ಮತ್ತೆ ಹಾಡಲಿದೆ ಗಾನ ಕೋಗಿಲೆ !! ಎಸ್ ಜಾನಕಿ ಆರೋಗ್ಯದ ಅಪ್ಡೇಟ್

ಗಾನ ಕೋಗಿಲೆ ಎಂದೆ ಪ್ರಸಿದ್ಧವಾಗಿರುವ ಹಿರಿಯ ಗಾಯಕಿ ಎಸ್. ಜಾನಕಿಯವರು (81) 7 ದಿನಗಳ ಹಿಂದೆ ಗಾಯಗೊಂಡು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಇಂದು ಸಂಜೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುತ್ತಿದ್ದಾರೆ.

ಹೌದು ಸಂಬಂಧಿಕರ ಮನೆಗೆ ತೆರಳಿದ್ದ ಹಿರಿಯ ಗಾಯಕಿ ಎಸ್​. ಜಾನಕಿ ಕಾಲು ಜಾರಿ ಬಿದ್ದು ಸೊಂಟಕ್ಕೆ ಪೆಟ್ಟು ಮಾಡಿಕೊಂಡಿದ್ದರು. ಜೋರಾಗಿ ಬಿದ್ದ ಪರಿಣಾಮ ಸೊಂಟಕ್ಕೆ ಫ್ರಾಕ್ಚರ್​ ಆಗಿರುವ ಹಿನ್ನೆಲೆಯಲ್ಲಿ ಜಾನಕಿಯವರಿಗೆ ಡಾ. ನಿತಿನ್ ನೇತೃತ್ವದ ತಂಡ ಆಪರೇಷನ್ ಮಾಡಿದ್ದಾರೆ.

ಸದ್ಯ ಇದೀಗಾ ಆಸ್ಪತ್ರೆಗೆ ದಾಖಲುಗೊಂಡು ಚಿಕಿತ್ಸೆ ಪಡೆಯುತ್ತಿರು ಎಸ್. ಜಾನಕಿಯವರು ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುತ್ತಿದ್ದಾರೆ.

ಎಸ್ ಜಾನಕಿಯವರು ಇದುವರೆಗೂ ಕನ್ನಡ ಸೇರಿ ಹಲವು ಪರಾಭಾಷೆಗಳಲ್ಲಿ ಕಂಠವನ್ನು ಧಾರೆ ಮಾಡಿದ್ದಾರೆ, ಸುಮಾರು 48,000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ.

ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಗಾನ ಕೋಗಿಲೆ ಎಸ್​. ಜಾನಕಿ ಅವರು ಚಿಕಿತ್ಸೆ

ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಗಾನ ಕೋಗಿಲೆ ಎಸ್​. ಜಾನಕಿ ಅವರು ಚಿಕಿತ್ಸೆ

BtvNews ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಶನಿವಾರ, ಮೇ 4, 2019