ಈ ಗ್ರಾಮದ ಜನರು ರಂಜಾನ್​ ಆಚರಿಸಲ್ಲ ಅಂದಿದ್ದು ಯಾಕೆ ಗೊತ್ತಾ?!

ನಂದಿಕುರಳಿ ಗ್ರಾಮದಲ್ಲಿ ಮುಸ್ಲಿಂ ಮಹಿಳೆಯು ಅನುಮಾನಾಸ್ಪಾದವಾಗಿ ಸಾವನ್ನಪ್ಪಿದ ಘಟನೆಯ ಹಿನ್ನಲೆ ರಾಯಬಾಗ ಪಟ್ಟಣದಲ್ಲಿ ಮೇ 30 ರಂದು ನಡೆದ ಗಲಾಟೆಯಲ್ಲಿ ಪೊಲೀಸರು ಅಮಾಯಕರನ್ನು ಬಂಧಿಸಿ  ಅವರಿಗೆ ಬೆಲ್ (ಜಾಮೀನು) ಸಿಗದಂತೆ ವಿವಿಧ ಕಲಂಗಳನ್ನು ಹಾಕಿದ್ದಾರೆ.  ಪೊಲೀಸರ ಈ ಕ್ರಮವನ್ನು ಖಂಡಿಸಿ ಬೆಳಗಾವಿ ಜಿಲ್ಲೇಯ ರಾಯಬಾಗ ತಾಲೂಕಿನ ಮುಸ್ಲಿಂ ಸಮಾಜಭಾಂದವರು ಈ  ಸಲ ಪವಿತ್ರ ರಂಜಾನ ಹಬ್ಬವನ್ನು ಆಚರಿಸದೇ ಕಪ್ಪು ಬಟ್ಟೆ ಧರಿಸಿ ಕರಾಳ ದಿನವನ್ನಾಗಿ ಆಚರಸಲು ಮುಸ್ಲಿಂ ಸಮುದಾಯದವರು ನಿರ್ಧಾರ ಕೈಗೊಂಡಿದ್ದಾರೆ.

ಮೇ 30 ರಂದು ರಾಯಬಾಗ ಪಟ್ಟಣದಲ್ಲಿ ಮಹಿಳೆ ಸಾವು  ಖಂಡಿಸಿ ರಾಯಭಾಗ ಪಟ್ಟಣದಲ್ಲಿ ನಡೆದಿದ್ದ ಪ್ರತಿಭಟನೆ ವೇಳೆ ಉದ್ರಿಕ್ತ ಪ್ರತಿಭಟನಾಕಾರರಿಂದ ನಡೆದ ಗಲಾಟೆಯಲ್ಲಿ  ಪೊಲಿಸರು ಹೆಚ್ಚಿನ ಅನಾಹುತ ತಪ್ಪಿಸಲು ಲಾಠಿ ಪ್ರಹಾರ ಕೂಡ ನಡೆದಿತ್ತು ‌. ಈ ಘಟನೆಗೆ ಸಂಬಂಧಿಸಿದಂತೆ ಪೋಲಿಸರು ಸುಮಾರು 36 ಜನ ಅಮಾಯಕ ಮುಸ್ಲಿಂ ಯುವಕರನ್ನು  ಬಂಧಿಸಿ ಅವರಿಗೆ ಬೆಲ್ ಸಿಗದಂತೆ ವಿವಿಧ ಕಲಂಗಳನ್ನ ಹಾಕಿದ್ದಾರೆ.

ಪವಿತ್ರ ರಂಜಾನ ಹಬ್ಬಕ್ಕೆ ಅವರನ್ನು  ಜಾಮೀನು ಮೇಲೆ ಬಿಡದಂತೆ ವಿವಿದ ಸೆಕ್ಷನ ಹಾಕಿದ ಪೊಲೀಸ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿ, ರಂಜಾನ ಹಬ್ಬವನ್ನು ಆಚರಿಸದೆ ಕರಾಳ ದಿನವನ್ನಾಗಿ ಆಚರಸಲು ಮುಸ್ಲಿಂ ಮುಖಂಡರು ನಿರ್ಧಾರ ಕೈಗೊಂಡು ಮೌನವಾಗಿ ಪ್ರತಿಭಟನೆ ಮೆರವಣಿಗೆ ನಡೆಸಿ ತಹಶೀಲ್ದಾರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಈ ಮೌನ ಪ್ರತಿಭಟನೆಯಲ್ಲಿ ಮುಸ್ಲಿಂ ಮಹಿಳೆಯರು ಪಾಲ್ಗೊಂಡಿದ್ದರು.