ನಾನವನಲ್ಲ ನಾನವನಲ್ಲ – ಕ್ರಿಕೆಟಿಗ ಟಾಮ್ ಮೂಡಿ ಸ್ಪಷ್ಟನೆ

ಇತ್ತೀಚೆಗೆ ಮೂಡಿಸ್ ಸಂಸ್ಥೆ ಭಾರತದ ಆರ್ಥಿಕತೆ ಬಗ್ಗೆ  BAA-2 ರೇಟಿಂಗ್ ಬಂದಿದ್ದು ತಮಗೆಲ್ಲರಿಗೂ ತಿಳಿದೇ ಇದೆ. ಈದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದ ಮಲೆಯಾಳಿ CPM ಪಕ್ಷ ಖ್ಯಾತ ಆಷ್ಟ್ರೇಲಿಯನ್ ಕ್ರಿಕೆಟಿಗ ಟಾಮ್ ಮೂಡಿಯನ್ನು ಹಿಗ್ಗಾ ಮುಗ್ಗಾ ಟ್ರೋಲ್ ಮಾಡಿದೆ. “ನೀವು ಮೋದಿಯವರಿಂದ ಕಮೀಶನ್ ಪಡೆದು ಭಾರತಕ್ಕೆ ಒಳ್ಳೆಯ ಆರ್ಥಿಕ ರೇಟಿಂಗ್ ಕೊಟ್ಟಿದ್ದೀರಿ . ನಿಮಗೆ ನಾಚಿಕೆಯಾಗಬೇಕು” ಅಂತ ಕೇರಳದ ಕಮ್ಯುನಿಷ್ಟ್ ಪಕ್ಷ ಸಿಪಿಎಂ ನ ವಿಪ್ಲವಂ ವಿಜಯಕಟ್ಟೆ ಆಸ್ಟೇಲಿಯಾದ ಟಾಂ ಮೂಡಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಅಂತ ರಾಷ್ಟ್ರೀಯ ಪತ್ರಿಕೆ ವರದಿ ಮಾಡಿದೆ.

ಇದು ರಾಷ್ಟ್ರೀಯ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. ಅದಕ್ಕೆ ಇವತ್ತು ತಮ್ಮ ಫೇಸ್ಬುಕ್ ನಲ್ಲಿ ಪ್ರತಿಕ್ರಿಯಿಸಿದ ಆಷ್ಟ್ರೇಲಿಯಾದ ಖ್ಯಾತ ಕ್ರಿಕೆಟಿಗ ” ತಾನು ಯಾವುದೇ ಆರ್ಥಿಕ ಸಮೀಕ್ಷೆಯ ಜೊತೆ ಕೆಲಸ ಮಾಡುತ್ತಿಲ್ಲ ಅನ್ನುವುದನ್ನು ಮನವರಿಕೆ ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು” ಅಂತ ಟಾಮ್ ಮೂಡಿ ಹೇಳಿದ್ದಾರೆ.

ಇದನ್ನು ರಾಜ್ಯ ಬಿಜೇಪಿಯ ಸುರೇಶ್ ಕುಮಾರ “ಮೋದಿಯನ್ನು ವಿರೀಧಿಸುವವರಿಗೆ ಮೂಡಿ ಯಾರಾದರೇನು ? ” ಅಂತ ವ್ಯಂಗ್ಯ ಮಾಡಿದ್ದಾರೆ.

 

ಒಟ್ಟಿನಲ್ಲಿ ಮೂಡಿಸ್ ಕೊಟ್ಟ ರೇಟಿಂಗ್ ಮೋದಿ ವಿರೋಧಿ ಬಣಗಳಲ್ಲಿ ಬೆಂಕಿ ಹಚ್ಚಿದ್ದಂತೂ ಸುಳ್ಳಲ್ಲ.