ಆರ್.ಆರ್.ನಗರ ಟಿಕೇಟ್​​ಗಾಗಿ ಕಮಲ ನಾಯಕರಲ್ಲೇ ಕಲಹ- ಕಳಂಕಿತರ ಬೆನ್ನಿಗೆ ನಿಂತ್ರಾ ಸಂತೋಷಜೀ?

Ticket Distribution- Fight Between BSY-BL. Santosh

ಚುನಾವಣೆ ಘೋಷಣೆಯಾಗುತ್ತಿದ್ದಂತೆ ಬಿಜೆಪಿ ಮತ್ತು ಕಾಂಗ್ರೆಸ್​ನ ಘಟಾನುಘಟಿ ನಾಯಕರು ಟಿಕೇಟ್​ ಗಾಗಿ ಸರ್ಕಸ್​ ನಡೆಸಿದ್ದಾರೆ. ಹೀಗಿರುವಾಗಲೇ ಕಮಲ ಪಾಳಯದಲ್ಲಿ ಬೆಂಗಳೂರಿನ ಆರ್.ಆರ್.ನಗರದ ಟಿಕೇಟ್​​ ಗಾಗಿ ಬಿಎಸ್​ವೈ ಮತ್ತು ಸಂತೋಷಜೀ ನಡುವೆ ಫೈಟ್​ ಆರಂಭವಾಗಿದ್ದು, ಕಳಂಕಿತರಿಗೆ ಟಿಕೇಟ್​​ ನೀಡದಂತೆ ಬಿಎಸ್​ವೈ ಪಟ್ಟು ಹಿಡಿದಿದ್ದಾರೆ.

adಹೌದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್​ವೈ ಹಾಗೂ ಸಂತೋಷಜೀ ನಡುವೆ ಆರ್.ಆರ್.ನಗರದ ಟಿಕೇಟ್​ ಹಂಚಿಕೆ ವಿಚಾರಕ್ಕೆ ಫೈಟ್​ ಆರಂಭವಾಗಿದೆ. ಆರ್.ಆರ್.ನಗರದಲ್ಲಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಟಿಕೇಟ್ ಕೊಡುವಂತೆ ಬಿಎಸ್​ವೈ ಪಟ್ಟು ಹಿಡಿದಿದ್ದರೇ , ಅತ್ತ ಸಂತೋಷಜಿ ಅಕ್ರಮ ಗಣಿಗಾರಿಕೆ ಆರೋಪ ಹೊತ್ತಿರುವ ಮುನಿರಾಜುಗೆ ಟಿಕೇಟ್​ ಕೊಡಿಸಲು ಸರ್ಕಸ್​ ನಡೆಸಿದ್ದಾರೆ ಎನ್ನಲಾಗಿದೆ.

ಆದರೇ ಬಿಎಸ್​ವೈ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾದ ಜಿ.ಎಚ್​.ರಾಮಚಂದ್ರ ಹಾಗೂ ಶಿಲ್ಪಾ ಗಣೇಶ್​ಗೆ ಟಿಕೇಟ್​ ಕೊಡಿಸಲು ಬಿಎಸ್​ವೈ ಶಿಫಾರಸ್ಸು ಮಾಡಿದ್ದಾರೆ. ಇದೇ ಕಾರಣಕ್ಕೆ ಬಿಎಸ್​ವೈ ಕಳಂಕಿತರಿಗೆ ಟಿಕೇಟ್​ ಎಂದು ಕೂಡ ಹೇಳಿದ್ದರು. ಆದರೇ ತುಳಸಿ ಮುನಿರಾಜು ಹಲವು ವರ್ಷಗಳಿಂದ ಅಕ್ರಮವಾಗಿ ಗಣಿಗಾರಿಕೆ ಮಾಡುತ್ತ ಬಂದಿದ್ದು, ಯಾರದ್ದೋ ಜಮೀನಿನಲ್ಲಿ ಗಣಿಗಾರಿಕೆ ನಡೆಸುತ್ತಿದ್ದಾರೆ.  ಆದರೇ ಬಿಜೆಪಿಯಿಂದ ಟಿಕೇಟ್ ಆಕಾಂಕ್ಷಿಯಾಗಿರುವ ತುಳಸಿ ಮುನಿರಾಜು ಇದೀಗ ಕಳೆದ 6 ತಿಂಗಳಿನಿಂದ ಗಣಿಗಾರಿಕೆ ನಿಲ್ಲಿಸಿದ್ದು, ಬಿಟಿವಿ ಬಳಿ ತುಳಸಿಮುನಿರಾಜು ಅಕ್ರಮ ಗಣಿಗಾರಿಕೆಯ ಎಕ್ಸಕ್ಲೂಸಿವ್​ ದಾಖಲೆ ಇದೆ.ಇನ್ನು ಒಂದೆಡೆ ಅಮಿತ್ ಶಾ, ಬಿಎಸ್​ವೈ ಕಳಂಕಿತರಿಗೆ ಟಿಕೇಟ್​ ಇಲ್ಲ ಎನ್ನುತ್ತಿದ್ದಾರೆ. ಹೀಗಿರುವಾಗ ಸಂತೋಷ ದುಡ್ಡಿಗಾಗಿ ಗಣಿಗಾರಿಕೆಯವರಿಗೆ ಟಿಕೇಟ್ ಮಾರುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಅಲ್ಲದೇ ಬಿಜೆಪಿಯಲ್ಲಿ ಮುನಿರಾಜುಗೆ ಒಂದು ನ್ಯಾಯ, ಜನಾರ್ಧರ್​ ರೆಡ್ಡಿಗೆ ಒಂದು ನ್ಯಾಯವೇ ಎಂಬ ಪ್ರಶ್ನೆ ಮೂಡಿದೆ.