ದಲಿತರೊಬ್ಬರು ಉಪಮುಖ್ಯಮಂತ್ರಿ ಆಗೋದು ಪಕ್ಕಾ !! ಎಚ್ ಡಿಕೆ ಮುಖ್ಯಮಂತ್ರಿ ಆಗಬೇಕಷ್ಟೆ !!

ನಾನು ಅಧಿಕಾರಕ್ಕೆ ಬಂದರೆ ದಲಿತ ಮತ್ತು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಇಬ್ಬರನ್ನು ಉಪಮುಖ್ಯಮಂತ್ರಿ ಮಾಡುತ್ತೇನೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ. ಇಂದು ಬೆಂಗಳೂರು ಪುರಭವನದಲ್ಲಿ ದಲಿತ ಸಂಘಟನೆಗಳ ಜೊತೆ ಸಂವಾದ ಕಾರ್ಯಕ್ರಮದಲ್ಲಿ ಎಚ್ ಡಿ ಕುಮಾರಸ್ವಾಮಿ ಮಾತನಾಡುತ್ತಿದ್ದರು. ಸುಮಾರು ಮೂವತ್ತಕ್ಕೂ ಅಧಿಕ ದಲಿತ ಸಂಘಟನೆಗಳ ಪ್ರಮುಖರು ಈ ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಬಡ್ತಿ ಮೀಸಲಾತಿ ಕಾಯ್ದೆಗೆ ಯಾಕೆ ವಿರೋಧ ವ್ಯಕ್ತಪಡಿಸಿದ್ರಿ ? ಎಂದು ಸಮತಾ ಸೈನಿಕ ದಳದ ಮುಖಂಡರಾದ ಡಾ ವೆಂಕಟಸ್ವಾಮಿ ಪ್ರಶ್ನಿಸಿದ್ರು. ಇದಕ್ಕೆ ಉತ್ತರ ನೀಡಿದ ಎಚ್ ಡಿ ಕುಮಾರಸ್ವಾಮಿ, ” ನಾನು ಕಾಯ್ದೆ ಬಗ್ಗೆ ಮಾತನಾಡಿಯೇ ಇಲ್ಲ. ಆದರೂ ನಾನು ಕಾಯ್ದೆಗೆ ವಿರೋಧ ವ್ಯಕ್ತಪಡಿಸಿದ್ದೇನೆ ಎಂದು ಸುದ್ದಿಯಾಯ್ತು. ಬಡ್ತಿ ಮೀಸಲಾತಿ ಕಾಯ್ದೆ ಸುಪ್ರಿಂ ಕೋರ್ಟ್ ತೀರ್ಪಿಗೆ ವಿರುದ್ದವಾಗಿದೆ. ಅಂದು ಸರಿಯಾದ ವಕೀಲರನ್ನು ನೇಮಿಸದೇ ಇದ್ದಿದ್ರಿಂದ ಸುಪ್ರಿಂ ಕೋರ್ಟ್ ಅಂತಹ ತೀರ್ಪು ನೀಡಿತ್ತು. ಈಗ ಕಾಯ್ದೆ ರಚನೆಯ ಬಳಿಕ ಅದನ್ನು ಸಮರ್ಥಿಸುವ ಉತ್ತಮ ವಕೀಲರು ಇಲ್ಲದೇ ಇದ್ದರೆ ಸುಪ್ರಿಂ ಕೋರ್ಟಿನಲ್ಲಿ ಕಾಯ್ದೆ ಬಿದ್ದು ಹೋಗಬಹುದು ಎಂದಿದ್ದೇನೆ” ಎಂದರು.

 

ಪೇಜಾವರ ಸ್ವಾಮೀಜಿ ಮತ್ತು ಗೋ ಮಧುಸೂದನ್ ಸಂವಿದಾನ ವಿಚಾರವಾಗಿ ನೀಡಿರುವ ಹೇಳಿಕೆಗಳೂ ಸಂವಾದದಲ್ಲಿ ಪ್ರಶ್ನೆಯಾದವು. ರಾಜಕೀಯ ಕಾರಣಕ್ಕಾಗಿ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದು ಅದಕ್ಕೆ ಮಹತ್ವ ನೀಡುವ ಅಗತ್ಯ ಇಲ್ಲ ಎಂದು ಎಚ್ ಡಿ ಕುಮಾರಸ್ವಾಮಿ ಪ್ರತಿಪಾದಿಸಿದರು. ಕರ್ನಾಟಕದಲ್ಲಿ ದಲಿತ ಮುಖ್ಯಮಂತ್ರಿ ಆಗೋದಕ್ಕೆ ಸಾದ್ಯವೇ ಇಲ್ಲವೇ ಎಂಬ ಪ್ರಶ್ನೆ ಬಂದಿದ್ದು ದಸಂಸ ಅಧ್ಯಕ್ಷ ಎನ್ ಮೂರ್ತಿಯವರಿಂದ. ದಲಿತ ಸಿಎಂ ಪ್ರಶ್ನೆಗೆ ಉತ್ತರಿಸಿದ ಎಚ್ ಡಿಕೆ, ನಾನು ಈಗಾಗಲೇ ಒಂದು ನಿರ್ಧಾರಕ್ಕೆ ಬಂದಿದ್ದೇನೆ. ಜೆಡಿಎಸ್ ಅಧಿಕಾರಕ್ಕೆ ಬಂದಲ್ಲಿ ಅಲ್ಪಸಂಖ್ಯಾತ ಸಮುದಾಯದ ಒಬ್ಬ, ದಲಿತ ಸಮುದಾಯದ ಒಬ್ಬರನ್ನು ಉಪಮುಖ್ಯಮಂತ್ರಿ ಮಾಡುತ್ತೇನೆ” ಎಂದರು.

Watch Here: https://youtu.be/vkMUPJBzRUw

1 ಕಾಮೆಂಟ್

Comments are closed.