ಬಿಟಿವಿ ವರದಿಗಾರನಿಗೆ ಬಿಜೆಪಿ ಮುಖಂಡನಿಂದ ಭಯಾನಕ ಹಲ್ಲೆ !! ಬಿಜೆಪಿಯಿಂದ ನ್ಯಾಯದ ನಿರೀಕ್ಷೆಯಲ್ಲಿ ಪತ್ರಕರ್ತರ ಸಮೂಹ !!

ಬಿಜೆಪಿ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಪತ್ರಿಕಾ ಸ್ವಾತಂತ್ರ್ಯದ ಮೇಲೆ ನೇರ ದಾಳಿ ನಡೆಸಿದೆ. ಈ ದಾಳಿಗೂ ಬಿಜೆಪಿಗೂ ಸಂಬಂಧವಿಲ್ಲ ಎಂದಾದರೆ ಹಲ್ಲೆಕೋರ ಬಿಜೆಪಿ ಮುಖಂಡರ ಮೇಲೆ ಗಂಭೀರ ಕ್ರಮ ತೆಗೆದುಕೊಳ್ಳಬೇಕಿದೆ. ಬಿಟಿವಿ ತುಮಕೂರು ವರದಿಗಾರ ವಾಗೀಶ್ ಮೇಲೆ ನಡೆದ ಭೀಕರ ದೈಹಿಕ ದಾಳಿಯನ್ನು ರಾಜ್ಯದ ಪತ್ರಕರ್ತರ ಸಮೂಹ ಗಂಭೀರವಾಗಿ ತೆಗೆದುಕೊಂಡಿದೆ. ಬಿಜೆಪಿ ಮುಖಂಡನ ಅಕ್ರಮ ಗಣಿಗಾರಿಕೆ ಬಗ್ಗೆ ವರದಿ ಮಾಡಿದಕ್ಕೆ, ಬಿಟಿವಿ ರಿಪೋರ್ಟರ್​ ಮೇಲೆ ಬಿಜೆಪಿ ನಾಯಕರು ಗೂಂಡಾಗಿರಿ ನಡೆಸಿದ್ದಾರೆ. ತುಮಕೂರಿನಲ್ಲಿ ಸುದ್ದಿಗೋಷ್ಠಿಗೆ ಎಂದು ಕರೆಸಿಕೊಂಡ ಬಿಜೆಪಿ ನಾಯಕರು ಏಕಾಏಕಿ ರಿಪೋರ್ಟರ್​ ಮೇಲೆ ಹಲ್ಲೆ ನಡೆಸಿದ್ದಾರೆ.

ಬಿಟಿವಿ ವರದಿಗಾರ ವಾಗೀಶ್ ಮೇಲೆ ಹೆಬ್ಬಾಕ ರವಿ ಮತ್ತು ಬೆಂಬಲಿಗರು ಹಲ್ಲೆ ನಡೆಸಿದ್ದಾರೆ. ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹೆಬ್ಬಾಕ ರವಿಗೆ ಬಾವಿಕಟ್ಟೆ ನಾಗಣ್ಣ ಮತ್ತಿತರರು ಸಾಥ್​ ನೀಡಿದ್ದಾರೆ. ಅಲ್ದೇ ನಮ್ಮ ಬಗ್ಗೆ ವರದಿ ಮಾಡಿದ್ರೆ ನಿನ್ನನ್ನು ಉಳಿಸಲ್ಲ ಅಂತಾ ಹೆಬ್ಬಾಕ ರವಿ ಬೆದರಿಕೆ ಹಾಕಿದ್ದಾನೆ.ಈ ಬಗ್ಗೆ ಹೆಬ್ಬಾಕ ರವಿ ವಿರುದ್ಧ ತುಮಕೂರು ನಗರ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ.ಈಗ ಬಿಜೆಪಿಯ ರಾಜ್ಯ ನಾಯಕರು ರಾಜ್ಯದ ಪತ್ರಿಕಾ ಸಮೂಹಕ್ಕೆ ಉತ್ತರ ನೀಡಬೇಕಿದೆ. ಈಗಾಗಲೇ ರಾಯಚೂರು ಸೇರಿದಂತೆ ಹಲವೆಡೆ ಪತ್ರಕರ್ತರು ಮತ್ತು ಜನಪರ ಸಂಘಟನೆಗಳು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದೆ.ಬಿಟಿವಿಯು ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಕಾನೂನು ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಬಿಟಿವಿ ಆಡಳಿತ ಮಂಡಳಿ ತಿಳಿಸಿದೆ. ಬಿಜೆಪಿ ಪಕ್ಷ ಈಗ ತನ್ನ ಪಕ್ಷದ ಕ್ರಮಗಳನ್ನು ಸ್ಪಷ್ಟಪಡಿಸಬೇಕಿದೆ ಎಂಬುದು ಪತ್ರಕರ್ತರ ಆಗ್ರಹವಾಗಿದೆ

4 ಕಾಮೆಂಟ್ಗಳನ್ನು

 1. manyare VARADIGARARE YACHCHATTUKOLLUVA KALAVIDU!
  2barre bjp bennu hattidare varadi madidante yendu tilidiruvade mahaparadha!!
  swatantra harana vaguttide yendu yavaga tiliyutte gottilla!!
  3 himbalakara nade ,nirudyogigalu paksha chatuvatike udyogadalli todasgi kondiruvadu varadigararigenu kanadu!!
  4 baree mari mele kai yeledukollutta varadi maduvadu ardhambnarada patraka dharmavendu tilidaga matra. yenannu varadi madabekembudu tiliyabahudeno!!

 2. #. IF YOU ARE INTERESTED TO LISTEN one death case of GANAPATI killed many hours of work of VIDHA south!> it may be publicity stunt also.
  IF REPORTER IS RESPONSIBLE TO SPEED UP NEWS > WHY THE SUBORDINATE WORK IS SO MUCH HIGHLIGHTED IS THOUSAND DOLLER QUESTION!
  GOVERNMENT SERVANTS ARE SERVANTS OF THE SOCIETY! AND THEY GET SALARY>> LAW AND ORDER IS WITH THEM!! if any trouble in his job he might have been complained to the higher officials but not by news making .

 3. more then the loud speaker all use to utter the abnormal words at the time of presentation > it creates undo atmosphere!1 that one must understand first before TAKING NEWS IN HIS HAND> I FEEL!~!

Comments are closed.