ಈ ಯುವಕನೇ ತಯಾರು ಮಾಡ್ತಿದ್ದಾನೆ ಎನ್ಫೀಲ್ಡ್ ಬೈಕ್. ಇದಕ್ಕೆ ಆತ ಬಳಸಿರುವುದು ಏನು ಗೊತ್ತಾ?

 

ಆತನಿಗೆ ಬೈಕ್ ಎಂದ್ರೆ ಪಂಚಪ್ರಾಣ‌. ತಾನು ಕಲಿತ ವಿದ್ಯಾಯಿಂದಲೇ ಏನಾದ್ರು‌ ಸಾಧಿಸ ಬೇಕೆಂಬ ಮನೋಭಾವದ ವಿದ್ಯಾರ್ಥಿ. ತನ್ನ ಕುಲ‌ ಕಸುಬಿನ ಮೂಲಕ ರಾಯಲ್ ಎನ್ ಫೀಲ್ಡ್ ಬುಲೆಟ್ ಮಾದರಿಯ ಮರದ ಬೈಕ್ ತಯಾರಿಸಿದ್ದು ಅಣ್ಣಾಬಾಂಡ್ ಚಿತ್ರದ ಸ್ಕೆಲೆಟಿನ್ ಬೈಕ್
ತಯಾರಿಕೆಗೆ ಮುಂದಾಗಿದ್ದಾನೆ. ಆಗಿದ್ರೆ ಆತ ತಯಾರು ಮಾಡಿರೋ ಆ ಮರದ ಬೈಕ್ ಹೇಗಿದೆ ಅನ್ನೋದ್ನ ನೋಡ್ಕಂಡ್ ಬರೋಣ ಬನ್ನಿ‌…ವಿದ್ಯಾರ್ಥಿಯ ಕೈಲಿ ಕೆತ್ತನೆಯಾಯ್ತು ಮರದ ಬುಲೆಟ್ ಬೈಕ್…
ಮರದಲ್ಲಿ‌ ಬುಲೆಟ್ ಬೈಕ್ ಮಾದರಿ‌ ತಯಾರಿಸಿ ಬೈಕ್ ಪ್ರೇಮ ಮೆರೆದ ವಿದ್ಯಾರ್ಥಿ…

ಹೌದು! ಅಂದಾಗೆ ಈ ರೀತಿ ಮರದ ಕೆತ್ತನೆ ಕೆಲ್ಸ ಮಾಡ್ತಿರೋ ಈ ಯುವಕನ ಹೆಸ್ರು ಮನೋಹರ್ ಅಂತಾ. ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕು ಅಕ್ಕಿ ಹೆಬ್ಬಾಳು ಗ್ರಾಮದ ಯುವಕ. ಮೂಲತಃ ಮರಗೆಲಸ ಮಾಡೋ ಕುಟುಂಬದಿಂದ ಬಂದ ಈ ಯುವಕನಿಗೆ ತಮ್ಮ ಕುಲ ಕಸುಬಿನಲ್ಲಿ ಏನಾದ್ರು ಸಾಧನೆ‌ ಮಾಡಬೇಕೆಂಬ ಹಂಬಲ. ಐಟಿಐ ವಿದ್ಯಾರ್ಥಿಯಾಗಿದ್ದ ಈತ ತಾನು ಕಾಲೇಜಿನಲ್ಲಿ ಕಲಿತ‌ ಮತ್ತು ಕುಟುಂಬದವರಿಂದ ಕಲಿತ ಮರಗೆಲಸ ವಿದ್ಯೆಯ ಮೂಲಕ ಇದೀಗ ಸಂಪೂರ್ಣವಾಗಿ ಮರವನ್ನೆ ಬಳಸಿ ಮಾಡಿದ ರಾಯಲ್ ಎನ್ ಫೀಲ್ಡ್ ಮಾದರಿಯ ಬುಲೆಟ್ ಬೈಕ್ ತಯಾರಿಸಿದ್ದಾನೆ. ಮರದ ಚಕ್ರ, ಮರದ ಟ್ಯಾಂಕ್ ಮರದ ಮಿರರ್ ಎಲ್ಲವನ್ನೂ ಮರದಿಂದಲೇ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾನೆ. ಮುಂದೆ ಅಣ್ಣಾಬಾಂಡ್ ಚಿತ್ರದಲ್ಲಿ ಮಿಂಚಿರೋ ಸ್ಕೆಲಿಟಿನ್ ಬೈಕ್ ತಯಾರಿಕೆಗೆ‌ ಮುಂದಾಗಿರೋದಾಗಿ ಹೇಳ್ತಿದ್ದಾನೆ.

