ಶಾಸಕನ ವಿರುದ್ಧ ಅತ್ಯಾಚಾರ ಪ್ರಕರಣ! ಆರೋಪಿಸಿದ ಸಂತ್ರಸ್ಥೆಯನ್ನೇ ವರಿಸಿದ ಎಮ್​ಎಲ್​​ಎ!!

ಮಹಿಳೆಯೊರ್ವಳಿಂದ ಅತ್ಯಾಚಾರದ ಆರೋಪ ಎದುರಿಸುತ್ತಿದ್ದ ಶಾಸಕನೊರ್ವ ಅಚ್ಚರಿಯ ಬೆಳವಣಿಗೆಯಲ್ಲಿ ಆರೋಪಿಸಿದ  ಮಹಿಳೆಯನ್ನೇ ಶಾಸ್ತ್ರೋಕ್ತವಾಗಿ ದೇವರ ಸಮ್ಮುಖದಲ್ಲಿ ವಿವಾಹವಾದ ಘಟನೆ ತ್ರಿಪುರಾದಲ್ಲಿ ನಡೆದಿದೆ.

ತ್ರಿಪುರಾದ ಅಗರ್ತಲಾದಲ್ಲಿ ಘಟನೆ ನಡೆದಿದ್ದು, ತ್ರಿಪುರಾ ಆಡಳಿತ ಪಕ್ಷ ಐಪಿಎಫ್​​ಟಿ ಶಾಸಕ ಧನಂಜಯ್ ಅವರ ವಿರುದ್ಧ ಮದುವೆಯಾಗುವುದಾಗಿ ವಂಚಿಸಿದ ಆರೋಪ ಕೇಳಿಬಂದಿತ್ತು.  ಮೇ 20ರಂದು ಸಂತ್ರಸ್ಥ  ಮಹಿಳೆ ಪೊಲೀಸ್ ಠಾಣೆಗೆ ಆಗಮಿಸಿ ಶಾಸಕರ ವಿರುದ್ಧ ದೂರು ದಾಖಲಿಸಿದ್ದಳು.

ಈ ಆರೋಪದಿಂದ ಶಾಸಕ ಧನಂಜಯ್ ಸಾಕಷ್ಟು ಮುಜುಗರ ಎದುರಿಸಿದ್ದರು. ಬಳಿಕ ಆಪ್ತರ ಸಮ್ಮುಖದಲ್ಲಿ  ಇಬ್ಬರ ನಡುವೆ ರಾಜಿ- ಸಂಧಾನ ನಡೆಸಿದ್ದು, ಶಾಸಕ ಧನಂಜಯ್‌ ಮಹಿಳೆಯನ್ನು ವಿವಾಹವಾಗುವುದಾಗಿ ಒಪ್ಪಿಕೊಂಡಿದ್ದರು ಎನ್ನಲಾಗಿದೆ.

ಕೊಟ್ಟ ಮಾತಿನಂತೆ  ಐಪಿಎಫ್‌ಟಿ ಶಾಸಕ ಧನಂಜಯ್‌ ಹಾಗೂ ಸಂತ್ರಸ್ತ ಮಹಿಳೆಯ ವಿವಾಹವಾಗಿದ್ದಾರೆ. ಭಾನುವಾರ ಎಮ್​ಎಲ್​​ಎ ಹಾಗೂ ಸಂತ್ರಸ್ಥ ಮಹಿಳೆಯ ವಿವಾಹ  ಅಗರ್ತಲಾದಲ್ಲಿರುವ ಚತುರ್ದಾಸ್‌ ದೇವತಾ ಮಂದಿರದಲ್ಲಿ ನೆರವೇರಿದೆ. ಈ ಮೂಲಕ ಪ್ರಕರಣವನ್ನು ಖುಲಾಸೆಗೊಳಸಲಾಗಿದೆ.