ಶ್ರೀಲಂಕಾ ಸರಣಿ ಬಾಂಬ್​ ಸ್ಪೋಟ್ ಪ್ರಕರಣ! ಸಾವನ್ನು ಬ್ಯಾಗಿನಲ್ಲಿ ಹೊತ್ತುತಂದವರ ಚಿತ್ರ ಸಿಸಿಟಿವಿಯಲ್ಲಿ ಸೆರೆ!!

ಶ್ರೀಲಂಕಾ ದೇಶದಲ್ಲಿ ಭಾನುವಾರ ಸರಣಿ ಬಾಂಬ್ ಸ್ಪೋಟ ನಡೆದಿತ್ತು. ಈ ಸ್ಪೋಟದಲ್ಲಿ ಕರ್ನಾಟಕದ 7 ಮಂದಿ ಕನ್ನಡಿಗರು ಸಾವನ್ನಪ್ಪಿದರು.ಶಾಂಗ್ರಿಲಾ ಹೋಟೆಲ್ ನಲ್ಲಿಯೂ ಸಹ ಉಗ್ರರು ಬಾಂಬ್ ದಾಳಿ ನಡೆಸಿದ್ದರು. ಹೋಟೆಲ್ ಗೆ ಪ್ರವೇಶಿಸಿದ ಆತ್ಮಾಹುತಿ ಬಾಂಬರ್ಸ್​​​​  ದೃಶ್ಯ ಸಿಸಿಟಿವಿಯಲ್ಲಿ  ಸೆರೆಯಾಗಿದೆ.

ad

ಕರ್ನಾಟಕ ಮೂಲದ ಹನುಮಂತಪ್ಪ ಹಾಗೂ ಸ್ನೇಹಿತರು ಅದೇ ಹೋಟೆಲ್ ನ ಕೊಠಡಿಯೊಂದರಲ್ಲಿ ತಂಗಿದ್ದರು. ಈ ವೇಳೆ ಶಂಕಿತ ಉಗ್ರರಿಬ್ಬರು ಹೋಟೆಲ್ ಒಳಗೆ ಪ್ರವೇಶಿಸಿದ ವೀಡಿಯೋ ಸಿಸಿಟಿವಿಯೊಂದರಲ್ಲಿ ಸೆರೆಯಾಗಿದೆ. 13ನೇ ಕೊಠಡಿ ಲಿಫ್ಟ್​ನಲ್ಲಿ ಆತ್ಮಾಹುತಿ ಬಾಂಬರ್ಸ್​​​​ ಕಾಣಿಸಿಕೊಂಡಿದ್ದು, ಬೆನ್ನ ಮೇಲೆ ಬ್ಯಾಗ್ ಒಂದನ್ನು ಏರಿಸಿಕೊಂಡು, ತಲೆ ಮೇಲೆ ಟೋಪಿ ಧರಿಸಿ ಹೋಟೆಲ್ ಒಳ ಪ್ರವೇಶಿಸಿದರು. ಆ ಉಗ್ರ ಪಾಪಿಗಳು ಹೋಟೆಲ್ ಒಳಗೆ ಬಂದ ಕೆಲವೇ ಸೆಕೆಂಡುಗಳಲ್ಲಿ ಹೋಟೆಲ್ ನಲ್ಲಿ ಬಾಂಬ್ ಸ್ಪೋಟಗೊಂಡಿದೆ. ಎಂದು ವಿಡಿಯೋ ಹಾಗೂ ಹಲವು ಮಾಹಿತಿಗಳ ಮೂಲಕ ತಿಳಿದು ಬಂದಿದೆ.

ಹಾಗೂ ಕತುವಾಪಿಟಿಯಾ ಚರ್ಚ್​​ ಬಳಿಯೂ ಕೂಡ ಇದೇ ರೀತಿಯಲ್ಲಿ ವ್ಯಕ್ತಿಯೊಬ್ಬನು ಚರ್ಚ್​ನಲ್ಲಿ ಪ್ರಾರ್ಥನೆ ನಡೆಯುವ ಸಮಯಕ್ಕೆ ಸರಿಯಾಗಿ ಒಂದು ಬ್ಯಾಗ್ ಧರಿಸಿಕೊಂಡು ಚರ್ಚ್​ಗೆ ಪ್ರವೇಶಿಸಿ ಬಾಂಬ್ ಸ್ಪೋಟಿಸಿದ್ದನು.ಕತುವಾಪಿಟಿಯಾ ಚರ್ಚ್​​ಗೆ ಬಂದ ವ್ಯಕ್ತಿಯ ಬ್ಯಾಗಿ​ಗೂ ಹಾಗೂ ಶಾಂಗ್ರಿಲಾ ಹೋಟೆನಲ್ಲಿ ಗೋಚರಿಸಿದ ವ್ಯಕ್ತಿಯ ಬ್ಯಾಗ್​ಗೂ ಸಾಮ್ಯತೆ ಇದ್ದು, ಬ್ಯಾಗ್​ಗಳು ಬಹುತೇಕ ಒಂದೇ ರೀತಿಯಲ್ಲಿದೆ.  ಶ್ರೀಲಂಕಾದ ಕೊಲಂಬೋ ಸರಣಿ ಸ್ಫೋಟ ಇದುವರೆಗೂ 400 ಅಮಾಯಕ ಜನರ ಬಲಿಯನ್ನು ಪಡೆದು ಕೊಂಡಿದೆ.

Btv News Live @ 3 PM

BtvNews ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಬುಧವಾರ, ಏಪ್ರಿಲ್ 24, 2019