ಇನ್ನು ಬುಲೆಟ್ ಮಾದರಿಯಲ್ಲಿ ತಯಾರಿಸಿರುವ ಈ ಮರದ ಬೈಕ್ ಬಹಳ ಸುಂದರವಾಗಿದ್ದು, ಆಕರ್ಷಕವಾಗಿ ಕಾಣ್ತಿದೆ. ಅಲ್ದೆ, ಮರದಲ್ಲಿ ಈ ಬೈಕ್ ನಿರ್ಮಾಣ ಮಾಡಿರೋದು ಈಗ ಎಲ್ಲರ ಮೆಚ್ಚುಗೆ ಗಳಿಸಿದೆ. ವಿವಿಧ ಬಗೆಯ ಮರಗಳನ್ನು‌ ಬಳಸಿ ಈ ಮರದ ಬೈಕ್ ಕೆತ್ತನೆ ಮಾಡಿರೋ ಮಗನನ್ನು ಕಂಡು ಮನೋಹರ್ ಪೋಷಕರು‌ ಸಂತಸ ವ್ಯಕ್ತಪಡಿಸ್ತಿದ್ದಾರೆ. ಕಾಲೇಜು‌ ಮುಗಿದ ಬಳಿಕ ತಂದೆ ಮತ್ತು ತಾತನ ಜೊತೆ ಸೇರಿ ಈ ಯುವಕ ಕೆತ್ತನೆ ಕೆಲಸದಲ್ಲಿ ನಿರತನಾಗಿ ಅನುಭವ ಗಳಿಸಿರೋ ಈ ಯುವಕ ತಮ್ಮ ಕುಲಸಬಿನಲ್ಲಿ ಏನಾದರೂ ಸಾಧನೆ ಮಾಡಬೇಕೆಂದು ಮರದ ಬೈಕ್ ನಿರ್ಮಿಸಿದ್ದು, ಪೋಷಕರ ಸಂತೋಷಕ್ಕೆ ಕಾರಣವಾಗಿದೆ. ಮಗನ ಈ ಮರದ ಬೈಕ್ ಕೆತ್ತನೆ ನೋಡಿ ಮತ್ತಷ್ಟು ಹೊಸ ಹೊಸ ಮಾದರಿಗಳ ಮೂಲಕ ಸಾಧನೆ ಮಾಡ್ಲಿ‌ ಅಂತಿದ್ದಾರೆ ಈತನ ಪೋಷಕರು. ಒಟ್ನಲ್ಲಿ, ಬೆಳೆಯುವ ಸಿರಿ ಮೊಳಕೆಯಲ್ಲೇ ಎಂಬಂತೆ ಚಿಕ್ಕ ವಯಸ್ಸಿನಲ್ಲೇ ತನ್ನ ಕುಲ ಕುಸುಬಿನ‌ ಮೂಲಕ ಬುಲೆಟ್ ಬೈಕ್ ಮಾದರಿ ತಯಾರಿಸಿ ಸಾಧನೆಗೆ ಮುಂದಾಗಿರೋ ಈ ಯುವಕನ ಕೆತ್ತನೆ ಕೆಲಸಕ್ಕೆ ಹ್ಯಾಟ್ಸಾಪ್ ಹೇಳಬೇಕಿದೆ.