ವೈದ್ಯರಿಗೆ ಬ್ಲಾಕ್​ ಮೇಲ್​​ ಮಾಡ್ತಿದ್ದ ಮೂವರು ವರದಿಗಾರರ ಬಂಧನ

ವೈದ್ಯರಿಗೆ ಬ್ಲಾಕ್​ ಮೇಲ್​​ ಮಾಡುತ್ತಿದ್ದ ಮೂವರು ವರದಿಗಾರರನ್ನು ಪೋಲಿಸರು ಬಂದಿಸಿದ್ದಾರೆ.

 

ಈ ವರದಿಗಾರರು ವಿಜಯಪುರದ ವೈದ್ಯರೊಬ್ಬರಿಗೆ ಬ್ಲಾಕ್​ ಮೇಲ್​​ ಮಾಡುವ ಮೂಲಕ ಹಣ ಪಡೆಯುತ್ತಿರುವ ರೆಡ್​ ಹ್ಯಾಂಡ್​ಆಗಿ ಸಿಕ್ಕಿಹಾಕಿಕೊಂಡಿದ್ದಾರೆ. ಖ್ಯಾತ ಸೋನೊಗ್ರಫಿ ಕ್ಲಿನಿಕ್ ವೈದ್ಯ ಕಿರಣ್​​​ ಡಾ.ವೋಸ್ವಾಲ್​​ ಎಂಬುವವರು ಲಿಂಗ ಪತ್ತೆ ಹಚ್ಚುವ ಮೂಲಕ ಸಾವಿರಾರು ಹೆಣ್ಣು ಭ್ರೂಣ ಹತ್ಯೆ ಮಾಡುತ್ತಿದ್ದರು.

 

 

ಈ ಭ್ರೂಣ ಹತ್ಯೆ ಆರೋಪವನ್ನು ಹೊತ್ತಿದ್ದ ವೈದ್ಯರನ್ನು ವರದಿಗಾರರಾದ ಪ್ರಸನ್ನ ದೇಶಪಾಂಡೆ, ರವಿ ಬಿಸನಾಳ, ಬಸವರಾಜು ವೈದ್ಯರಿಗೆ 15 ಲಕ್ಷ ಹಣ ನೀಡಬೇಕಾಗಿ ಬೇಡಿಕೆ ಇಟ್ಟಿದ್ದರು.

 

 

ಕೊನೆಗೆ 10 ಲಕ್ಷ ಹಣವನ್ನು ಪಡೆಯುವುದಾಗಿ ಒಪ್ಪಿಕೊಂಡು ಹಣ ಪಡೆಯುವಾಗ ರೆಡ್ ರೆಡ್​ ಹ್ಯಾಂಡ್​ಆಗಿ ಸಿಕ್ಕಿ ಈ ನಾಲ್ವರ ವಿರುದ್ಧ ಎಫ್​​ಐಆರ್ ರನ್ನು ವಿಜಯಪುರದ APMC ಠಾಣೆಯಲ್ಲಿ ದಾಖಲಿಸಿ ಆರೋಪಿಗಳನ್ನು ಬಂಧಿಸಲಾಗಿದೆ. ಎಂದು ವಿಜಯಪುರದ ಜಿಲ್ಲಾ ಎಸ್ಪಿ ಪ್ರಕಾಶ್ ಅಮೃತ್ ನಿಕ್ಕಂರವರು ಮಾಹಿತಿ ನೀಡಿದರು.

 

 

ಈಗ ಉದ್ಭವವಾಗಿರುವ ಪ್ರಶ್ನೆ ಎಂದರೆ ಎಫ್​ಐಆರ್ ಹಾಕುವ ಮೂಲಕ ವರದಿಗಾರರನ್ನು ಅರೆಸ್ಟ ಮಾಡಿದೀರಿ. ಆದರೆ ಲಿಂಗಪತ್ತೆ ಹಚ್ಚಿ ನೂರಾರು ಹೆಣ್ಣು ಶಿಶುಗಳ ಹತ್ಯೆ ಮಾಡುತ್ತಿದ್ದ ಗಂಭೀರ ಆರೋಪ ಹೊತ್ತ ಡಾ.ಕಿರಣ್​ ವೋಸ್ವಾಲ್​​​ ರ ಮೇಲೆ ಯಾಕೆ ಎಫ್​​ಐಆರ್​​​ ಹಾಕದೇ ಇರುವೀರಿ. ಎಂದು ಕೆಲವರು ಪೊಲಿಸರನ್ನು ಪ್ರಶ್ನಿಸುತ್ತಿದ್ದಾರೆ.