ಬ್ಯಾಟ್​ ಹಿಡಿದು ಫಿಲ್ಡ್​​ಗಿಳಿದ ದಚ್ಚು! ಇಷ್ಟಕ್ಕೂ ದರ್ಶನ್​ ಕ್ರಿಕೆಟ್​ ಆಡೋದು ಯಾಕಂತೆ ಗೊತ್ತಾ?!

ಸ್ಯಾಂಡಲ್ ವುಡ್ ನಟ ಚಾಲೇಂಜಿಗ್ ಸ್ಟಾರ್ ದರ್ಶನ್ ತಮ್ಮ ಬಿಡುವಿಲ್ಲದ ಶೂಟಿಂಗ್ ಶೆಡ್ಯೂಲ್​ ಮಧ್ಯೆಯೂ ಬ್ಯಾಟ್​​ ಹಿಡಿದು ಸಖತ್ ಸಿಕ್ಸರ್ ಬಾರಿಸಿದ್ದಾರೆ.  ಇದ್ಯಾವಾಗ ದರ್ಶನ ಇಷ್ಟು ಫ್ರೀಯಾಗಿ ಫಿಲ್ಡ್​​ಗೆ ಇಳಿದ್ರು ಅಂದ್ರಾ  ದರ್ಶನ ಕ್ರಿಕೆಟ್​ ಆಡಿರೋದು  ತಮ್ಮ ಅಭಿಮಾನಿ ಬಳಗದ  ಡಿ ಬ್ರದರ್ಸ್ ಪ್ರೀಮಿಯರ್ ಲೀಗ್ ಎಂಬ ಪಂದ್ಯಾವಳಿಗಾಗಿ.

ad

ಸದ್ಯ ತಮ್ಮ ಮುಂದಿನ ಚಿತ್ರ ರಾಬರ್ಟ್​  ಮೂಹೂರ್ತದಲ್ಲಿ ಭಾಗಿಯಾಗಿದ್ದ ಡಿ ಬಾಸ್.ಈಗ ಕ್ರೀಡೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಹೌದು ಪ್ರತಿವರ್ಷದ ಹಾಗೆಯೇ ಈ ಬಾರಿಯು ದರ್ಶನ್ ಅಭಿಮಾನಿ ಬಳಗ ‘ಡಿ ಕಂಪನಿ’ ಯಿಂದ ಡಿ ಬ್ರದರ್ಸ್ ಪ್ರೀಮಿಯರ್ ಲೀಗ್ ಎಂಬ ಪಂದ್ಯಾವಳಿವನ್ನು ಆಯೋಜಿಸಿದ್ದರು.

ಈ ಕ್ರಿಕೆಟ್ ಪಂದ್ಯವು ಎರಡನೇ ಬಾರಿ ನಡೆಯುತ್ತಿದ್ದು,  ಜ್ಞಾನಭಾರತಿ ಕ್ರೀಡಾಂಗಣದಲ್ಲಿ ಇಂದು ಪಂದ್ಯ ನಡೆಯುತ್ತಿದೆ. ವಿಶೇಷವಾಗಿ ಕ್ರೀಡಾಂಗಣಕ್ಕೆ ಆಗಮಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಳೊಂದಿಗೆ ಗ್ರೌಂಡ್ ಗಿಳಿದು ಬ್ಯಾಟ್ ಹಿಡಿದು ಕ್ರಿಕೆಟ್ ಆಟವನ್ನು ಆಡಿದ್ದಾರೆ. ನಿನ್ನೆ ಪ್ರಾರಂಭವಾದ ಪಂದ್ಯಾವಳಿಯೂ ಇಂದು ಮುಕ್ತಾಯವಾಗಿದೆ. ಅಷ್ಟಲ್ಲದೆ ಹಲವು ಜಿಲ್ಲೆಗಳಿಂದ ದರ್ಶನ್ ಅಭಿಮಾನಿ ಬಳಗದ ಒಟ್ಟು ಹತ್ತು ತಂಡಗಳು ಆಗಮಿಸಿ ಪಂದ್ಯದಲ್ಲಿ ಭಾಗಿಯಾಗಿವೆ.

