ಗೋಧಿಹಿಟ್ಟು-ಚಪ್ಪಲಿಯಲ್ಲೂ ಅಡಗಿತ್ತು ಚಿನ್ನ- ಕಸ್ಟಮ್​ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದರು ಐನಾತಿ ಕಳ್ಳರು!

ದೇವನಹಳ್ಳಿ : ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಕಾರ್ಯಾಚರಣೆಯ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಸುಮಾರು ಒಂದೂವರೆ ಕೆ.ಜಿ ಚಿನ್ನವನ್ನು ವಶಪಡಿಸಿಕೊಂಡು ಚಿನ್ನ ಸಾಗಿಸುತ್ತಿದ್ದವರು ಬಂಧಿಸಿದ್ದಾರೆ. ಕಳೆದ ಶನಿವಾರ ಸಂಜೆ ದುಬೈನಿಂದ ಬೆಂಗಳೂರಿಗೆ ಇಂಡಿಗೋ ವಿಮಾನದಲ್ಲಿ ಹೆಣ್ಣು ಮಕ್ಕಳ ಚಪ್ಪಲಿ, ಸೌಂದರ್ಯ ಆಭರಣಗಳಲ್ಲಿ ಅಡಗಿಸಿಟ್ಟಿಕೊಂಡು ಅಕ್ರಮವಾಗಿ ಸುಮಾರು ಅರ್ಧ ಕೆ.ಜಿ ಚಿನ್ನ ಸಾಗಿಸುತ್ತಿದ್ದ ಮುಂಬೈ ಮೂಲದ ಸುಮಾರು ೪೦ ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ.

ad


 ಈ ಕಾರ್ಯಾಚರಣೆಯನ್ನು ಕಸ್ಟಮ್ಸ್ ಆಯುಕ್ತ ಶಿವಪ್ರಕಾರ್ಶ ಬಡ್ಡಿ, ಸೂಪರ್ಡೆಂಟ್ ವಸಂತ್ ಮಗೋಡ್,ಭಾನು ಶ್ರೀನಿವಾಸ್, ಇನ್ಸ್‌ಪೆಕ್ಟರ್ ರಣಧೀರ್,ಹರ್ಪ್ರೀಥ್,ನವೀನ್ ಭಾಗವಹಿಸಿದ್ದರು.ಅದೇ ದಿನ ಬೆಳಿಗ್ಗೆ ಗೋದಿ ಹಿಟ್ಟಿನಲ್ಲಿ ಚಿನ್ನ ಸಾಗಿಸುತ್ತಿದ್ದ ಇಬ್ಬರು ಸುಡಾನ್ ಪ್ರಜೆಗಳನ್ನು ಬಂಧಿಸಲಾಗಿತ್ತು.ಈ ವ್ಯಕ್ತಿಗಳಿಂದ ಸುಮಾರು ಒಂದು ಕೆ.ಜಿ ಚಿನ್ನವನ್ನು ವಶಪಡಿಸಿಕೊಂಡಿದ್ದರು. ಎಮರೈಟ್ಸ್ ವಿಮಾನದಲ್ಲಿ ದುಬೈನಿಂದ ಬೆಂಗಳೂರಿಗೆ ಚಿನ್ನ ಸಾಗಿಸುತ್ತಿದ್ದ ವೇಳೆ ಕಸ್ಟಮ್ಸ್ ಅಧಿಕಾರಿಗಳು ಖದೀಮರನ್ನು ಬಂಧಿಸಿದ್ದಾರೆ.ಒಂದೇ ದಿನ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಅಕ್ರಮವಾಗಿ ಬೆಂಗಳೂರಿಗೆ ಚಿನ್ನ ಸಾಗಿಸುತ್ತಿದ್ದ ಖದೀಮರನ್ನು ಬಂಧಿಸಿ ಚಿನ್ನವನ್ನು ವಶ ಪಡಿಸಿಕೊಳ್ಳುವುದರಲ್ಲಿ ಯಶಸ್ವಿಯಾಗಿದ್ದಾರೆ. ಇತ್ತೀಚೆಗೆ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮುಖಾಂತರ ವಿದೇಶಗಳಿಂದ ಅಕ್ರಮವಾಗಿ ಚಿನ್ನ ಸೇರಿದಂತೆ ಇತರೆ ಮಾದಕ ವಸ್ತುಗಳನ್ನು ತರುವವರ ಸಂಖ್ಯೆ ಹೆಚ್ಚಾಗುತ್ತಿದೆ. ವಿವಿಧ ರೀತಿಯ ಉಪಾಯ ಮಾಡಿ ಐನಾತಿ ಕಳ್ಳರು ಚಿನ್ನ ಸಾಗಿಸಲು ಮುಂದಾಗುತ್ತಿದ್ದಾರೆ. ಇಂತಹ ಕಳ್ಳರ ಹೆಡೆಮುರಿ ಕಟ್ಟಲು ಕಸ್ಟಮ್ಸ್ ಅಧಿಕಾರಿಗಳು ಸಹ ಸಜ್ಜಾಗಿದ್ದಾರೆ. ಕಳ್ಳರು ಚಾಪೆ ಕೆಳಗಡೆ ನುಗ್ಗಿ ಮಾಲನ್ನು ಸಾಗಿಸಲು ಮುಂದಾಗ್ತಿದ್ರೆ ಕಸ್ಟಮ್ಸ್ ಅಧಿಕಾರಿಗಳು ರಂಗೋಲಿ ಕೆಳಗೆ ಹೋಗಿ ಅವರನ್ನ ಬಂದಿಸುತ್ತಿದ್ದಾರೆ.

