ವಿಶ್ವಕಪ್​ಗೆ ಭಾರತ ತಂಡ ಪ್ರಕಟ, ಕರ್ನಾಟಕದ ರಾಹುಲ್ ​​​ಗೆ ಸ್ಥಾನ! ವಿಶ್ವಕಪ್​​ ಗೆಲುವಿಗಾಗಿ ಬಲಿಷ್ಠ ತಂಡ ರೂಪಿಸಿದ ಬಿಸಿಸಿಐ !!

ಬಹು ನಿರೀಕ್ಷಿತ ೧೨ ನೇ ವಿಶ್ವಕಪ್ ಕ್ರಿಕೇಟ್ ಟೂರ್ನಿಗೆ ಭಾರತದ ೧೫ ಸದಸ್ಯರ ತಂಡವನ್ನ ಬಿಸಿಸಿಐ ಇಂದು ಪ್ರಕಟಗೊಳಿಸಿದೆ. ಮೇ ತಿಂಗಳಲ್ಲಿ ಕ್ರಿಕೆಟ್ ಜನಕರ ನಾಡು ಇಂಗ್ಲೆಂಡ್ ನಲ್ಲಿ ಆರಂಭವಾಗಲಿರುವ ವಿಶ್ವಕಪ್ ಟೂರ್ನಿಯಲ್ಲಿ ಗೆಲ್ಲುವ ನೆಚ್ಚಿನ ತಂಡಗಳಲ್ಲೊಂದಾಗಿದ್ದು ಬಿಸಿಸಿಐ ಬಲಿಷ್ಠ ತಂಡವನ್ನೆ ಬಿಡುಗಡೆ ಮಾಡಿದೆ.

ವಿರಾಟ್ ಕೊಹ್ಲಿ( ನಾಯಕ) ರೋಹಿತ್ ಶರ್ಮಾ( ಉಪನಾಯಕ) ಶಿಖರ್ ಧವನ್, ಕೆ ಎಲ್ ರಾಹುಲ್, ಎಂ ಎಸ್ ಧೋನಿ, ಕೇದಾರ್ ಜಾಧವ್, ವಿಜಯ್ ಶಂಕರ್, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯಾ, ರವೀಂದ್ರ ಜಡೇಜಾ, ಯಜುವೇಂದ್ರ ಚಾಹಲ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬೂಮ್ರಾ, ಭುವನೇಶ್ವರ್ ಕುಮಾರ್‌‌ ಹಾಗೂ ಮಹಮ್ಮದ್ ಶಮಿ.

೧೫ ಸದಸ್ಯರ ಭಾರತೀಯ ತಂಡದಲ್ಲಿ ಈ ಬಾರಿ ನಾಲ್ವರು ಅಲ್ರೌಂಡರ್ ಗಳಿ ಅವಕಾಶ ನೀಡಿದೆ. ರವೀಂದ್ರ ಜಡೇಜಾ ಹಾಗೂ ಕೇದಾರ್ ಜಾಧವ್ ಬ್ಯಾಟಿಂಗ್ ಜೊತೆ ಸ್ಪಿನ್ ಬೌಲಿಂಗ್ ಮಾಡಿದ್ರೆ ವಿಜಯ್ ಶಂಕರ್ ಹಾಗೂ ಹಾರ್ದಿಕ್ ಪಾಂಡ್ಯಾ ಬ್ಯಾಟಿಂಗ್ ಜೊತೆಗೆ ಮಧ್ಯಮವೇಗದ ಬೌಲಿಂಗ್ ಕೂಡ ಮಾಡಬಲ್ಲರು.

ಯೆಸ್ ಈ ಬಾರಿಯ ವಿಶ್ವಕಪ್ ತಂಡದಲ್ಲಿ ಕರ್ನಾಟಕದ ಕೆ ಎಲ್ ರಾಹುಲ್ ಸ್ಥಾನ ಪಡೆದಿರುವ ಏಕೈಕ ಕನ್ನಡಿಗ. ಕಳೆದ ಬಾರಿ ಯಾವುದೇ ಕನ್ನಡಿಗ ವಿಶ್ವಕಪ್ ತಂಡದಲ್ಲಿರಲಿಲ್ಲ. ಆದರೆ ಈ ಕೊರಗನ್ನ ಈ ಬಾರಿ ಕೆ ಎಲ್ ರಾಹುಲ್ ನೀಗಿಸಿದ್ದಾರೆ. ರಾಹುಲ್ ನಾಲ್ಕನೆ ಕ್ರಮಾಂಕದ ಬ್ಯಾಟ್ಸಮನ್ ಆಗಿ ತಂಡ ಸೇರಿದ್ದರು.ಹೆಚ್ಚುವರಿಯಾಗಿ ವಿಕೇಟ್ ಕೀಪಿಂಗ್ ಸಹ ನಿಭಾಯಿಸಬಲ್ಲರು. ಹಾಗಾಗಿ ಈ ಬಾರಿ ನಾಯಕ ಎಂ ಎಸ್ ಧೋನಿ ಹಾಗೂ ದಿನೇಶ್ ಕಾರ್ತಿಕ್ ಸೇರಿ ಮೂವರು ವಿಕೇಟ್ ಕೀಪರ್ ಗಳು ತಂಡದಲ್ಲಿದ್ದಾರೆ.

ಒಟ್ಟಾರೆಯಾಗಿ ಬಿಸಿಸಿಐ ಆರು ಜನ ಬ್ಯಾಟ್ಸಮನಗಳು ಮೂವರು ವೇಗಿಗಳು ಇಬ್ಬರು ಖಾಯಂ ಸ್ಪಿನ್ನರ್ ಗಳು ಹಾಗೂ ನಾಲ್ವರು ಆಲ್ರೌಂಡರಗಳ ತಂಡವನ್ನ ಪ್ರಕಟ ಮಾಡಿದ್ದು, ಮತ್ತೊಮ್ಮೆ ವಿಶ್ವಕಪ್ ಭಾರತದ ಮುಡಿಗೇರುವ ಕನಸು ಗರಿಗೆದರಿದೆ.