ನಾಗವಲ್ಲಿ ರಸ್ತೆಯಲ್ಲಿ ನಡೆದಿದ್ದೇನು? ಕಾರು ಇದ್ದಕ್ಕಿದ್ದಂತೆ ನುಜ್ಜುಗುಜ್ಜಾಗಿದ್ದ್ಯಾಕೆ? ನೀವೆ ನೋಡಿ!

ಆಪ್ತ ರಕ್ಷಕ್ ಚಿತ್ರದಲ್ಲಿ ವಿಷ್ಣುವರ್ಧನ್​ ಕೋಮಲ ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ಧ ರೋಚಕ ದೃಶ್ಯವನ್ನು ನೀವು ನೋಡಿರತಿರಾ…

adಫಿಲ್ಮನಲ್ಲಿ ನಡೆದ ಅಂತಹ ಘಟನೆ ನಿಜಜೀವನದಲ್ಲೂ ನಡೆದ್ರೆ ಹೇಗಿರುತ್ತೆ ಗೊತ್ತಾ? ತುಮಕೂರಿನಲ್ಲಿ ಇಂತಹುದೇ ಘಟನೆಯೊಂದ ನಡೆದಿದ್ದು ನೋಡುಗರ ಮೈ ಜುಮ್ಮೆನಿಸುತ್ತದೆ. ಹೌದು ತುಮಕೂರಿನ ನಾಗವಲ್ಲಿ ಸಮೀಪದ ಹನುಮಂತನಗರದಲ್ಲಿ ಇಂತಹದೊಂದು ಘಟನೆ ನಡೆದಿದ್ದು, ರಸ್ತೆಯಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ಮರವೊಂದು ಬುಡಸಮೇತ ಉರುಳಿ ಬಿದ್ದಿದೆ. ಕ್ಷಣಾರ್ಧದಲ್ಲಿ ನಡೆದ ಈ ಘಟನೆಗೆ ಎಲ್ಲರೂ ಬಿಚ್ಚಿಬಿದ್ದಿದ್ದು, ಕೂದಲೆಳೆ ಅಂತರದಲ್ಲಿ ಕಾರಿನಲ್ಲಿದ್ದ ಎಲ್ಲರೂ ಅದೃಷ್ಟವಶಾತ್ ಬಚಾವಾಗಿದ್ದಾರೆ. ಥೇಟ್​ ಸಿನಿಮಾ ಮಾದರಿಯಲ್ಲಿ ಕಾರಿನ ಮೇಲೆ ಮರ ಬಿದ್ದಿದೆ. ಈ ದೃಶ್ಯ ಹತ್ತಿರದಲ್ಲೇ ಇದ್ದ ಸಿಸಿಟಿವಿಯಲ್ಲಿ ದಾಖಲಾಗಿದ್ದು, ಸಾಕಷ್ಟು ವೈರಲ್​ ಆಗಿದೆ. ಕಾರಿನಲ್ಲಿದ್ದವರು ಕ್ಯಾತ್ಸಂದ್ರದ ದರ್ಗಾಕ್ಕೆ ಭೇಟಿ ಕೊಟ್ಟು ಕುಣಿಗಲ್​ಗೆ ವಾಪಸಾಗ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಕಾರಿನಲ್ಲಿದ್ದವರು ಕುಣಿಗಲ್ ಹಾಗೂ ಚಿಕ್ಕಮಗಳೂರು ಮೂಲದವರು ಎನ್ನಲಾಗಿದೆ. ಇನ್ನು, ಮರ ಬಿದ್ದ ರಭಸಕ್ಕೆ ಕಾರು ನಜ್ಜುಗುಜ್ಜಾಗಿದೆ.