ಕ್ಯಾಮರಾ ಎದುರಲ್ಲೇ MLA, ಅಭಿಮಾನಿ ಮಾಡಿದ್ದೇನು ಗೊತ್ತಾ? ನೀವು ನೋಡಿದ್ರಿ ಅಚ್ಚರಿಗೊಳ್ತಿರಾ!

ರಾಜಕಾರಣಿಗಳ ಜೊತೆ ಸದಾ ಅವರ ಹಿಂಬಾಲಕರು ಇದ್ದೇ ಇರ್ತಾರೆ. ಅದರಲ್ಲೂ ಚುನಾವಣೆ ವೇಳೆಯಲ್ಲಂತೂ ನಮ್ಮ ಎಮ್​.ಎಲ್​.ಎ , ಎಂಪಿಗಳ ಅಭಿಮಾನಿಗಳು ಸದಾಕಾಲ ತಮ್ಮ ನಾಯಕನ ಸುತ್ತವೇ ಸುತ್ತುತ್ತಿರುತ್ತಾರೆ.

ಹೀಗೆ ನಾಯಕನ ಸುತ್ತವೇ ಇರೋ ಅಭಿಮಾನಿಗಳು ಒಂದೊಂದು ಸಲ ನೀವು ಊಹಿಸಲು ಸಾಧ್ಯವೇ ಇಲ್ಲದ ಕೆಲಸ ಮಾಡ್ತಾರೆ. ಅಂತಹುದೇ ಘಟನೆಯೊಂದು ತುಮಕೂರಿನಲ್ಲಿ ನಡೆದಿದೆ. ಅದೇನು ಅಂದ್ರಾ ನೀವೆ ನೋಡಿ. ತುಮಕೂರಿನ ಕುಣಿಗಲ್ ಶಾಸಕರಾದ ಡಿ.ನಾಗರಾಜಯ್ಯ ಅದಾಗಲೇ ಚುನಾವಣೆಗೆ ಸಿದ್ಧವಾಗಿದ್ದು, ಅಲ್ಲಲ್ಲಿ ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ಬಿರು ಬೇಸಿಗೆಯನ್ನು ಲೆಕ್ಕಿಸದ ಎಮ್​ಎಲ್​ಎ ತಮ್ಮ ಕ್ಷೇತ್ರದಲ್ಲಿ ಪ್ರಚಾರದಲ್ಲಿ ತೊಡಗಿದ್ದರು. ಒಂದೆಡೆ ಚುನಾವಣೆಯ ಕಾವು ಇನ್ನೊಂದೆಡೆ ಬಿರಬೇಸಿಗೆ. ಎಲ್ಲವೂ ಸೇರಿ ನಾಗರಾಜಯ್ಯ ಬೆವರಿ ನೀರಾಗಿ ಹೋಗಿದ್ದರು.

ಇದನ್ನು ಸಹಿಸದ ಅವರ ಅಭಿಮಾನಿ ಭಕ್ತನೊಬ್ಬ ಅವರು ಮೀಡಿಯಾ ಜೊತೆ ಮಾಡನಾಡುತ್ತಿರುವಾಗಲೇ ಅವರ ಮುಖದ ಬೆವರು ಒರೆಸಿ ಅಭಿಮಾನ ಮೆರೆದಿದ್ದಾನೆ. ಇನ್ನು ಹಿಂಬಾಲಕನ ಈ ಪ್ರೀತಿಗೆ ಎಮ್​ಎಲ್​ಎ ಒಮ್ಮೆ ಕಂಗಾಲಾಗಿದ್ದು, ಜೊತೆಗಿದ್ದ ಇತರ ಮುಖಂಡರು-ಅಭಿಮಾನಿಗಳು ಅವಾಕ್ಕಾಗಿದ್ದಾರೆ. ಇದೀಗ ಈ ಅಭಿಮಾನ ಪರಾಕಾಷ್ಠೆಯ ವಿಶ್ಯುವಲ್ಸ್​​ ಸಖತ್ ವೈರಲ್ ಆಗಿದ್ದು, ಜನರು ಎಮ್​ಎಲ್​ಎ ಬೆಂಬಲಿಗರ ಈ ವರ್ತನೆ ನೋಡಿ ಅಚ್ಚರಿಗೊಳ್ಳುತ್ತಿದ್ದಾರೆ.