ಸಾಲಮನ್ನಾ ಬೇಡ ಎನ್ನುವ ದರ್ಶನ ತಮ್ಮ ಚಿತ್ರಕ್ಕೆ ಅರ್ಧ ಸಂಭಾವನೆ ಪಡೆಯಲಿ ನೋಡೋಣ! ದಚ್ಚುಗೆ ರೈತ ಮುಖಂಡ ಕೋಡಿಹಳ್ಳಿ ಚಾಲೆಂಜ್​​!!

ರೈತರ ಸಾಲಮನ್ನಾ ಮಾಡುವುದು ಬೇಡ ರೈತರ ಬೆಳೆಗಳಿಗೆ ಬೆಂಬಲ ನೀಡಿ ಎಂಬ ದರ್ಶನ ಹೇಳಿಕೆಗೆ ರಾಜ್ಯದಾದ್ಯಂತ ರೈತ ಮುಖಂಡರ ತೀವ್ರ ವಿರೋಧ ವ್ಯಕ್ತವಾಗಿದೆ. ದರ್ಶನ ಹೇಳಿಕೆಗೆ ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿರುವ ರೈತಮುಖಂಡ ಕೋಡಿಹಳ್ಳಿ ಚಂದ್ರಶೇಖರ್,  ರೈತರಿಗೆ ಸಾಲ ಮನ್ನಾ ಬೇಡ ಎನ್ನುವ ನೀವು ನಿಮ್ಮ ಚಿತ್ರಕ್ಕೆ ಅರ್ಧ ಸಂಭಾವನೆ ತೆಗೆದುಕೊಳ್ಳಿ ನೋಡೋಣ ಎಂದು ಸವಾಲೆಸೆದಿದ್ದಾರೆ.

ad

ಇತ್ತೀಚಿಗೆ ವಿದ್ಯಾರ್ಥಿಗಳ ಜೊತೆ ಸಂವಾದಕ್ಕಾಗಿ ಬೆಂಗಳೂರಿನ ವಿವಿ.ಪುರಂನ BIT ಕಾಲೇಜಿಗೆ  ಅತಿಥಿಯಾಗಿ ಭೇಟಿ ನೀಡಿದ್ದ ನಟ ದರ್ಶನ, ”ನಮಗೆ ಸರ್ಕಾರ ಸಾಲಮನ್ನಾ ಮಾಡೋದು ಬೇಡ. ರೈತರು ಬೆಳೆದ ಬೆಲೆಗೆ ಸರಿಯಾದ ಬೆಲೆ ಕೊಟ್ರೆ ಸಾಕು” ಎನ್ನುವ ಮೂಲಕ  ಸಿ.ಎಂ ಕುಮಾರಸ್ವಾಮಿರವರಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದರು.

ನಿಮಗೆ ರೈತರ ಸಾಲಮನ್ನಾ ಮಾಡಲು ಸಾಧ್ಯವಾಗದೇ ಇದ್ದರೆ, ಅವರಿಗೆ ಬೆಂಬಲ ಬೆಲೆ ಕೊಡಿ. ಆಗ ರೈತರೇ ಸಾಲ ತೀರಿಸುತ್ತಾರೆ. ನಾವೆಲ್ಲ ಇಲ್ಲಿ ನೆಮ್ಮದಿಯಾಗಿ ಇದ್ದೀವಿ ಅಂದರೆ ಅದಕ್ಕೆ ಕಾರಣ ನಮ್ಮನ್ನು ಕಾಯುತ್ತಿರುವ ಸೈನಿಕರು. ಅದೇ ರೀತಿ ತುಂಬಾ ಕಡೆ ಸಾಲಮನ್ನ ಮಾಡಿಲ್ಲ, ಎಂದು ಹೇಳುತ್ತಾ ರೈತರ ಸಾಲಮನ್ನಾ ಮಾಡುವುದು ಬೇಡ. ಅವರಿಗೆ ಬೆಂಬಲ ಕೊಟ್ಟರೆ ಸಾಕು ರೈತರೇ ತಮ್ಮ ತಮ್ಮ ಸಾಲವನ್ನು ತೀರಿಸಿಕೊಳ್ಳುತ್ತಾರೆ. ರೈತರಿಗೆ ಸಾಲ ತೀರಿಸುವ ಶಕ್ತಿ ಇದೆ ಎಂದು ಹೇಳಿದರು.

