ ಮೇಲ್ಛಾವಣಿ ಕುಸಿದ ಪರಿಣಾಮ ಮನೆಯಲ್ಲಿ ಮಲಗಿದ್ದ  ಆರು ಜನ ಮೃತಪಟ್ಟಿದ್ದಾರೆ.

ad

ಮನೆಯಲ್ಲಿ ಎಲ್ಲರೂ ಗಾಢ ನಿದ್ದೆಯಲ್ಲಿರುವಾಗ ಏಕಾಏಕಿ ಮನೆಯ ಮೇಲ್ಛಾವಣಿ ಕುಸಿದು ಬಿದ್ದಿದೆ. ಒಂದೇ ಕುಟುಂಬದ ಆರು ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ನದೀಮ್ ಶೇಕ್(45), ಪತ್ನಿ ಫರೀದಾ ಬೇಗ್ಂ (34) ಮಕ್ಕಳಾದ ಆಯುಷಾ ಬಾನು( 15) ,ಮೇಹತಾಬಿ (14) ,ಫಜಾನಾಲಿ(9), ಫರಾನ ಅಲಿ(5) ದುರ್ಮರಣ ಹೊಂದಿದ್ದಾರೆ.

2 ದಿನಗಳ ಹಿಂದೆ ಸುರಿದಿದ್ದ ಮಳೆಗೆ ಮನೆಯ ಗೋಡೆಗಳು ಶಿಥಿಲಗೊಂಡಿದ್ದವು ಎನ್ನಲಾಗಿದೆ. ನಿನ್ನೆ ತಡರಾತ್ರಿ ಕುಸಿದಿದ್ದು,  ನಿದ್ರೆಯಲ್ಲಿದ್ದ ಮನೆಯ ಸದಸ್ಯರೆಲ್ಲರೂ ಒಂದೇ ಸಲ ಸಾವಿನ ಮನೆ ಸೇರಿದ್ದಾರೆ. ಸ್ಥಳೀಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ  ನಡೆಸಿದ್ದಾರೆ.