ಬ್ಯಾಗ್ ಕಿತ್ತು ಓಡಿದ್ದ ಕಳ್ಳ ಬ್ಯಾಗ್ ನೋಡಿದಾಗ ಕಂಗಾಲು!!ಹೊರ ರಾಜ್ಯದ ಕಳ್ಳನಿಗೆ ಮಂಡ್ಯದಲ್ಲಿ ಬಿತ್ತು ಸಕತ್ ಗೂಸಾ!!

ಬ್ಯಾಂಕ್ ಮುಂದೆ ಹಣ, ಚಿನ್ನಾಭರಣ ದೋಚಲು ಯತ್ನಿಸಿದ ಆಂಧ್ರ ಮೂಲದ ಯುವಕನಿಗೆ ಸಾರ್ವಜನಿಕರು ಹಿಗ್ಗಾಮುಗ್ಗ ಥಳಿಸಿರುವ ಘಟನೆ ಮಂಡ್ಯ ನಗರದಲ್ಲಿ ನಡೆದಿದೆ. ಮಂಡ್ಯ ನಗರದ ಕಾರ್ಪೋರೇಷನ್ ಬ್ಯಾಂಕ್ ನಲ್ಲಿ ಪ್ರಕಾಶ್ ಎಂಬೋರು ಬ್ಯಾಂಕ್ ನಲ್ಲಿ ಗಿರವಿ ಇಟ್ಟಿದ್ದ ಸುಮಾರು ಎರಡು ಲಕ್ಷ ರೂ. ಬೆಲೆ ಬಾಳುವ ಒಡವೆಗಳನ್ನು ಬ್ಯಾಂಕ್ ನಿಂದ ಬಿಡಿಸಿಕೊಂಡು ಬ್ಯಾಂಕ್ ನಿಂದ ಹೊರ ಬಂದಿದ್ದಾರೆ.

ಆ ಸಂದರ್ಭದಲ್ಲಿ ಒಡವೆ ಲಪಟಾಯಿಸಲು ಹೊಂಚು ಹಾಕಿ ಕುಳಿತಿದ್ದ ಆಂಧ್ರ ಪ್ರದೇಶ ಮೂಲದ ಮೂವರು ಪ್ರಕಾಶ್ ಕೈನಲ್ಲಿದ್ದ ಬ್ಯಾಗನ್ನು ಕಿತ್ತು ಪರಾರಿಯಾಗಿದ್ದಾರೆ. ಆದರೆ ಅದೃಷ್ಟವಶಾತ್ ಪ್ರಕಾಶ್ ಒಡವೆಯನ್ನು ಬ್ಯಾಗಿನಿಂದ ತೆಗೆದುಕೊಂಡು ಜೇಬಿಗೆ ಇಟ್ಟುಕೊಂಡಿದ್ದರು. ಖಾಲಿ ಬ್ಯಾಗನ್ನು ಕಿತ್ತುಕೊಂಡು ಹೋದ ಕಳ್ಳರ ಪೈಕಿ ಇಬ್ಬರು ಪರಾರಿಯಾದ್ರೆ ಒಬ್ಬ ಸಾರ್ವಜನಿಕರ ಕೈಗೆ ಸಿಕ್ಕಿದ್ದಾನೆ. ಆತನಿಗೆ ಹಿಗ್ಗಾಮುಗ್ಗ ಥಳಿಸಿದ ಸಾರ್ವಜನಿಕರು ಬಳಿಕ ಪಶ್ಚಿಮ ಠಾಣೆ ಪೊಲೀಸ್ರಿಗೆ ಒಪ್ಪಿಸಿದ್ದಾರೆ.

 

ವರದಿ: ಡಿ. ಶಶಿಕುಮಾರ ಬಿಟಿವಿ ಮಂಡ್ಯ

Avail Great Discounts on Amazon Today click here