ವಾರಣಾಸಿ ಸಂಪೂರ್ಣ ಮೋದಿಮಯ! ನಾಮಪತ್ರ ಸಲ್ಲಿಕೆಗೂ ಮುನ್ನ ನಡೆದ ರ್ಯಾಲಿಯಲ್ಲಿ ಲಕ್ಷಾಂತರ ಜನಭಾಗಿ!!

ಉತ್ತರ ಪ್ರದೇಶದ ವಾರಣಾಸಿ ಕ್ಷೇತ್ರ ಅಕ್ಷರಷಃ ಮೋದಿಮಯವಾಗಿ ಬದಲಾಗಿದೆ. ಪ್ರಧಾನಿ ಮೋದಿಯವರ ಸ್ವಕ್ಷೇತ್ರವಾಗಿರುವ ವಾರಣಾಸಿ ಎಲ್ಲೆಡೆ ಮೋದಿ ಮೋದಿ ಉದ್ಘಾರ ಮೊಳಗತೊಡಗಿದೆ.  ನಾಳೆ ಲೋಕಸಭಾ ಚುನಾವಣೆಗಾಗಿ ತಮ್ಮ ಸ್ವಕ್ಷೇತ್ರ ವಾರಣಾಸಿಯಲ್ಲಿ ನಾಮಿನೇಶನ್​ ಸಲ್ಲಿಸಲಿರುವ ಮೋದಿ ಅದರ ಪೂರ್ವಭಾವಿಯಾಗಿ ಇಂದು ಬೃಹತ್ ರ್ಯಾಲಿ ನಡೆಸಿದ್ದಾರೆ.

ad

ಕೆಲವು ದಿನಗಳಿಂದಲೇ ಚುನಾವಣಾ ಪ್ರಚಾರ ಕಾರ್ಯವನ್ನು ಆರಂಭಿಸಿದ್ದ ಮೋದಿ ಶುಕ್ರವಾರ ನಾಮಪತ್ರ ಸಲ್ಲಿಕೆ ಹಿನ್ನೆಲೆಯಲ್ಲಿ ಇಂದು ಕೊನೆಯ ದಿನದ ಪ್ರಚಾರವಾಗಿದ್ದರಿಂದ ವಾರಣಾಸಿಯಲ್ಲಿ ಭರ್ಜರಿ ಬೃಹತ್ ರೋಡ್ ಶೋ ನಡೆಸಿದ್ದರು, 7 ಕಿ. ಮೀ ರೋಡ್ ಶೋನಲ್ಲಿ ಸುಮಾರು 6 ಲಕ್ಷಕ್ಕೂ ಹೆಚ್ಚು ಜನ ಸೇರಿದ್ದು, ವಾರಣಾಸಿಯೇ ಕೇಸರಿಮಯವಾಗಿ ಬದಲಾಗಿದೆ

ಈ ಹಿಂದೆ ವಾರಣಾಸಿ ಕ್ಷೇತ್ರದಿಂದ ಪ್ರಧಾನಿ ಮೋದಿ ವಿರುದ್ದ ಕಾಂಗ್ರೆಸ್ ಕಾರ್ಯದರ್ಶಿ ಪ್ರಿಯಾಂಕ ಗಾಂಧಿಯವರು ಲೋಕಸಭಾ ಚುನಾವಣೆಯಲ್ಲಿ ಪ್ರತಿಸ್ಪರ್ಧಿಯಾಗಿ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೀಗಾ ಮೋದಿ ವಿರುದ್ಧ ಪ್ರಿಯಾಂಕ ಗಾಂಧಿಯವರು ಸ್ಪರ್ಧಿಸುತ್ತಿಲ್ಲ ಬದಲಾಗಿ ಕಾಂಗ್ರೆಸ್ ಪಕ್ಷದಿಂದ ಅಜಯ್ ರೊಯ್​  ಪ್ರತಿಸ್ಪರ್ಧಿಯಾಗಿ ಸ್ಪಧಿಸುತ್ತಿದ್ದಾರೆ.

ಇಂದು ಮೋದಿ ವಾರಣಾಸಿ ಶಕ್ತಿಪ್ರದರ್ಶನಕ್ಕೆ ದೇಶವೇ ಬೆಚ್ಚಿಬಿದ್ದಿದ್ದು, ಮೋದಿ ರ್ಯಾಲಿಯಲ್ಲಿ ಸ್ವಯಂಪ್ರೇರಿತರಾಗಿ ಹರಿದು ಬಂದಿರುವ ಜನರನ್ನು ಕಂಡು ಮೋದಿ ವಿರೋಧಿಗಳ ಟೀಕಾಸ್ತ್ರಗಳು ಮೌನವಾದಂತಾಗಿವೆ.

ಐತಿಹಾಸಿಕ ದಾಖಲೆ ನಿರ್ಮಿಸಿದ ಮೋದಿ ರೋಡ್ ಶೋ

ಐತಿಹಾಸಿಕ ದಾಖಲೆ ನಿರ್ಮಿಸಿದ ಮೋದಿ ರೋಡ್ ಶೋ

BtvNews ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಗುರುವಾರ, ಏಪ್ರಿಲ್ 25, 2019