ಈ ಹೇಳಿಕೆಯ ವಿರುದ್ದ ಹಲವಾರು ರೈತರು ಡಿ ಬಾಸ್ ವಿರುದ್ದ ಸಿಡಿದೆದ್ದಿದ್ದಾರೆ. ಸದ್ಯ ಈ ವಿಚಾರವಾಗಿ ಕೋಡಿ ಹಳ್ಳಿ ಚಂದ್ರಶೇಖರ್ ರವರು ಸಹ ಡಿ ಬಾಸ್ ದರ್ಶನ್ ವಿರುದ್ದ ಗುಡುಗಿದ್ದಾರೆ.  ಸಾಲ ತೀರಿಸಲಾಗದೇ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.  ಇದು ದರ್ಶನ್ ರವರಿಗೆ ಗೊತ್ತಾ..? ರೈತರ ಜೀವನದ ಬಗೆಗೆ ದರ್ಶನ್ ಗೇನು ಗೊತ್ತು? ದರ್ಶನ್ ಅರಿವಿಲ್ಲದೆ ಮಾತನಾಡಿದ್ದಾರೆ. ದರ್ಶನ್ ಗೆ ತಿಳುವಳಿಕೆ ಇಲ್ಲ. ತಿಳುವಳಿಕೆ ಇದ್ದರೆ ಹೀಗೆ ಮಾತನಾಡುತ್ತಿರಲಿಲ್ಲ ಎಂದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ರೈತರ ಬಗೆಗೆ ತಿಳಿದಿಲ್ಲ ಎಂದರೆ ನಮ್ಮಂತವರ ಜೊತೆ ಚರ್ಚೆ ನಡೆಸಿ ತಿಳಿದುಕೊಂಡು ನಂತರ ಹೇಳಿಕೆ ಕೊಡಬೇಕು.

ರಾಜಕೀಯ ಅಖಾಡದಲ್ಲಿ ಧುಮುಕಿರುವ ಹಿನ್ನೆಲೆ ತನಗೆ ಏನು ಅನಿಸಿದೆಯೋ ಅದನ್ನು ಹಾಗೆಯೇ ಹೇಳುತ್ತಿದ್ದಾರೆ. ಅವರ ಹೇಳಿಕೆಯು ತಪ್ಪು ಎಂಬುವುದನ್ನು ಅರಿತು ಅವರ ತಪ್ಪನ್ನು ತಿದ್ದಿಕೊಳ್ಳಬೇಕೆಂದು ದರ್ಶನ್ ಗೆ ಕಿವಿಮಾತನ್ನು ಹೇಳುತ್ತೇನೆ ಎಂದು ಹೇಳಿದರು.
ಇಷ್ಟೇಲ್ಲಾ ರೈತರ ಬಗ್ಗೆ ಕಳಜಿ ತೋರಿಸುವ ದರ್ಶನ್ ಅರ್ಧ ಸಂಭಾವನೆ ತೆಗೆದುಕೊಳ್ಳಲಿ ನೋಡೋಣ ಎಂದು ಚಾಲೆಂಜಿಗ್ ಸ್ಟಾರ್ ಗೆ ಕೋಡಿ ಹಳ್ಳಿ ಚಂದ್ರಶೇಖರ್ ಚಾಲೆಂಜ್ ಹಾಕಿದರು.

“ಬೆಂಬಲ ಬೆಲೆ ಎನ್ನುವುದು ಮೊಸಗಾರರು, ಮೂರ್ಖರು ಆಡುವ ಮಾತು. ಸಿನಿಮಾದಲ್ಲಿ ಅರ್ಧ ಸಂಭಾವನೆ ತೆಗೆದುಕೊಳ್ಳುತ್ತೇನೆ ಎಂದು ಹೇಳಲಿ ದರ್ಶನ್ ಆಗ ಐಷಾರಾಮಿ ಕಾರುಗಳಲ್ಲಿ ಓಡಾಡಲು ಆಗುತ್ತಾ ಅವರಿಗೆ, ಅವರ “ಯೋಗ್ಯತೆ ತಕ್ಕಂತೆ ಅವರು ಸಂಭಾವನೆ ಪಡೆಯುತ್ತಾರೆ. ಹಾಗೆಯೇ ರೈತರಿಗೂ ಸರಿಯಾದ ಬೆಲೆ ಸಿಗಬೇಕು. ಅದನ್ನು ತಿಳಿದುಕೊಂಡು ದರ್ಶನ್ ಮಾತನಾಡ ಬೇಕು” ಎಂದು ದರ್ಶನ್ ಗೆ ಬುದ್ದಿ ಹೇಳಿದರು.