ಶೀಘ್ರದಲ್ಲೇ ಮೈಸೂರು ಅರಮನೆಗೊಂದು ಪುಟಾಣಿ ಅಧಿಪತಿ !! ಗುಡ್ ನ್ಯೂಸ್ ನೀಡಲಿದ್ದಾರೆ ಯುವರಾಣಿ ತ್ರಿಷಿಕಾ !!

ಕೊನೆಗೂ ಮೈಸೂರು ಅರಸುಮನೆತನಕ್ಕೆ ಶಾಪ ವಿಮೋಚನೆ ಆಗೋ ಲಕ್ಷಣಗಳು ಕಾಣುತ್ತಿದೆ. ಯಧುವೀರ ಕೃಷ್ಣ ದತ್ತ ಒಡೆಯರ್ ಪತ್ನಿಯಾಗಿರೋ, ಸಾಂಪ್ರದಾಯಿಕ ಮಹರಾಣಿ ತ್ರಿಷಿಕಾ ಕುಮಾರಿ ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಳೆದ ಕೆಲ ವರ್ಷಗಳಿಂದ ಮೈಸೂರು ರಾಜಮನೆತನಕ್ಕೆ ಮಕ್ಕಳಾಗದ ಕೊರತೆ ಇತ್ತು. ಅದೇ ಕಾರಣಕ್ಕೆ ಒಡೆಯರ್ ಸಾವಿನ ಬಳಿಕ ಸಂಬಂಧಿಯಾಗಿರೋ ಯಧುವೀರ್ ಕೃಷ್ಣದತ್ತ ಒಡೆಯರ್ ರನ್ನು ಯುವರಾಜರಾಗಿ ದತ್ತು ಸ್ವೀಕರಿಸಲಾಗಿತ್ತು. ಇದೀಗ ಯಧುವೀರ್ ಕೃಷ್ಣದತ್ತ ಮತ್ತು ತ್ರಿಷಿಕಾ ಕುಮಾರಿ ದಂಪತಿಗಳಿಗೆ ಮಗುವಾಗುವ ಸಮಯ ಬಂದಿದೆ. ಇನ್ನು ಕೆಲವೇ ದಿನಗಳಲ್ಲಿ ಬಹಳ ವರ್ಷಗಳ ಬಳಿಕದ ಮಗುವಿನ ಕಲರವ ಅರಮನೆಯಲ್ಲಿ ಕೇಳಲಿದೆ. ಹೌದು. ಮೈಸೂರು ಯುವರಾಣಿ ತ್ರಿಷಿಕಾ ಕುಮಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಯದುವೀರ್​ ಕೃಷ್ಣದತ್ತ ಒಡೆಯರ್​ ಧರ್ಮ ಪತ್ನಿ , ರಾಣಿ ತ್ರಿಷಿಕಾ ಕುಮಾರಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಇಂದು ಅಥವಾ ನಾಳೆ ಯದುವಂಶದ ಕುಡಿ ಆಗಮನದ ನಿರೀಕ್ಷೆ ಇದೆ.

ಇಂದು ಬೆಳಗ್ಗೆ ಇಂದಿರಾ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿರುವ ತ್ರಿಷಿಕಾರನ್ನು ನೋಡಿಕೊಳ್ಳಲು ರಾಜಮಾತೆ ಪ್ರಮೋದಾದೇವಿ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ. ಪ್ರಮೋದಾ ದೇವಿ ಜತೆ ಕುಟುಂಬಸ್ಥರೂ ಆಸ್ಪತ್ರೆಗೆ ಪ್ರಯಾಣ ಬೆಳೆಸಿದ್ದಾರೆ. ಮೈಸೂರು ರಾಜಮನೆತನ ಎನ್ನುವುದು ಜನರ ಭಾವನಾತ್ಮಕ ವಿಚಾರವಾಗಿದೆ. ರಾಜಮನೆತನವು ಪ್ರಜಾಪ್ರಭುತ್ವ ಸ್ಥಾಪನೆಗೂ ಮೊದಲೇ ಪ್ರಜಾಪ್ರಭುತ್ವದ ಮಾಧರಿಯಲ್ಲೇ ಕೆಲಸ ಮಾಡಿದವರು. ಅಂದು ರಾಜಮನೆತನ ಮಾಡಿದ ಹಲವು ಜನಪರ ಕೆಲಸಗಳನ್ನು ಯಾವ ಸರಕಾರಗಳು ಎಷ್ಟು ವರ್ಷದಲ್ಲೂ ಸಾಕಾರ ಮಾಡಲು ಸಾದ್ಯವಿಲ್ಲದಂತಹುಗಳು. ಆದ್ದರಿಂದ ಹಲವರಿಗೆ ಪ್ರಾತಃ ಸ್ಮರಣೀಯರಾಗಿರೋ ರಾಜಮನೆತನಕ್ಕೆ ಹೊಸ ಸದಸ್ಯರ ಆಗಮನದ ಖುಷಿ ರಾಜ್ಯದೆಲ್ಲೆಡೆ ಹರ್ಷಕ್ಕೆ ಕಾರಣವಾಗಿದೆ.