ಬೆಂಗಳೂರು ಮಹಾನಗರದ ಹೊರವಲಯದ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮುಖಾಂತರ ಇತ್ತೀಚೆಗೆ ವಿದೇಶಗಳಿಂದ ಅಕ್ರಮ ಚಿನ್ನ ಸೇರಿದಂತೆ ಇತರೆ ಮಾದಕ ವಸ್ತುಗಳ ಸಾಗಾಟ ಮಾಡುವವರ ಜಾಲ ಹೆಚ್ಚುಗುತ್ತಿದೆ. ವಾಯು ಮಾರ್ಗದ ಮೂಲಕ ಬರುವ ಈ ಐನಾತಿಗಳು ಪೊಲೀಸರು ಕಸ್ಟಮ್ಸ್ ಅಧಿಕಾರಿಗಳ ಕಣ್ತಪ್ಪಿಸಿ ಸುಲಭವಾಗಿ ಅಕ್ರಮ ಮಾಲನ್ನು ಸಾಗಿಸಲು ಹೊಂಚು ಹಾಕುತ್ತಿದ್ದಾರೆ. ಇಂತಹ ಕದೀಮರ ಜಾಲದ ಮೇಲೆ ಕಣ್ಣಿಟ್ಟಿರುವ ಕಸ್ಟಮ್ಸ್ ಅಧಿಕಾರಿಗಳು ಕಳೆದ ಎರಡು ದಿನಗಳಿಂದ ಒಂದುವರೆ ಕೆ.ಜಿ ಚಿನ್ನವನ್ನು ವಶಕ್ಕೆ ತೆಗೆದುಕೊಂಡು ಮೂವರನ್ನು ಜೈಲಿಗಟ್ಟಿದ್ದಾರೆ. ಇನ್ನು ಈ ರೀತಿ ಕಸ್ಟಮ್ಸ್ ನವ್ರ ಕೈಗೆ ಸಿಕ್ಕಿಬೀಳುವ ಬಹುತೇಕ ಕದೀಮರು ದುಬೈನಿಂದ ಬರುವ ವಿಮಾನಗಳಲ್ಲಿ ಬರುತ್ತಿದ್ದು, ದುಬೈನಿಂದ ಅಕ್ರಮ ಮಾಲು ರವಾನಿಸುವವರ ಗುಂಪು ಇದೆಯಾ ಎಂಬ ಸಂಶಯಕ್ಕೆ ಕಾರಣವಾಗಿದೆ. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿದೇಶದಿಂದ ಅಕ್ರಮವಾಗಿ ಸಾಗಿಸಲು ಈ ಹಿಂದೆ ಖದೀಮರು ನಾನಾ ರೀತಿಯ ಪ್ರಯತ್ನಗಳನ್ನು ಮಾಡಿದ್ದರು ಈ ಭಾರಿ ವಿಭಿನ್ನ ರೀತಿಯಲ್ಲಿ ಮಹಿಳೆಯ ಸೌಂದರ್ಯಕ್ಕೆ ಬಳಸುವ ಸಲಕರಣೆಗಳಲ್ಲಿ ಚಿನ್ನ ಸಾಗಿಸಲು ಪ್ರಯತ್ನ ಮಾಡಿದ್ದರು. ಆದರೂ ಕಸ್ಟಮ್ಸ್ ಅಧಿಕಾರಿಗಳ ಚುರುಕಿನ ಕಾರ್ಯಾಚರಣೆಗೆ ವಿಭಿನ್ನ ಪ್ರಯತ್ನ ಸಹ ವಿಫಲವಾಗಿದೆ.