ಮತಸಮರಕ್ಕೆ ಸಜ್ಜಾದ ಕಲ್ಪತರ ನಾಡಿನ ಕೈ ಪಡೆ- ಕುಟುಂಬ ರಾಜಕಾರಣದ ಎಫೆಕ್ಟ್​​​ ಸಚಿವರ ಪುತ್ರನೂ ಕಣಕ್ಕೆ

ಕಲ್ಪತರು ನಾಡು ತುಮಕೂರು ರಾಜಕೀಯವಾಗಿ ಸಾಕಷ್ಟು ಮಹತ್ವದ ಕ್ಷೇತ್ರ ಕೆಪಿಸಿಸಿ ಅಧ್ಯಕ್ಷ ಡಾ.ಜಿ ಪರಮೇಶ್ವರ್ ಕೂಡ ಇದೇ ಜಿಲ್ಲೆಯನ್ನು ಪ್ರತಿನಿಧಿಸೋದರಿಂದ ಈ ಭಾರಿಯ ಚುನಾವಣೆ ಕಾಂಗ್ರೆಸ್ ಪಕ್ಷದ ಮಟ್ಟಿಗೆ ಪ್ರತಿಷ್ಠೆಯ ವಿಷಯವಾಗಿದೆ. ಹೀಗಾಗಿ ಈಗಾಗಲೇ ತುಮಕೂರಿನ 11 ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಯ ಪಟ್ಟಿಯನ್ನು ಕೆಪಿಸಿಸಿ ಬಿಡುಗಡೆ ಮಾಡಿದೆ. ಕೆಪಿಸಿಸಿ ಬಿಡುಗಡೆ ಮಾಡಿರುವ ಜಿಲ್ಲಾವಾರು ಅಭ್ಯರ್ಥಿಗಳ ಎಕ್ಸಕ್ಲೂಸಿವ್ ಪಟ್ಟಿ ಬಿಟಿವಿ ನ್ಯೂಸ್ಗೆ ಲಭ್ಯವಾಗಿದೆ.

ಕಾಂಗ್ರೆಸ್ ನಲ್ಲಿ ಸಾಮಾನ್ಯವಾಗಿರುವ ಕುಟುಂಬ ರಾಜಕಾರಣ ತುಮಕೂರಿಗೂ ವ್ಯಾಪಿಸಿದ್ದು, ಹಾಲಿ ಕಾನೂನು ಸಚಿವರಾಗಿರುವ ಟಿ.ಬಿ.ಜಯಚಂದ್ರ ಪುತ್ರ ಚಿಕ್ಕನಾಯಕನಹಳ್ಳಿ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ. ಬಿಟಿವಿಗೆ ಲಭ್ಯವಾಗಿರುವ ತುಮಕೂರಿನ ಕೈ ಅಭ್ಯರ್ಥಿಗಳ ಪಟ್ಟಿ ಇಂತಿದೆ.

ತುಮಕೂರಿನ ತುರುವೆಕೆರೆ ಕ್ಷೇತ್ರದಿಂದ ನಿರ್ಮಾಪಕ ಕೆ. ಮಂಜು ಅಥವಾ ಗೀತಾ ರಾಜಣ್ಣ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದು, ತುಮಕೂರು ನಗರದಿಂದ ರಫೀಕ್ ಅಹ್ಮದ್ ಕಣಕ್ಕಿಳಿದರೆ, ತುಮಕೂರು ಗ್ರಾಮಾಂತರ ಕ್ಷೇತ್ರದಿಂದ ರಾಜೇಂದ್ರ ರಾಜಣ್ಣ ಅಥವಾ ಲಿಂಗಪ್ಪ ಸ್ಪರ್ಧಿಸಲಿದ್ದಾರೆ.

ಇನ್ನು ಗುಬ್ಬಿಯಿಂದ ಹೊನ್ನಗಿರಿಗೌಡ್ ಅಥವಾ ಬಾಲಾಜಿಗೌಡ್ಗೆ ಟಿಕೇಟ್ ಸಿಗಲಿದ್ದು, ತಿಪಟೂರಿನಿಂದ ಷಡಕ್ಷರಿ, ಚಿಕ್ಕನಾಯಕನಹಳ್ಳಿಯಿಂದ ಸಚಿವರ ಪುತ್ರ ಸಂತೋಷ ಜಯಚಂದ್ರ ಮಧುಗಿರಿಯಿಂದ ಕೆ.ಎನ್.ರಾಜಣ್ಣ ಅದೃಷ್ಟ ಪರೀಕ್ಷೆಗೆ ಮುಂಧಾಗಿದ್ದಾರೆ.
ಇನ್ನು ಶಿರಾದಿಂದ ಹಾಲಿ ಸಚಿವರಾಗಿರುವ ಟಿ.ಬಿ.ಜಯಚಂದ್ರ, ಕುಣಿಗಲ್ನಿಂದ ಡಾ.ರಂಗನಾಥ್,ಪಾವಗಡದಿಂದ ವೆಂಕಟರಮಣಪ್ಪ,ಕೊರಟಗೆರೆಯಿಂದ ಡಾ ಜಿ.ಪರಮೇಶ್ವರ್ ಸ್ಪರ್ಧಿಸಲಿದ್ದಾರೆ. ಒಟ್ಟಿನಲ್ಲಿ ಕಾಂಗ್ರೆಸ್ ಈಗಾಗಲೇ ಸಮೀಕ್ಷೆ ಹಾಗೂ ಮಾಹಿತಿ ಆಧರಿಸಿ ಜಿಲ್ಲಾವಾರು ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಲಾರಂಭಿಸಿದ್ದು, ಕೊನೆಯ ಕ್ಷಣದ ಬದಲಾವಣೆ ಹೊರತು ಪಡಿಸಿ ಕಾಂಗ್ರೆಸ್ ಕಲಿಗಳು ಮತಸಮರಕ್ಕೆ ಸಜ್ಜಾಗುತ್ತಿದ್ದಾರೆ.

ಪ್ರತ್ಯುತ್ತರ ನೀಡಿ

Please enter your comment!
Please enter your name here