ಇದೇ ವೇಳೆ ಮಾತನಾಡಿದ ನಟ ಚಾಲೇಜಿಂಗ್ ಸ್ಟಾರ್ ದರ್ಶನ್ ಪಂದ್ಯಕ್ಕೆ ಬೇಕಾದ ಎಲ್ಲಾ ರೀತಿಯ ಖರ್ಚುನ್ನು ಅಭಿಮಾನಿಗಳೇ ಹಾಕಿಕೊಂಡು ಹಲವು ಜಿಲ್ಲೆಗಳಿಂದ ಅಭಿಮಾನಿಗಳು ಬಂದು 4 ವರ್ಷಗಳಿಂದ ಪಂದ್ಯ ಆಡುತ್ತಿದ್ದಾರೆ. ನಾನು ಅವರೊಂದಿಗೆ ಆಟ ವಾಡುವ ಮೂಲಕ ಎಂಟರ್ಟೈನ್ ಮಾಡುತ್ತಿನಿ ಅಷ್ಟೇ.. ನಾನು ಯಾವಗಲೂ ಬ್ಯಾಟಿಂಗ್ ಮಾಡಲು ಇಷ್ಟಪಡುತ್ತೇನೆ. ಬೌಲಿಂಗ್, ಫೀಲ್ಡಿಂಗ್ ಮಾಡವುದಿಲ್ಲ.

ಇನ್ನೂ ನೀವು ಮ್ಯಾಚ್ ನೋಡುತ್ತೀರಾ ಎಂಬ ಪ್ರಶ್ನೆಗೆ ನನಗೆ ಮ್ಯಾಚ್ ನೋಡುವಷ್ಟು ಪೇಷನ್ಸ್ ಇಲ್ಲ, ನನ್ನನ್ನು ಯಾವತ್ತಾದರೂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮ್ಯಾಚ್ ನೋಡುತ್ತಿರುವುದನ್ನು ನೋಡಿದ್ದೀರಾ ಎಂದು ಪ್ರಶ್ನಿಸಿದರು. ಹಾಗೇ ತಮ್ಮ ಫೇವರೇಟ್ ಕ್ರಿಕೆಟ್ ಪ್ಲೇಯರ್ ಯಾರು ಎಂಬ ಪ್ರಶ್ನೆಗೆ ತಮ್ಮ ಫೇವರೆಟ್ ಕ್ರಿಕೆಟರ್ ಸಚಿನ್​​ ತೆಂಡುಲ್ಕರ್​ ಎಂದು ಉತ್ತರಿಸಿದರು.

ಇನ್ನು ಇಂದು ತಾಯಂದಿರ ದಿನಾಚರಣೆಯ ಬಗೆಗೆ ಮಾತನಾಡಿದ ದಚ್ಚು, ಮದರ್ಸ್ ಡೇಗೆ ಇವತ್ತು ಒಂದು ದಿನ ತಾಯಿಗೆ ವಿಶ್ ಮಾಡಿದರೆ ಸಾಲದು. ನಮ್ಮನ್ನ ಈ ಪ್ರಪಂಚಕ್ಕೆ ತಂದ ಅವರಿಗೆ ನಾವು ಪ್ರತಿ ದಿನವು ವಿಶ್ ಮಾಡಬೇಕು ಎಂದು ಹೇಳಿದರು.

ಇನ್ನೂ ಕ್ರಿಕೆಟ್ ಮ್ಯಾಚ್ ಕುರಿತು ಅಭಿಮಾನಿಗಳಿಗೆ ಎಲ್ಲಾರೂ ಸಹ ಎಂಜಾಯ್ ಮಾಡಿಕೊಂಡು ಆಟವನ್ನು ಆಡಿ, ಆದರೆ ಮ್ಯಾಚ್ ಫಿಕ್ಸ್ ಮಾಡಿಕೊಂಡು ಆಡಬೇಡಿ ಎಂದು ಸಂದೇಶ ನೀಡಿದರು. ನಿಮ್ಮ ಫೇವರೇಟ್ ಸ್ಪೋರ್ಟ್ಸ್ ಯಾವುದು ಎಂದು ಕೇಳಿದಾಗ ನನ್ನ ಫೇವರೆಟ್ ಸ್ಪೋರ್ಟ್ಸ್ ಹಾರ್ಸ್ ರೈಡಿಂಗ್ ಎಂದು ಹೇಳಿದ್ದಾರೆ.ಇದಕ್ಕೂ ಮುನ್ನ ದರ್ಶನ್ ರವರು ಹಲವು ವರ್ಷಗಳ ಹಿಂದೆ ಸಿಸಿಎಲ್ ಪಂದ್ಯಗಳಲ್ಲಿ ನಟ ಕಿಚ್ಚ ಸುದೀಪ್ ಜೊತೆ ಕಾಣಿಸಿಕೊಂಡಿದ್ದರು, ಹಾಗೂ ಒಂದೆರಡೂ ಕರ್ನಾಟಕ ಬುಲ್ಡೋಸರ್ಸ್ ತಂಡದ ಕೇಲವು ಪಂದ್ಯಗಳಲ್ಲಿ ಸಹ ಆಟ ಆಡಿದ್ದರು.