ರಾಹುಲ್​​ ಗಾಂಧಿ ಟೀಕಿಸುವವರಿಗೆ ಗುಜರಾತ ಫಲಿತಾಂಶ ಉತ್ತರ- ಡಾ.ಜಿ.ಪರಮೇಶ್ವರ್ ಹೇಳಿಕೆ

ಗುಜರಾತ ಚುನಾವಣೆಯ ಫಲಿತಾಂಶ್​ ಬಹುತೇಕ ಘೋಷಣೆಯಾಗಿದ್ದು, ನೆಕ್​ ಟು ನೆಕ್​ ಫೈಟ್​​​ನಲ್ಲಿ ಕಾಂಗ್ರೆಸ್​ ಜೊತೆ ಸೆಣೆಸಿದ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯೋದು ಬಹುತೇಕ ಖಚಿತವಾಗಿದೆ.

ಈ ಮಧ್ಯೆ ಗುಜರಾತ ಕಾಂಗ್ರೆಸ್​​​​ನ ಮಹತ್ವದ ಸಾಧನೆ ಹಾಗೂ ದಾಖಲಾರ್ಹ ಸೀಟ್​​ಗಳ ಗಳಿಕೆಯ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್​ ಖುಷಿ ವ್ಯಕ್ತಪಡಿಸಿದ್ದು, ರಾಹುಲ್ ಗಾಂಧಿಯ ಬಗ್ಗೆ ಆರೋಪ ಮಾಡಿದವರಿಗೆ ಈ ಫಲಿತಾಂಶ ಉತ್ತರ ಎಂದಿದ್ದಾರೆ.
ಸದಾಶಿವನಗರದ ನಿವಾಸದಲ್ಲಿ ಮಾತನಾಡಿದ ಡಾ.ಜಿ.ಪರಮೇಶ್ವರ್, ಗುಜರಾತ ಚುನಾವಣಾ ಫಲಿತಾಂಶಕ್ಕೂ ರಾಜ್ಯಕ್ಕೂ ಸಂಬಂಧವಿಲ್ಲ. ಸ್ವಲ್ಪ ಮಟ್ಟಿಗೆ ಪರಿಣಾಮ ಬೀರಬಹುದು. ಆದರೇ ರಾಜ್ಯದ ಚುನಾವಣೆ                                                                              ಸ್ಥಳೀಯ ಬೆಳವಣಿಗೆಗಳ ಮೇಲೆ ನಿಂತಿರುತ್ತೆ ಎಂದಿದ್ದಾರೆ.

ಇನ್ನು ಗುಜರಾತಿನಲ್ಲಿ ಕಾಂಗ್ರೆಸ್​ ಪಕ್ಷ ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ಕಾಂಗ್ರೆಸ್ ದಾಪುಗಾಲು ಇಟ್ಟಿರುವುದನ್ನು ಪರಮೇಶ್ವರ್ ಶ್ಲಾಘಿಸಿದ್ದು, ರಾಷ್ಟ್ರ ರಾಜಕಾರಣದ ಮೇಲೆ ಈ ಫಲಿತಾಂಶ ಪರಿಣಾಮ ಬೀರಲಿದೆ ಎಂದಿದ್ದಾರೆ. ಒಟ್ಟಿನಲ್ಲಿ ಕಾಂಗ್ರೆಸ್​ ಗುಜರಾತಿನಲ್ಲಿ ಅಧಿಕಾರ ಪಡೆಯದೇ ಇದ್ದರೂ ಗಳಿಸಿರುವ ಸ್ಥಾನಗಳು ಪ್ರಧಾನಿ ಮೋದಿ ಹಾಗೂ ಬಿಜೆಪಿ ವಿರುದ್ಧ ಗುಜರಾತಿನಲ್ಲಿ ಸೃಷ್ಟಿಯಾಗಿರುವ ಬಿಜೆಪಿ ವಿರೋಧಿ ಅಲೆಗೆ ಸಾಕ್ಷಿಯಾಗಿದೆ.