ಬೆಂ. ದಕ್ಷಿಣ ಕ್ಷೇತ್ರದಿಂದ ತೇಜಸ್ವಿನಿ ಅನಂತಕುಮಾರ್ ಬದಲು ತೇಜಸ್ವಿ ಸೂರ್ಯ ಕಣಕ್ಕೆ!!!

ಬೆಂಗಳೂರು ದಕ್ಷಿಣಕ್ಕೆ ತೇಜಸ್ವಿನಿಗೆ ಟಿಕೆಟ್ ಕೊಡದೇ ಮಂಡ್ಯದಲ್ಲಿ ಸುಮಲತಾಗೆ ಬೆಂಬಲ ನೀಡಿರುವ ಬಿಜೆಪಿ ವರಿಷ್ಠರ ಕ್ರಮ ವ್ಯಾಪಕ ಟೀಕೆಗೆ ಒಳಗಾಗಿದೆ. ಬಿಜೆಪಿಯಲ್ಲಿ ಸಂತೋಷ್​ ಜಿ ಮಾಸ್ಟರ್​​ ಮೈಂಡ್ ಎಂಬುದು ಮತ್ತೊಮ್ಮೆ ಬಯಲಾಗಿದೆ. ತೇಜಸ್ವಿನಿ ಅನಂತಕುಮಾರ್​ಗೆ ಟಿಕೆಟ್ ನೀಡಬೇಕೆಂದು ಆರ್​.ಅಶೋಕ್​​​​, ವಿ.ಸೋಮಣ್ಣ ಪಟ್ಟು ಹಿಡಿದು ಸ್ವಾಮೀಜಿಗಳನ್ನು ಭೇಟಿ ಮಾಡಿ, ಯಡಿಯೂರಪ್ಪರನ್ನು ಒಪ್ಪಿಸಿ ಕೇವಲ ಒಂದು ಹೆಸರು ಮಾತ್ರ ಶಿಫಾರಸು ಮಾಡಿದ್ರು. ಆದರೆ ಸಂತೋಷ್ ಜಿ ತಂತ್ರ ಬಿಜೆಪಿ ನಾಯಕರುಗಳನ್ನು ಅಲುಗಾಡಿಸಿದೆ. ಆರ್​​ಎಸ್​ಎಸ್​ ಮುಖಂಡರುಗಳಾದ ಸಂತೋಷ್​ ಜಿ ಮತ್ತು ಮುಕುಂದ್​ ಜಿ ನಡೆಸಿದ ಕಾರ್ಯತಂತ್ರ ಫಲ ಕೊಟ್ಟಿದೆ. ಹಿಂದೆ ದಿವಂಗತ ಅನಂತಕುಮಾರ್​​​​ ಕಾಲದಲ್ಲಿ ನಡೆದಿದ್ದ ಘಟನೆಗಳ ಹಿನ್ನಲೆಯಲ್ಲಿ ತೇಜಸ್ವಿನಿಗೆ ಟಿಕೆಟ್ ತಪ್ಪಿದೆ.

ad

ಇದೀಗ ತೇಜಸ್ವಿನಿ ಬದಲು ತೇಜಸ್ವಿ ಸೂರ್ಯ ಟಿಕೆಟ್​ ಗಿಟ್ಟಿಸಿದ್ದಾರೆ. ಆರ್​​.ಅಶೋಕ್​​, ವಿ.ಸೋಮಣ್ಣ ಸೇರಿದಂತೆ ಯಾರಿಗೂ ಕಡೆ ಗಳಿಗೆವರೆಗೆ ಈ ಬಗ್ಗೆ ಮಾಹಿತಿಯೇ ಇರಲಿಲ್ಲ. ಇದೀಗ ತೇಜಸ್ವಿ ಸೂರ್ಯ ಹೆಸರು ಘೋಷಣೆಯಾಗುತ್ತಿದ್ದಂತೆ ಸಂತೋಷ್​ ಜಿ ಎಷ್ಟು ಪವರ್​​ಫುಲ್​​ ಎಂಬುದು ಎಲ್ಲರಿಗೂ ತಿಳಿದಂತಾಗಿದೆ. ತೇಜಸ್ವಿನಿ ಅನಂತಕುಮಾರ್​​ಗೆ ಟಿಕೆಟ್ ನೀಡದಂತೆ ಸಂತೋಷ್​ ಮತ್ತು ಮುಕುಂದ್​ ಜಿ ಲಾಬಿ ನಡೆಸಿದ್ದರು. ಈ ಹಿಂದೆ ಅನಂತಕುಮಾರ್​ ಅವರು ನಡೆಸುತ್ತಿದ್ದ ರಾಜಕಾರಣದಲ್ಲಿ ಸಂತೋಷ್​ ಜಿಗೆ ಯಾವುದೇ ಪಾತ್ರ ಸಿಗುತ್ತಿರಲಿಲ್ಲ. ಇದೀಗ ಅನಂತ್​​ಕುಮಾರ್​​ ಪತ್ನಿಗೆ ಟಿಕೆಟ್ ತಪ್ಪಿಸುವ ಮೂಲಕ ತಾವೆಷ್ಟು ಪವರ್​​ಫುಲ್​ ಎಂಬುದನ್ನು ಸಂತೋಷ್​ ಜಿ ತೋರಿಸಿಕೊಟ್ಟಿದ್ದಾರೆ.