ಪತ್ನಿ ಮರ್ಮಾಂಗಕ್ಕೆ ಇಸ್ತ್ರಿ ಪೆಟ್ಟಿಗೆಯಿಂದ ಬರೆಹಾಕಿದ ಕ್ರೂರಿ ಪತಿ

ಮೋಸ ಹೋಗುವವರು ಇರೋವರೆಗೂ ಮೋಸ ಮಾಡೋರು ಇರ್ತಾರೆ ಅನ್ನೋ ಮಾತು ಇಲ್ಲಿ ನಿಜವಾಗಿದೆ.

ಅದಾಗಲೇ ಮದುವೆಯಾಗಿದ್ದ ವಂಚಕ ಖಾಸಗಿ ಬಸ್​​ ಚಾಲಕನೊರ್ವ ಎಂ.ಎ ಪದವೀಧರೆಯೊಂದಿಗೆ ಪ್ರೀತಿ-ಪ್ರೇಮದ ನಾಟಕವಾಡಿ ಆಕೆಯನ್ನು ಮದುವೆಯಾಗಿ ಇದೀಗ ಚಿತ್ರಹಿಂಸೆ ನೀಡಿ ಮನೆಯಿಂದ ಹೊರಹಾಕಿದ್ದು, ದಾರಿ ಕಾರಣ ಯುವತಿ ನ್ಯಾಯಕೋರಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾಳೆ.
ತುಮಕೂರಿನ ಚಿಕ್ಕನಾಯಕನಹಳ್ಳಿ ಮಂಜುಳಾ ಹೀಗೆ ಮೋಸ ಹೋದ ಮಹಿಳೆ. ಈಕೆ ವ್ಯಾಸಂಗ ಮಾಡುತ್ತಿದ್ದಾಗ ಪಿಕ್​​ನಿಕ್​ಗೆ ಹೋದಾಗ ಖಾಸಗಿ ಬಸ್ ಚಾಲಕ ರಂಗನಾಥಸ್ವಾಮಿ ಎಂಬಾತನ ಪರಿಚಯವಾಗಿತ್ತು. ಪರಿಚಯ ಸ್ನೇಹ-ಪ್ರೇಮಕ್ಕೆ ತಿರುಗಿದೆ. ಆದರೇ ರಂಗನಾಥಸ್ವಾಮಿ ತನಗೆ ಅದಾಗಲೇ ಮದುವೆಯಾಗಿರುವ ವಿಚಾರವನ್ನು ಆಕೆಯಿಂದ ಮುಚ್ಚಿಟ್ಟಿದ್ದಾನೆ. ಬಳಿಕ ಮಂಜುಳಾ ಮದುವೆಗೂ ಮುನ್ನವೇ ಗರ್ಭಿಣಿಯಾಗಿದ್ದು, ಈ ವಿಚಾರ ಬೆಳಕಿಗೆ ಬಂದಾಗ ಪೊಲೀಸರಿಗೆ ಹೆದರಿ ಆಕೆಯನ್ನು ಮದುವೆಯಾಗಿದ್ದಾನೆ. ಆದರೇ ಆತ ಮಂಜುಳಾಳನ್ನು ಎರಡನೇ ಮದುವೆಯಾದಾಗಿನಿಂದಲೂ ಆಕೆಗೆ ಕಿರುಕುಳ ನೀಡುತ್ತ ಬಂದಿದ್ದಾನೆ. ಮೊದಲ ಪತ್ನಿಯೊಂದಿಗೆ ಸೇರಿಕೊಂಡು ಮಂಜುಳಾಗೆ ಚಿತ್ರಹಿಂಸೆ ನೀಡಿದ್ದಾನೆ. ಮಂಜುಳಾಗೆ ಕಬ್ಬಿಣದ ರಾಡ್​​ನಿಂದ ಬರೆಹಾಕಿದ್ದು, ಕೈಕಾಲು ಕಟ್ಟಿಹಾಕಿ ಇಸ್ತ್ರಿಪೆಟ್ಟಿಗೆಯಿಂದ ಮರ್ಮಾಂಗಕ್ಕೆ ಬರೆ ಹಾಕಿದ್ದಾರೆ. ಲವ್​ ಮ್ಯಾರೇಜ್ ಆಗಿರೋದರಿಂದ ಮಂಜುಳಾಗೆ ಹೆತ್ತವರ ಸಹಕಾರವೂ ಸಿಗದೇ ಆಕೆ ಅನಾಥಳಾಗಿದ್ದು, ಚಿಕ್ಕನಾಯಕನಹಳ್ಳಿ ಪೊಲೀಸರ ಮೊರೆ ಹೋಗಿದ್ದಾಳೆ. ಒಟ್ಟಿನಲ್ಲಿ ಪ್ರೀತಿ-ಪ್ರೇಮಕ್ಕೆ ಯುವತಿ ಜೀವನ ಹಾಳಾಗಿರೋದಂತು ಸತ್ಯ.