ಉತ್ತರಕನ್ನಡದ ಕುಮಟಾದಲ್ಲಿ ಹೀಗೊಂದು ಬೆದರಿಕೆ ಪ್ರಕರಣ!! ಬೆದರಿಕೆ ಹಾಕಿದ್ಯಾರು ಗೊತ್ತಾ?

ಉತ್ತರಕನ್ನಡ ಜಿಲ್ಲೆಯ ಕುಮಟ ವಿಧಾನಸಭಾ ಕ್ಷೇತ್ರದ ಕಾಂಗ್ರೇಸ್ ಕಾರ್ಯಕರ್ತ ಎನ್ನಲಾದ ಶಾಶ್ವತ ಕವರಿ ಎಂಬಾತ ಚೇತನ್ ಶೇಟ್ ಅವರಿಗೆ ಪೋನ್‌ಕರೆ ಮಾಡಿ ಜೀವ ಬೆದರಿಕೆ ಹಾಕಿರುವ ಬಗ್ಗೆ ಕುಮಟ ಪೊಲೀಸ್ ಠಾಣೆಯಲ್ಲಿ ಶಾಶ್ವತ ಕವರಿ ವಿರುದ್ಧ ಪ್ರಕರಣ ದಾಖಲಾಗಿದೆ.

ಚುನಾವಣೆ ಸಮಯದಲ್ಲಿ ಚೇತನ್ ಶೇಠ್ ಎಂಬಾತ ಕುಮಟ ಶಾಸಕಿ ಆಗಿದ್ದ ಶಾರದಾ ಶೆಟ್ಟಿ ಅವರ ಚುನಾವಣಾ ಕರ ಪತ್ರದ ಮೇಲೆ ಇದು ಸುಳ್ಳು ಕಂತೆ ಎಂದು ಬರೆದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದ.‌ ಇದಕ್ಕೆ ಆಕ್ರೋಶಗೊಂಡ ಶಾಸಕಿ ಶಾರದಾ ಶೆಟ್ಟಿ ಅವರ ಆಪ್ತ ಶಾಶ್ವತ್ ಕವರಿ ಚೇತನ್ ಸೇಠ್ ಅವರಿಗೆ ಪೋನ್ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ನಿಂದಿಸಿದ್ದಾನೆ.

ಚೇತನ್ ಶೇಠ್ ಕವರಿ ಪೊನ್ ಕರೆಯನ್ನು ರೇಕರ್ಡಾ ಮಾಡಿದ್ದು ಅದನ್ನೆ ಸಾಕ್ಷಿಯಾಗಿಟ್ಟುಕೊಂಡು ಶಾಶ್ವತ್ ಕವರಿ ವಿರುದ್ಧ ಕುಮಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾನೆ.