ಭಿಕ್ಷೆಯ ನೆಪದಲ್ಲಿ ಕಳ್ಳತನ- ಸಿಸಿಟಿವಿಯಲ್ಲಿ ಬಯಲಾಯ್ತು ರಹಸ್ಯ!

ಅಕ್ಕ-ಪಕ್ಕ ನೋಡಿ ಬೆಲೆ ಬಾಳುವ ಸಿಕ್ಕ ವಸ್ತುಗಳನ್ನು ಯಾಮಾರಿಸುವ ಖತರ್ನಾಕ್ ಕಳ್ಳ ಇವನು. ಬೀದಿಗೆ ಬರೋದು ಮಾತ್ರ ಬಿಕ್ಷೆ ಕೇಳೋ ನೆಪದಲ್ಲಿ. ಬಿಕ್ಷೆ ಬೇಡಿ ಒಪ್ಪತ್ತಿನ ಊಟ ಸಂಪಾದಿಸುವ ನೆಪದಲ್ಲಿ ಬರೋ ಇವನು ಕೈ ಹಾಕೋದು ಮಾತ್ರ ಬೆಲೆ ಬಾಳೋ ವಸ್ತುಗಳಿಗೆ. ಹೌದು, ದೇವನಹಳ್ಳಿ ಬೋವಿ ಪೇಟೆಯಲ್ಲಿರೋ ಅನಂತ ಪದ್ಮನಾಭ ಎಂಬುವವರ ಮನೆಯಲ್ಲಿ ಸೈಕಲ್ ಕಳ್ಳತನ ಆಗೋವರೆಗೂ ಈ ಖದೀಮನ ಬಣ್ಣ ಬಯಲಾಗಿರಲಿಲ್ಲ. ಇವತ್ತು ಬೆಳಗ್ಗೆ ಇದ್ದಕ್ಕಿದ್ದಂತೆ ಸೈಕಲ್ ನಾಪತ್ತೆಯಾಗ್ತಿದ್ದಂಗೆ ಸಿ.ಸಿ ಟಿವಿ ಫೂಟೇಜ್ ನೋಡಿದಾಗಲೆ ಗೊತ್ತಾಗಿದ್ದು ಖತರ್ನಾಕ್ ಕಳ್ಳನ ಚಾಲಾಕಿ ಕಳ್ಳತನ.

 

 

 

 

 

 

 

 

 

 

 

ಇತ್ತೀಚೆಗೆ ಈ ಭಾಗದಲ್ಲಿ ಹಲವು ಬೆಲೆ ಬಾಳುವ ವಸ್ತುಗಳು ನಾಪತ್ತೆಯಾಗಿದೆ. ಆದ್ರೆ ಕಳ್ಳ ಯಾರು ಅಂತಾ ಮಾತ್ರ ಗೊತ್ತಾಗೇ ಇರಲಿಲ್ಲ. ಇವತ್ತು ಬೆಳಗ್ಗೆ ಸೈಕಲ್ ಕಳ್ಳತನವಾದ ನಂತ್ರ ಕಳ್ಳನ ಪತ್ತೆಯಾಗಿದೆ. ಆದ್ರೆ ಇದುವರೆಗೂ ಖದೀಮನ ಅಡ್ರೆಸ್ ಸಿಕ್ಕಿಲ್ಲ. ಪೊಲೀಸರಿಗೆ ದೂರು ನೀಡಲಾಗಿದ್ದು, ಕಳ್ಳನ ಬಲೆಗೆ ಬೀಳ್ತಾನಾ ಕಾದುನೋಡಬೇಕಿದೆ.