‘ಟಿಕ್​ಟಾಕ್​ Uninstall​’ ಮಾಡಲು ಗೂಗಲ್​​-ಆ್ಯಪಲ್​ ಕಂಪನಿಗೆ ಸೂಚನೆ! ದೇಶದಲ್ಲಿ ಬ್ಯಾನ್ ಆಗುತ್ತಾ ಟಿಕ್​​ಟಾಕ್​!

ದೇಶದೆಲ್ಲೆಡೆ ಟಿಕ್​ಟಾಕ್​ ಆ್ಯಪ್​ನ ಸುರಕ್ಷತೆ ಕುರಿತು ಚರ್ಚೆಗಳು ಆರಂಭವಾಗಿರುವ ಬೆನ್ನಲ್ಲೇ, ಮದ್ರಾಸ್​ ಹೈಕೋರ್ಟ್​ ಟಿಕ್ ಟಾಕ್​ ನಿಷೇಧಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿತ್ತು. ತಕ್ಷಣ ಎಚ್ಚೆತ್ತ ಎಲೆಕ್ಟ್ರಾನಿಕ್​ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಮೊಬೈಲ್​​​ ಗೂಗಲ್​ ಮತ್ತು ಆ್ಯಪಲ್​ ಕಂಪನಿಗಳಿಗೆ ತಮ್ಮ ಪ್ಲೇ ಸ್ಟೋರ್​​ಗಳಿಂದ ಟಿಕ್​ಟಾಕ್​ ಆ್ಯಪ್​ ತೆಗೆದುಹಾಕುವಂತೆ ಸೂಚನೆ ನೀಡಿದೆ.

ad

ದೇಶದ ಯುವ ಜನರನ್ನು ಹೆಚ್ಚು ಆಕರ್ಷಿಸುತ್ತಿರುವ ಚೀನಾ ಮೂಲದ ಟಿಕ್ ಟಾಕ್ ಆ್ಯಪ್  ಯುವಜನತೆ ಸೇರಿದಂತೆ ಎಲ್ಲ ವಯೋಮಾನದ ಜನರನ್ನು ಅತಿಯಾಗಿ ಆಕರ್ಷಿಸಿ ಮೋಡಿ ಮಾಡಿದೆ. ಆದರೆ ಇಲ್ಲಿ ಹವ್ಯಾಸಕ್ಕಾಗಿ ಸಿದ್ಧವಾಗುವ ವಿಡಿಯೋಗಳನ್ನು  ಅಸಭ್ಯ ವಿಡಿಯೋಗಳಾಗಿ ಕೂಡ ಬದಲಾಯಿಸಿಕೊಳ್ಳುವ ಅವಕಾಶವಿರೋದರಿಂದ  ದೇಶದ ಹಲವೆಡೆ ಟಿಕ್​ಟಾಕ್​ ವಿಡಿಯೋ ಹಾಗೂ ಆ್ಯಪ್​ಗಳಿಗೆ ನಿಷೇಧ ಹೇರಲು ಒತ್ತಾಯ ವ್ಯಕ್ತವಾಗುತ್ತಿದೆ.

ಈ ಆ್ಯಪ್​​ನ ದುರ್ಬಳಕೆಯನ್ನು ಗಂಭೀರವಾಗಿ ಪರಿಗಣಿಸಿದ ಮದ್ರಾಸ್ ಹೈಕೋರ್ಟ್ ಕೇಂದ್ರ ಸರ್ಕಾರಕ್ಕ ಸೂಚನೆ ನೀಡಿತ್ತು. ಈ ಆ್ಯಪ್​ಗಳನ್ನು ನಿಷೇಧಿಸಬೇಕು. ಮತ್ತು ಈ ಆ್ಯಪ್​ ಬಳಸಿ ಸಿದ್ಧಪಡಿಸಲಾದ ವಿಡಿಯೋಗಳ ಪ್ರಸಾರವನ್ನು ತಡೆಹಿಡಿಯಬೇಕೆಂದು ಸೂಚಿಸಿತ್ತು. ಆದರೆ ಇದಕ್ಕೆ ಮೊಬೈಲ್​ ಕಂಪನಿಯ ಮಾಲೀಕರು ಆಕ್ಷೇಪ ವ್ಯಕ್ತಪಡಿಸಿದ್ದು, ಇದರಿಂದ ಕಂಪನಿಗೆ ನಷ್ಟವಾಗಲಿದೆ ಎಂದಿದ್ದಾರೆ. ಅಲ್ಲದೇ ಮದ್ರಾಸ್ ಹೈಕೋರ್ಟ್​ ಕ್ರಮ ಪ್ರಶ್ನಿಸಿ ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದ್ದಾರೆ.

ಇನ್ನು ಟಿಕ್​ಟಾಕ್​ ಆ್ಯಪ್​ ಬ್ಯಾನ್​ ಕುರಿತು ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್​ ಮುಖ್ಯನ್ಯಾಯಮೂರ್ತಿ ರಂಜನ್ ಗೋಗೋಯ್ ಏಪ್ರಿಲ್​ 21 ಕ್ಕೆ ನಿಗದಿ ಪಡಿಸಿದ್ದಾರೆ. ಇನ್ನು ಎಲೆಕ್ಟ್ರಾನಿಕ್​ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಸೂಚನೆಗೆ ಗೂಗಲ್​ ಹಾಗೂ ಟಿಕ್​ಟಾಕ್​ ವಿವರಣೆ ನೀಡಿದ್ದು, ಅನುಚಿತ ವಿಡಿಯೋಗಳನ್ನು ತೆಗೆದು ಹಾಕಲಾಗಿದೆ. ನಾವು ಭಾರತದ ತಂತ್ರಜ್ಞಾನ ನಿಯಮ ಮೀರಿ ಕೆಲಸ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದೆ. ಒಟ್ಟಿನಲ್ಲಿ ದೇಶದಲ್ಲಿ ಟಿಕ್​ಟಾಕ್​ ಆ್ಯಪ್​ ಬಳಕೆದಾರರು ಸಂಕಷ್ಟಕ್ಕೆ ಸಿಲುಕಿದ್ದು ಈ ಆ್ಯಪ್​ ನಿಷೇಧಕ್ಕೊಳಗಾಗುವ ಭೀತಿ ಎದುರಿಸುತ್ತಿದೆ.