ಮೈತ್ರಿ ಸರ್ಕಾರಕ್ಕೆ ಸಿದ್ಧರಾಮಯ್ಯನವರೇ ಟೈಂ ಬಾಂಬ್​ ಫಿಕ್ಸ್​ ಮಾಡಿದ್ದಾರೆ! ಶೆಟ್ಟರ್ ಗಂಭೀರ ಆರೋಪ!!

Chief Minister Jagadish Shettar at a programme in Dharwad on Sunday. -KPN

ಒಂದೆಡೆ ಕಾಂಗ್ರೆಸ್​ ಮತ್ತು ಜೆಡಿಎಸ್​ ದೋಸ್ತಿಯಲ್ಲೇ ಸಿದ್ಧರಾಮಯ್ಯನವರ ವಿರುದ್ಧ ಹಲವರು ಕಿಡಿಕಾರುತ್ತಿದ್ದರೇ, ಇತ್ತ ಬಿಜೆಪಿ ನಾಯಕರು ಕೂಡ ಸಿದ್ಧು ಟಾರ್ಗೆಟ್​ ಮಾಡಲಾರಂಭಿಸಿದ್ದಾರೆ. ದೋಸ್ತಿ ಸರ್ಕಾರಕ್ಕೆ ಸಿಎಂ ಸಿದ್ಧರಾಮಯ್ಯನವರೇ ಟೈಂ ಬಾಂಬ್​ ಫಿಕ್ಸ್​ ಮಾಡಿದ್ದಾರೆ. ಮೇ 23 ಕ್ಕೆ ಈ ಟೈಂ ಬಾಂಬ್​ ಡಮ್ ಢಮಾರ್ ಎಂದು ಸಿಡಿಯಲಿದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸ್ಪೋಟಕ್ ಹೇಳಿಕೆ ನೀಡಿದ್ದಾರೆ.

ad

ಹುಬ್ಬಳ್ಳಿಯಲ್ಲಿ  ಮಾತನಾಡಿದ  ಶೆಟ್ಟರ್​, ದೋಸ್ತಿ ಸರ್ಕಾರಕ್ಕೆ ಸಿದ್ದರಾಮಯ್ಯನವೇ ಟೈಂ ಬಾಂಬ್​ ಫಿಕ್ಸ್​ ಮಾಡಿದ್ದಾರೆ. ಹೌದು  ಮೇ 23ಕ್ಕೆ ಟೈಂ ಬಾಂಬ್​ ಸಿಡಿಯೋದು ಕನ್ಫರ್ಮ್. ಸಿದ್ದು ಆವತ್ತು ಬಟನ್​ ಒತ್ತಿದ್ರೆ ಮೈತ್ರಿ ಸರ್ಕಾರ  ಢಮಾರ್.ದೋಸ್ತಿ ಒಳಗಿನ ಸಂಘರ್ಷಕ್ಕೆ ಸಿದ್ದರಾಮಯ್ಯ ಕಾರಣ ಎಂದು ಶೆಟ್ಟರ್ ಆರೋಪಿಸಿದ್ದಾರೆ.

ಇನ್ನು ಬಾಂಬ್​ ಮೇ 23ರಂದು ಸಿಡಿಯೋದು ಕನ್ಫರ್ಮ್​​ ಅಂತ ಹೇಳಿದ್ದ ಜಗದೀಶ್​ ಶೆಟ್ಟರ್​ಗೆ ಮಾಜಿ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಸದನದಲ್ಲಿ ಬಹುಮತ ತೋರಿಸಲು ಬಿಜೆಪಿ ನಾಯಕರಿಗೆ ಆಗಿಲ್ಲ. ಹೀಗಾಗಿ, ಚೌಕಿದಾರ್​​ ಪಾರ್ಟಿಯಿಂದ ಕಾಂಗ್ರೆಸ್​ ಶಾಸಕರಿಗೆ 20 ಕೋಟಿ ಆಮಿಷ ಕೊಟ್ಟಿದ್ದಾರೆ. ಮರ್ಯಾದೆಯಿಂದ ಮನೆಯಲ್ಲಿ ಇರದೇ ನಮ್ಮ ಶಾಸಕರಿಗೆ ಆಮಿಷ ಒಡ್ಡುತ್ತಿದ್ದಾರೆ. ಬಿಜೆಪಿಗೆ ನಾಚಿಕೆ ಮಾನ, ಮರ್ಯಾದೆ ಇಲ್ಲ ಅಂತ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.